ಸಿ.ಎ ಫೈನಲ್-ಇಂಟರ್ ಮೀಡಿಯೆಟ್ ಫಲಿತಾಂಶ: ತ್ರಿಶಾ ವಿದ್ಯಾರ್ಥಿಗಳು ಉತ್ತೀರ್ಣ

ಉಡುಪಿ: ಐ.ಸಿ.ಎ.ಐ ನಡೆಸುವ ಸಿ.ಎ ಫೈನಲ್ ಪರೀಕ್ಷೆಯಲ್ಲಿ ಯಶಸ್ವಿ ಶೆಟ್ಟಿ, ಧನೋಶ್ ರಾವ್ ಎಚ್. , ಶ್ರೀನಿಧಿ ಎಂ.ಎಂ , ತೃಪ್ತಿ ಸಕಲ್ಕರ್ , ನೀರಜಾ ಸುವರ್ಣ, ನವ್ಯ, ವಿಯೋನಾ ಪರ್ವೀನ್ ಡಿ. ಅಲ್ಮೇಡಾ, ಸುಬ್ರಹ್ಮಣ್ಯ ಎಸ್ ಭಟ್, ಸುಜಿತ್ ಅಡಿಗ, ಆನ್ಸಿಟಾ ಓಶಿನ್ ಡಿಸೋಜಾ , ಅರ್ಪಿತಾ ಮುರಳೀಧರ ಭಟ್, ರಾಷ್ಟ್ರಿತ್.ಸಿ , ಜೆನಿ ವಿ ಪೆರೇರಾ, ವಿಪ್ತಾ ವಿ ಸನಿಲ್, ಅಖಿಲೇಶ್, ಇಶಾ ಪೈ, ಸೂಕ್ಷ್ಮ ಎಸ್ ಆಚಾರ್ಯ, ಕೀರ್ತನಾ ಕಾಮತ್, ಪ್ರಿಯಾಂಕಾ ಶ್ರುತಿ ನೊರೊನ್ಹಾ, ಸವಿತಾ ಶೆಣೈ ಏ., ಅಂಕಿತಾ ಕಲ್ಲಪ್ಪ ಉತ್ತೀರ್ಣರಾಗಿದ್ದಾರೆ.

ಇವರು ತಮ್ಮ ಸಿ.ಪಿ.ಟಿ ಹಾಗೂ ಇಂಟರ್ಮೀಡಿಯೆಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ನಲ್ಲಿ ಪಡೆದುಕೊಂಡಿದ್ದಾರೆ.

ಸಿ. ಎ ಇಂಟರ್ಮೆಡಿಯೇಟ್ ವಿಭಾಗದಲ್ಲಿ ಪರೀಕ್ಷೆ ಬರೆದ 232 ವಿದ್ಯಾರ್ಥಿಗಳಲ್ಲಿ127 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 54.74% ಫಲಿತಾಂಶ ದಾಖಲಿಸಿದ್ದಾರೆ. ಇಂಟರ್ಮಿಡಿಯೇಟ್ ನ ಎರಡು ಗ್ರೂಪ್ ಗಳಲ್ಲಿ 10 ವಿದ್ಯಾರ್ಥಿಗಳು ಮತ್ತು ಗ್ರೂಪ್ -1 ರಲ್ಲಿ 70 ಹಾಗೂ ಗ್ರೂಪ್ -2 ರಲ್ಲಿ 47 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್ ಹಾಗೂ ಆಡಳಿತ ಮಂಡಳಿ ಮತ್ತು ತ್ರಿಶಾ ವಿದ್ಯಾ ಕಾಲೇಜು ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪಾಂಶುಪಾಲರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.