ಅಯೋಧ್ಯೆಯ ರಸ್ತೆಗಳ ನಾಮಫಲಕಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಸಿರಿ ‘ಕನ್ನಡ’: 22 ಭಾರತೀಯ ಭಾಷೆ ಹಾಗೂ 6 ವಿದೇಶೀ ಭಾಷೆಗಳಿಗೆ ಸ್ಥಾನ
ಲಖನೌ: ಭಾರತೀಯ ಮತ್ತು ಸಾಗರೋತ್ತರ ಪ್ರವಾಸಿಗರ ಅನುಕೂಲಕ್ಕಾಗಿ ಅಯೋಧ್ಯೆಯ ಪ್ರಮುಖ ಸ್ಥಳಗಳಲ್ಲಿ ನಾಮ ಫಲಕಗಳನ್ನು ಹಾಕಲಾಗುತ್ತಿದ್ದು ಒಟ್ಟು 28 ಭಾಷೆಗಳಲ್ಲಿ ಬರೆಯಲಾಗಿದೆ. ಇದರಲ್ಲಿ 22 ಭಾರತೀಯ ಭಾಷೆಗಳಾದರೆ ಆರು ವಿದೇಶಿ ಭಾಷೆಗಳಿವೆ. ಸಂಕೇತಗಳು ಭಾರತೀಯ ಸಂವಿಧಾನದ 8 ನೇ ಶೆಡ್ಯೂಲ್ ನಲ್ಲಿ ಉಲ್ಲೇಖಿಸಲಾದ 22 ಭಾರತೀಯ ಭಾಷೆಗಳಲ್ಲಿ ಮತ್ತು ಯುಎನ್ (ಯುನೈಟೆಡ್ ನೇಷನ್ಸ್) ನ ಆರು ಅಧಿಕೃತ ಭಾಷೆಗಳಲ್ಲಿವೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ಅರೇಬಿಕ್, ಚೈನೀಸ್, ಫ್ರೆಂಚ್, ಇಂಗ್ಲಿಷ್, ರಷ್ಯನ್ ಮತ್ತು ಸ್ಪ್ಯಾನಿಷ್ ವಿದೇಶೀ ಭಾಷೆಗಳು […]
ಕೊಡವೂರು: ಜ.21 ರಂದು ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಮುದ್ದುರಾಮ ಹಾಗೂ ಶ್ರೀರಾಮನ ಚಿತ್ರಕಲಾ ಸ್ಪರ್ಧೆ
ಕೊಡವೂರು: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ (SASS) ಇದರ ಜಿಲ್ಲಾ ಘಟಕ, ಜಿಲ್ಲಾ ಮಹಿಳಾ ಘಟಕ, ಕೊಡವೂರು, ಶ್ರೀ ಶಿರಡಿ ಸಾಯಿಬಾಬಾ ಮಂದಿರ ತೋಟದಮನೆ ಮತ್ತು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಇವರ ಜಂಟಿ ಆಶ್ರಯದಲ್ಲಿ, ಜ.21 ರಂದು ಕೊಡವೂರಿನ ಶ್ರೀಶಿರಡಿಸಾಯಿಬಾಬಾ ಮಂದಿರದಲ್ಲಿ “ಶ್ರೀ ರಾಮೋತ್ಸವ” ಕಾರ್ಯಕ್ರಮವು ನಡೆಯಲಿದ್ದು ಶಾಲಾ ವಿದ್ಯಾರ್ಥಿಗಳಿಗಾಗಿ ಮುದ್ದುರಾಮ ಸ್ಪರ್ಧೆ ಹಾಗೂ ಪ್ರಭು ಶ್ರೀರಾಮನ ಚಿತ್ರ ಬಿಡಿಸುವ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯೂ ನಡೆಯಲಿರುವುದು. ಸ್ಪರ್ಧೆಗಾಗಿ ಹೆಸರು ನೋಂದಾಯಿಸಲು ಬಯಸುವ ವಿದ್ಯಾರ್ಥಿಗಳು ಜ.18 […]
ಸುಶ್ರೀಂದ್ರತೀರ್ಥ ಸ್ವಾಮೀಜಿಗಳಿಂದ ಶ್ರೀವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ
