ಅಸ್ಸಾಂ-ಅರುಣಾಚಲ ಗಡಿಯಲ್ಲಿ ಗುಂಡಿನ ದಾಳಿ ಇಬ್ಬರಿಗೆ ಗಾಯ ಇಬ್ಬರು ಸಾವು
ಗುವಾಹಟಿ: ಅಸ್ಸಾಂ-ಅರುಣಾಚಲಪ್ರದೇಶದ ಗಡಿಯ ಪನ್ಬರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಮತ್ತಿಬ್ಬರು ಗಾಯಗೊಂಡಿದ್ದಾರೆ. ಧೇಮಾಜಿಯ ಹಲವು ಪ್ರದೇಶಗಳಲ್ಲಿ ಇದುವರೆಗೆ ಅಸ್ಸಾಂ ಹಾಗೂ ಅರುಣಾಚಲಪ್ರದೇಶದ ನಡುವಿನ ಗಡಿಯನ್ನು ಗುರುತಿಸಿಲ್ಲ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ. ”ಸಾಮಾನ್ಯವಾಗಿ, ನೆರೆಯ ರಾಜ್ಯ ನಮ್ಮ ಮೇಲೆ ಯಾವುದೇ ದಾಳಿ ಮಾಡುತ್ತಿಲ್ಲ. ಆದರೆ, ನೆರೆಯ ರಾಜ್ಯದ ಕೆಲವರು ಭೂಮಿ ವಶಪಡಿಸಿಕೊಳ್ಳುವ ದುರಾಸೆಯಿಂದ ಇಂತಹ ಚಟುವಟಿಕೆಗಳಲ್ಲಿ […]
ರಾಯರು ಬಂದರು ಮನೆಗೆ ಕನ್ನಡದಲ್ಲಿ ಬರ್ತಿದೆ ಗುಜರಾತಿ ಸಿನೆಮಾ…
ಸುಧಾರಾಣಿ ಹಾಗೂ ಆನಂದ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಹಾಗೂ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದ್ದ ಮೈಸೂರು ಮಲ್ಲಿಗೆ ಸಿನಿಮಾದ ಗೀತೆ ಇದಾಗಿದೆ. ಮೈಸೂರು ಮಲ್ಲಿಗೆ ಚಿತ್ರ 1992ರಲ್ಲಿ ಬಿಡುಗಡೆಯಾಗಿತ್ತು. ಖ್ಯಾತ ನಿರ್ದೇಶಕ ಎಸ್. ನಾಗಾಭರಣ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಸುಧಾರಾಣಿ, ಗಿರೀಶ್ ಕಾರ್ನಾಡ್, ಮಂಜು, ಸುಂದರರಾಜ್, ದತ್ತಣ್ಣ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ರಾಯರು ಬಂದರು ಮಾವನ ಮನೆಗೆ.. ಕನ್ನಡದ ಎವರ್ ಗ್ರೀನ್ ಹಾಡುಗಳಲ್ಲೊಂದು. ಇದೇ ರಾಯರು ಬಂದರು ಮಾವನ ಮನೆಗೆ ಹಾಡಿನ ಸಾಲಿನ ಶೀರ್ಷಿಕೆಯಡಿ ಸಿನೆಮಾವೊಂದು […]
ಹೊಸ ಜರ್ಸಿಯಲ್ಲಿ ಟೀಂ ಇಂಡಿಯಾ ಆಟಗಾರರ ಫೋಟೋಶೂಟ್:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್
ಲಂಡನ್: ಲಂಡನ್ನ ಓವೆಲ್ನಲ್ಲಿ ಜೂನ್ 7 ರಿಂದ 11 ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಡೆಯಲಿದೆ . ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಡೆಸುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದೆ. ಭಾರತ ತಂಡದ ಆಟಗಾರರು ಈ ಜರ್ಸಿಯಲ್ಲಿ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭಮನ್ ಗಿಲ್, ಆರ್.ಅಶ್ವಿನ್, ರವೀಂದ್ರ ಜಡೇಜಾ ಮತ್ತು ಇತರ ಆಟಗಾರರ ಫೋಟೋಗಳನ್ನು ಬಿಸಿಸಿಐ ಮತ್ತು ಐಸಿಸಿ ಸಾಮಾಜಿಕ ಜಾಲತಾಣದಲ್ಲಿ […]
ಐಪಿಎಲ್ ಫೈನಲ್ನಲ್ಲಿ ಧೋನಿಯಿಂದ ವಿಕೆಟ್ ಕೀಪಿಂಗ್ ಸಲಹೆ ಪಡೆದಿದ್ದೆ ಎಂದ ಶ್ರೀಕರ್ ಭರತ್
ಭಾರತದ ಉದಯೋನ್ಮುಖ ಕ್ರಿಕೆಟ್ ಆಟಗಾರ, ವಿಕೆಟ್ ಕೀಪರ್ ಶ್ರೀಕರ್ ಭರತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಧೋನಿಯಿಂದ ಸಲಹೆ ಪಡೆದಿದ್ದೇನೆ ಎಂದಿದ್ದಾರೆ. ಐಪಿಎಲ್ ಫೈನಲ್ನಲ್ಲಿ ಧೋನಿ ಅವರೊಂದಿಗೆ ಮಾತನಾಡಿ ಕೀಪಿಂಗ್ ಸಲಹೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಭರತ್ ಐಸಿಸಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಭಾರತದ ಮಾಜಿ ನಾಯಕ ಧೋನಿ ನಾಯಕರಾಗಿ ಎಷ್ಟು ಯಶಸ್ವಿಯೋ ಅದರ ಎರಡು ಪಟ್ಟು ವಿಕೆಟ್ ಕೀಪಿಂಗ್ನಲ್ಲಿ ಯಶ ಸಾಧಿಸಿದ್ದಾರೆ. 41 ವರ್ಷದ ಮಾಹಿ ವಿಕೆಟ್ ಹಿಂದೆ ಈಗಲೂ ಪಾದರಸದಂತೆ ಚುರುಕು. ಬ್ಯಾಟರ್ ಒಂದು ಕ್ಷಣ ಕಾಲನ್ನು […]
ಗೂಫಿ ಪೈಂಟಲ್ ಮಹಾಭಾರತದ ‘ಶಕುನಿ’ ಪಾತ್ರಧಾರಿ ನಿಧನ
ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಗೂಫಿ ಅವರನ್ನು ವಾರಗಳ ಹಿಂದೆ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಅವರು ಮೃತಪಟ್ಟಿದ್ದಾರೆ. ಅವರ ಸೋದರ ಸಂಬಂಧಿ ಹಿತೇನ್ ಪೈಂತಲ್ ಅವರು ಈ ನೋವಿನ ಸಂಗತಿ ಹಂಚಿಕೊಂಡಿದ್ದಾರೆ. ದುರದೃಷ್ಟವಶಾತ್ ಗೂಫಿ ಇನ್ನಿಲ್ಲ. ಅವರು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ನಿಧನರಾದರು. ಯಾವುದೇ ನೋವಿಲ್ಲದೆ ಅವರು ಮೃತಪಟ್ಟರು’ ಎಂದು ಹಿತೇನ್ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಗೂಫಿಗೆ ಅನಾರೋಗ್ಯ ಕೈ ಕೊಟ್ಟ ಬಗ್ಗೆ ವರದಿ ಆಗಿತ್ತು. ಅವರು ಆಸ್ಪತ್ರೆಯಿಂದ […]