ಸುಶ್ರೀಂದ್ರತೀರ್ಥ ಸ್ವಾಮೀಜಿಗಳಿಂದ ಶ್ರೀವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ

ಉಡುಪಿ: ಪೊಡವಿಗೊಡೆಯ ಶ್ರೀಕೃಷ್ಣ ಮತ್ತು ಶ್ರೀಮುಖ್ಯಪ್ರಾಣ ದೇವರ ಪೂಜಾ ದ್ವೈವಾರ್ಷಿಕ ಪರ್ಯಾಯದ ಶುಭಸಂದರ್ಭದಲ್ಲಿ ಶ್ರೀ ಪುತ್ತಿಗೆ ಉಪೇಂದ್ರತೀರ್ಥ ಸಂಸ್ಥಾನದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು, ಮಟ್ಟು ಶ್ರೀವಿಷ್ಣುಮೂರ್ತಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಮಹೋತ್ಸವಕ್ಕೆ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಟ್ಟು ಲಕ್ಷ್ಮೀನಾರಾಯಣ ರಾವ್ ಮತ್ತು ಅರ್ಚಕರಾದ ಪ್ರದ್ಯುಮ್ನ ಆಚಾರ್ ಶ್ರೀಪಾದರನ್ನು ಸ್ವಾಗತಿಸಿದರು.

ಸ್ಥಳೀಯರಾದ ಕೇಶವ ಸುವರ್ಣ ,ಲಕ್ಷ್ಮೀಕಾಂತ ರಾವ್,ಗಣೇಶ ರಾವ್,ಹರ್ಷಿತ್ ,ದೇವರಾವ್ ಹಾಗೂ ಟ್ರಸ್ಟಿಗಳಾದ ಶ್ರೀಕಾಂತ್ ರಾವ್, ಮೀರಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.