ಸಾಮಾನ್ಯ ಪಾಸ್ ಪೋರ್ಟ್ ಗಾಗಿ ರಾಹುಲ್ ಗಾಂಧಿಗೆ ಎನ್.ಒ.ಸಿ ನೀಡಿದ ದೆಹಲಿ ನ್ಯಾಯಾಲಯ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಒಪ್ಪಿಸಿದ್ದು, ಹತ್ತು ವರ್ಷ ಕಾಲಾವಧಿಗೆ ಹೊಸ ಪಾಸ್ ಪೋರ್ಟ್ ನೀಡಲು ಅನುವಾಗುವಂತೆ ನಿರಾಕ್ಷೇಪಣಾ ಪತ್ರಕ್ಕಾಗಿ ದೆಹಲಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಇದಕ್ಕೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣ್ಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ “ಸಾಮಾನ್ಯ ಪಾಸ್‌ಪೋರ್ಟ್” ನೀಡುವುದಕ್ಕಾಗಿ ದೆಹಲಿ ನ್ಯಾಯಾಲಯವು ಶುಕ್ರವಾರ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ರೂಸ್ ಅವೆನ್ಯೂ ನ್ಯಾಯಾಲಯವು […]

ಬಜರಂಗದಳ, ಆರ್.ಎಸ್.ಎಸ್ ಬ್ಯಾನ್ ಮಾಡುತ್ತೇವೆ ಎಂದ ಪ್ರಿಯಾಂಕ್ ಖರ್ಗೆ ವಿರುದ್ಧ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್ ವಾಗ್ದಾಳಿ

ಕಾಪು: ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕ್ ಖರ್ಗೆ, ಪಕ್ಷ ಚುನಾವಣೆ ಗೆದ್ದ ಅಮಲಿನಲ್ಲಿ ಬಜರಂಗ ದಳದ ಒಟ್ಟಿಗೆ ಆರ್ ಎಸ್ ಎಸ್ ನ್ನೂ ಬ್ಯಾನ್ ಮಾಡುತ್ತೇವೆ ಎನ್ನುವ ಮೂರ್ಖತನದ ಹೇಳಿಕೆ ನೀಡಿದ್ದು ಇದು ಖಂಡನೀಯ ಎಂದು ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಹೇಳಿದ್ದಾರೆ. ಬಜರಂಗದಳ ಆರ್.ಎಸ್.ಎಸ್ ಇವೆರಡನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇದೆಯೇ ಎನ್ನುವುದನ್ನು ಮೊದಲಿಗೆ ಸರಿಯಾಗಿ ಅಧ್ಯಯನ ಮಾಡಿಲಿ, ನಂತರ ಹೇಳಿಕೆ ಕೊಡಲಿ. ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಇಷ್ಟೂ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲವೇ […]

ಕಾರ್ಕಳ: ಸೀರೆಯ ಜೋಕಾಲಿ ಕತ್ತಿಗೆ ಸಿಲುಕಿ ಹಾರಿಹೋಯ್ತು ಬಾಲಕಿಯ ಪ್ರಾಣಪಕ್ಷಿ

ಕಾರ್ಕಳ: ಜೋಕಾಲಿ ಆಟದಲ್ಲಿ ನಿರತರಾಗಿದ್ದಾಗ ಕುತ್ತಿಗೆಗೆ ಸೀರೆ ಸುತ್ತಿಕೊಂಡ ಪರಿಣಾಮ ಬಾಲಕಿಯೊಬ್ಬಳು ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ನಿಟ್ಟೆ  ಗ್ರಾಮದ ಕೆಮ್ಮಣ್ಣು ಅಂತೊಟ್ಟು ಎಂಬಲ್ಲಿ ಸಂಭವಿಸಿದೆ ಅಂತೊಟ್ಟು ನಿವಾಸಿ ಲಕ್ಷ್ಮಣ್ ಪೂಜಾರಿ ಎಂಬವರ ಮಗಳು ಮಾನ್ವಿ (9) ಎಂಬ ಬಾಲಕಿ ಮೇ 26ರ ಸಂಜೆ ಹೊತ್ತಿಗೆ ಚಿಕ್ಕಪ್ಪ ಉದಯ ಪೂಜಾರಿ ಎಂಬವರ ಮನೆಯ ಬಳಿ  ಪಕ್ಕದ್ ಮನೆಯ ದೀಕ್ಷಾ ಎಂಬಾಕೆಯ ಜೊತೆ ಸೀರೆಯನ್ನು ಕಟ್ಟಿ ಜೋಕಾಲಿ ಆಟ ಆಡುವಾಗ ಆಕಸ್ಮಿಕವಾಗಿ ಜೋಕಾಲಿಗೆ ಕಟ್ಟಿದ ಸೀರೆ ಆಕೆಯ […]