ಉಡುಪಿ: ಪೊಡವಿಗೊಡೆಯ ಶ್ರೀಕೃಷ್ಣ ಮತ್ತು ಶ್ರೀಮುಖ್ಯಪ್ರಾಣ ದೇವರ ಪೂಜಾ ದ್ವೈವಾರ್ಷಿಕ ಪರ್ಯಾಯದ ಶುಭಸಂದರ್ಭದಲ್ಲಿ ಶ್ರೀ ಪುತ್ತಿಗೆ ಉಪೇಂದ್ರತೀರ್ಥ ಸಂಸ್ಥಾನದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು, ಮಟ್ಟು ಶ್ರೀವಿಷ್ಣುಮೂರ್ತಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಮಹೋತ್ಸವಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಟ್ಟು ಲಕ್ಷ್ಮೀನಾರಾಯಣ ರಾವ್ ಮತ್ತು ಅರ್ಚಕರಾದ ಪ್ರದ್ಯುಮ್ನ ಆಚಾರ್ ಶ್ರೀಪಾದರನ್ನು ಸ್ವಾಗತಿಸಿದರು. ಸ್ಥಳೀಯರಾದ ಕೇಶವ ಸುವರ್ಣ ,ಲಕ್ಷ್ಮೀಕಾಂತ ರಾವ್,ಗಣೇಶ ರಾವ್,ಹರ್ಷಿತ್ ,ದೇವರಾವ್ ಹಾಗೂ ಟ್ರಸ್ಟಿಗಳಾದ ಶ್ರೀಕಾಂತ್ ರಾವ್, ಮೀರಾ ಪೂಜಾರಿ […]
ದಸರಾ ಕ್ರೀಡಾಕೂಟ ನಗದು ಪುರಸ್ಕಾರ ಪಾವತಿಯಾಗದಿದ್ದಲ್ಲಿ ಮಾಹಿತಿ ನೀಡಿ
ಉಡುಪಿ: ದಸರಾ ಕ್ರೀಡಾಕೂಟ ಮುಖ್ಯಮಂತ್ರಿ ಕಪ್ -2023 ರಲ್ಲಿ ಪಾಲ್ಗೊಂಡು ಪದಕ ಪಡೆದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರದ ಮೊತ್ತವನ್ನು ಸಂಬಂಧಪಟ್ಟ ಕ್ರೀಡಾಪಟುಗಳ ಖಾತೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮೂಲಕ ವರ್ಗಾಯಿಸಲಾಗಿದ್ದು, ಇದರಲ್ಲಿ ಕೆಲವು ಕ್ರೀಡಾಪಟುಗಳ ಬ್ಯಾಂಕ್ ವಿವರ ಸರಿಯಾಗಿ ನಮೂದಿಸದ ಹಾಗೂ ಬ್ಯಾಂಕ್ ಖಾತೆ ಸರಿಯಲ್ಲದ ಕಾರಣ ಹಣ ಪಾವತಿಯಾಗಿರುವುದಿಲ್ಲ ಆದ್ದರಿಂದ ದಸರಾ ಕ್ರೀಡಾಕೂಟ ಮುಖ್ಯಮಂತ್ರಿ ಕಪ್ -2023 ರಲ್ಲಿ ಪಾಲ್ಗೊಂಡು ಪದಕ ಪಡೆದ ಜಿಲ್ಲೆಯ ಕ್ರೀಡಾಪಟುಗಳು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ, ನಗದು ಪುರಸ್ಕಾರ ಪಾವತಿಯಾಗದೇ […]
ಸಿ.ಎ ಫೈನಲ್-ಇಂಟರ್ ಮೀಡಿಯೆಟ್ ಫಲಿತಾಂಶ: ತ್ರಿಶಾ ವಿದ್ಯಾರ್ಥಿಗಳು ಉತ್ತೀರ್ಣ
ಉಡುಪಿ: ಐ.ಸಿ.ಎ.ಐ ನಡೆಸುವ ಸಿ.ಎ ಫೈನಲ್ ಪರೀಕ್ಷೆಯಲ್ಲಿ ಯಶಸ್ವಿ ಶೆಟ್ಟಿ, ಧನೋಶ್ ರಾವ್ ಎಚ್. , ಶ್ರೀನಿಧಿ ಎಂ.ಎಂ , ತೃಪ್ತಿ ಸಕಲ್ಕರ್ , ನೀರಜಾ ಸುವರ್ಣ, ನವ್ಯ, ವಿಯೋನಾ ಪರ್ವೀನ್ ಡಿ. ಅಲ್ಮೇಡಾ, ಸುಬ್ರಹ್ಮಣ್ಯ ಎಸ್ ಭಟ್, ಸುಜಿತ್ ಅಡಿಗ, ಆನ್ಸಿಟಾ ಓಶಿನ್ ಡಿಸೋಜಾ , ಅರ್ಪಿತಾ ಮುರಳೀಧರ ಭಟ್, ರಾಷ್ಟ್ರಿತ್.ಸಿ , ಜೆನಿ ವಿ ಪೆರೇರಾ, ವಿಪ್ತಾ ವಿ ಸನಿಲ್, ಅಖಿಲೇಶ್, ಇಶಾ ಪೈ, ಸೂಕ್ಷ್ಮ ಎಸ್ ಆಚಾರ್ಯ, ಕೀರ್ತನಾ ಕಾಮತ್, ಪ್ರಿಯಾಂಕಾ ಶ್ರುತಿ […]