ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಸನ್ಮಾನ

ಕಾಪು: ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸುರೇಶ್ ಶೆಟ್ಟಿ ಗುರ್ಮೆ ಯವರನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ರಾಷ್ಟ್ರಮಟ್ಟದ ಜೆ.ಇ.ಇ ಬಿ-ಪ್ಲಾನಿಂಗ್ ನಲ್ಲಿ ಕ್ರಿಯೇಟಿವ್‌ ಕಾಲೇಜಿಗೆ 2 ರ‍್ಯಾಂಕ್‌

ಕಾರ್ಕಳ: ಮೇ 2023 ರಲ್ಲಿ ನಡೆದ ರಾಷ್ಟ್ರಮಟ್ಟದ ಜೆ.ಇ.ಇ ಬಿ-ಪ್ಲಾನಿಂಗ್‌ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪಿ.ಯು ಕಾಲೇಜಿನ ವಿದ್ಯಾರ್ಥಿಗಳಾದ ವರುಣ್‌ ಜಿ ನಾಯಕ್‌ ಆಲ್‌ ಇಂಡಿಯಾ ರ‍್ಯಾಂಕಿಂಗ್ ನಲ್ಲಿ 656 ನೇ ಸ್ಥಾನ ಗಳಿಸಿದ್ದಾರೆ ಹಾಗೂ ಸುಮುಖ್‌ ಶೆಟ್ಟಿ ಜೆ.ಎಸ್‌ ಬಿ.ಆರ್ಕ್‌ ನಲ್ಲಿ 609 ನೇ ರ‍್ಯಾಂಕ್‌ ಗಳಿಸಿದ್ದಾರೆ. ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನಲ್ಲಿ ಹಾಗೂ ಕ್ರಿಯೇಟಿವ್‌ ಶೈಕ್ಷಣಿಕ ಸಹಭಾಗಿತ್ವದ ಹಾಸನದ ಹೆಚ್.ಕೆ.ಎಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಥಮ ಪಿ.ಯು.ಸಿ ಯಿಂದಲೇ ಅನುಭವಿ […]

ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ

ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆಯ ಸ್ಮರಣಾರ್ಥ 75 ರೂ.ಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುವುದಾಗಿ ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ. ನಾಣ್ಯದ ವಿಶೇಷತೆ:75 ರೂ.ಯ ವಿಶೇಷ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು, ಅದರ ಕೆಳಗಡೆ ‘ಸತ್ಯಮೇವ ಜಯತೆ’ ಎಂದು ಬರೆಯಲಾಗುತ್ತದೆ. ಎಡಭಾಗದಲ್ಲಿ ‘ಭಾರತ್’ ಎಂದು ದೇವನಾಗರಿ ಲಿಪಿ ಹಾಗೂ ಬಲ ಭಾಗದಲ್ಲಿ ‘ಇಂಡಿಯಾ’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ. ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂ. ಚಿಹ್ನೆಯೊಂದಿಗೆ 75 ಎಂದು […]

ಉಡುಪಿ: ವಿಕಲಚೇತನರ ವಿವಿಧ ಸಮಸ್ಯೆಗಳಿಗೆ ತಜ್ಞರಿಂದ ಸೂಕ್ತ ಪರಿಹಾರ 

ಉಡುಪಿ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿಕಲಚೇತನರಿಗೆ ವಾರದಲ್ಲಿ 2 ದಿನ (ಸೋಮವಾರ ಹಾಗೂ ಗುರುವಾರ) ಉಚಿತ ಫಿಸಿಯೋಥೆರಫಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ಆಡಿಯೋಲಜಿಸ್ಟ್/ ಸ್ಪೀಚ್ ಥೆರಫಿಸ್ಟ್ ತಜ್ಞರಿಂದ ದೈಹಿಕ ನ್ಯೂನ್ಯತೆ, ಬುದ್ಧಿ ಮಾಂದ್ಯತೆ, ಮಾನಸಿಕ ಅಸ್ವಸ್ಥತೆ, ಕಲಿಕಾ ನ್ಯೂನ್ಯತೆ, ಆಟಿಸಂ, ವಿಕಲಚೇತನರ ಪೋಷಕರಿಗೆ ಆಪ್ತ ಸಮಾಲೋಚನೆ, ವಾಕ್ ಮತ್ತು ಶ್ರವಣ ನ್ಯೂನ್ಯತೆ ಹಾಗೂ ದೃಷ್ಠಿದೋಷಕ್ಕೆ ಸಂಬಂ ತರಬೇತಿಯನ್ನು ತಜ್ಞರಿಂದ ನಗರದ ಅಜ್ಜರಕಾಡು ರೆಡ್ ಕ್ರಾಸ್ ಭವನದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ […]

ಗ್ರಾಹಕ ಸಂರಕ್ಷಣಾ ಕಾಯ್ದೆ ಕುರಿತು ಗ್ರಾಹಕರಲ್ಲಿ ಜಾಗೃತಿ: ಫೋನ್ ಇನ್ ನೇರ ಪ್ರಸಾರ ಕಾರ್ಯಕ್ರಮ 

ಉಡುಪಿ: ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ವತಿಯಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜೂನ್ 1 ರಂದು ರಾತ್ರಿ 8 ರಿಂದ 8.30 ರ ವರೆಗೆ ಆಕಾಶವಾಣಿಯಲ್ಲಿ ಫೋನ್ ಇನ್ ನೇರ ಪ್ರಸಾರ ಕಾರ್ಯಕ್ರಮವು ನಡೆಯಲಿದ್ದು, ಗ್ರಾಹಕರು ಯಾವುದೇ ಪ್ರಶ್ನೆಗಳಿದ್ದಲ್ಲಿ ದೂರವಾಣಿ ಸಂಖ್ಯೆ: 080-22370477, 22370488 ಹಾಗೂ 22370499 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು ತಮ್ಮ ಪ್ರಶ್ನೆಗಳನ್ನು ಇ-ಮೇಲ್ consumergrievances.queries@gmail.com ಮೂಲಕವೂ ಮೇ 31 […]