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ವಾಪಸಾತಿ: ಮೇ 29 ರಿಂದ BGMI ಎಲ್ಲ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯ

ನವದೆಹಲಿ: ಭಾರತದಾದ್ಯಂತ ಲಕ್ಷಾಂತರ ಆಟಗಾರರು ಹಂಬಲಿಸಿ ಕಾಯುತ್ತಿರುವ ಘಳಿಗೆಯೊಂದು ಅಂತಿಮವಾಗಿ ಕೊನೆಗೊಂಡಿದೆ. ಕ್ರಾಫ್ಟನ್ ಇಂಡಿಯಾ ಇದೀಗ ದೇಶಾದ್ಯಂತ ಎಲ್ಲಾ ಅಭಿಮಾನಿಗಳಿಗಾಗಿ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಸಂಸ್ಥೆಯ ಪ್ರಕಟಣೆಯ ಪ್ರಕಾರ, ಆಟವು ಸೋಮವಾರ, ಮೇ 29, 2023 ರಿಂದ ಎಲ್ಲಾ ಮೊಬೈಲ್ ಗಳಲ್ಲಿ ಆಡಲು ಲಭ್ಯವಿರುತ್ತದೆ. ಹೆಚ್ಚುವರಿಯಾಗಿ, ಆಟವು ಈಗ Android ಸಾಧನಗಳಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಮೇ 29 ರಂದು ಮಾತ್ರ ಐಒಎಸ್ ಬಳಕೆದಾರರಿಗೆ ಆಟವು ಡೌನ್‌ಲೋಡ್ ಮಾಡಲು […]

ಕೆಮ್ಮಣ್ಣು: ಗಣಪತಿ ಸಹಕಾರಿ ವ್ಯವಸಾಯಕ ಸಂಘದ ನೂತನ ಕಟ್ಟಡ ‘ಸಹಕಾರ ಸದನ’ ಉದ್ಘಾಟನೆ

ಕೆಮ್ಮಣ್ಣು: ನೂರು ವರ್ಷಗಳ ಇತಿಹಾಸವಿರುವ ಗಣಪತಿ ಸಹಕಾರಿ ವ್ಯವಸಾಯಕ ಸಂಘದ ನೂತನ ಕಟ್ಟಡ ‘ಸಹಕಾರ ಸದನ’ ವನ್ನು ಬಡಾನಿಡಿಯೂರು ಗ್ರಾಮದಲ್ಲಿ ಶನಿವಾರದಂದು ಉದ್ಘಾಟಿಸಲಾಯಿತು. ನೂತನ ಕಟ್ಟಡವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಉದ್ಘಾಟಿಸಿದರು. ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ದೀಪ ಬೆಳಗಿಸಿದರು. ಸೈಂಟ್ ಆನ್ಸ್ ಚರ್ಚಿನ ಧರ್ಮಗುರುಗಳಾದ ರೆ.ಫಾ ಡೆನಿಸ್ ಡೇಸಾ ಹವಾನಿಯಂತ್ರಿತ ಕಟ್ಟಡವನ್ನು ಉದ್ಘಾಟಿಸಿದರು. ಭದ್ರತಾ ಕೊಠಡಿಯನ್ನು ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು. ಬ್ಯಾಂಕಿನ ಗೋದಾಮನ್ನು […]