ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನಾ ಕಾರ್ಯಕ್ರಮ

ಉಡುಪಿ: ರಥಬೀದಿಯ ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೆಯು ನಡೆಯಿತು. ಭಾನುವಾರ ಮುಂಜಾನೆಯಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ವಿಷ್ಣುಸಹಸ್ರನಾಮ ಪಾರಾಯಣ ನಡೆದವು. ಸಂಸ್ಕೃತ ಮಹಾಪಾಠಶಾಲೆಯ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣ ಆಚಾರ್ಯ ಹಾಗೂ ವಿದ್ವಾಂಸಹೆರ್ಗ ರವೀಂದ್ರ ಭಟ್ ಗುರುಗಳ ಸಂಸ್ಮರಣೆ ಮಾಡಿದರು. ಶ್ರೀ ಮಠದ ವಿದ್ವಾಂಸ ರಾಮಚಂದ್ರ ಭಟ್ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀಪಾದರ ಪಾದುಕೆಗೆ ಅರ್ಘ್ಯ ಪಾದ್ಯಾದಿಗಳನ್ನು ನೀಡಿ ಪುಷ್ಪಾರ್ಚನೆ ಮಾಡಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಠಕ್ಕೆ ಆಗಮಿಸಿ ನಮನವನ್ನು ಸಲ್ಲಿಸಿದರು. ಈ […]

ಸುರತ್ಕಲ್ ಹತ್ಯೆ ಪ್ರಕರಣ: ವಿಚಾರಣೆಗಾಗಿ 5 ಮಂದಿಯನ್ನು ವಶಕ್ಕೆ ಪಡೆದ ನಗರ ಪೊಲೀಸರು

ಸುರತ್ಕಲ್: ಇಲ್ಲಿನ ಕೃಷ್ಣಾಪುರ-ಕಾಟಿಪಳ್ಳದಲ್ಲಿ ಜಲೀಲ್ ಎನ್ನುವ ವ್ಯಕ್ತಿಯನ್ನು ಅವರ ಅಂಗಡಿಯಯಲ್ಲೇ ಚೂರಿ ಇರಿದು ಹತ್ಯೆ ಮಾಡಲಾದ ಪ್ರಕರಾಣದಲ್ಲಿ ತನಿಖೆ ಚುರುಕುಗೊಂಡಿದೆ. ಸುರತ್ಕಲ್ ಸಮೀಪದ ಕಾಟಿಪಳ್ಳ 4ನೇ ಬ್ಲಾಕ್‌ನಲ್ಲಿರುವ ಫ್ಯಾನ್ಸಿ ಸ್ಟೋರ್ ಮಾಲೀಕ ಅಬ್ದುಲ್ ಜಲೀಲ್ (45) ಅವರ ಅಂಗಡಿ ಬಳಿ ಶನಿವಾರ ರಾತ್ರಿ ನಡೆದ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಗರ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ನಾವು ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರನ್ನು ವಿಚಾರಣೆಗಾಗಿ ನಮ್ಮ ವಶಕ್ಕೆ […]

ಮುಕ್ತಾಂಜಲಿ ನಾಟ್ಯ ಸಂಸ್ಥೆ ವತಿಯಿಂತ ಕ್ರಿಸ್ ಮಸ್ ಸಂಭ್ರಮಾಚರಣೆ

ಮಣಿಪಾಲ: ಮುಕ್ತಾಂಜಲಿ ನಾಟ್ಯ ಸಂಸ್ಥೆ, ಮದರ್ ಎಂಡ್ ಚೈಲ್ಡ್ ಟ್ಯಾಲೆಂಟ್ ಶೋ ಹಾಗೂ ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ವತಿಯಿಂದ ಕ್ರಿಸ್ ಮಸ್ ಹಬ್ಬದ ಆಚರಣೆಯ ಪ್ರಯುಕ್ತ ಕಿಡ್ಜೀ ಮಕ್ಕಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮವು ಕಾರ್ಯಕ್ರಮವು ಡಿ.23 ರಂದು ಮಣಿಪಾಲದ ಹೋಟೇಲ್ ಆಶ್ಲೇಷ್ ಇದರ ವಜ್ರ ಹಾಲ್ ನಲ್ಲಿ ನಡೆಯಿತು. ಸಮಾರಂಭವನ್ನು ಬೆಲ್ ಒ ಸೀಲ್ ನ ನಿರ್ದೇಶಕಿ ಶ್ರೀಮತಿ ಸಪ್ನಾ ಜೆನಿಫರ್ ಸಾಲಿನ್ಸ್ ಉದ್ಘಾಟಿಸಿದರು. ಹಾಡು ನೀ ಹಾಡು ರಿಯಾಲಿಟಿ ಶೋನ ಮಾರ್ಗದರ್ಶಕ ಕೃಪಾ ಪ್ರಸೀದ್ […]

ಶಿರಿಯಾರ ಕಲ್ಮರ್ಗಿ ಜೈ ಗಣೇಶ್ ಸೊಸೈಟಿಯಲ್ಲಿ ಇ ಸ್ಟ್ಯಾಂಪ್ ಸೌಲಭ್ಯ ಆರಂಭ

ಬ್ರಹ್ಮಾವರ: ಇಲ್ಲಿನ ಶಿರಿಯಾರ ಕಲ್ಮರ್ಗಿ ಜೈ ಗಣೇಶ್ ಸೊಸೈಟಿಯಲ್ಲಿ ಇ ಸ್ಟ್ಯಾಂಪ್ ಸೌಲಭ್ಯ ಇತ್ತೀಚೆಗೆ ಆರಂಭಗೊಂಡಿತು. ವಕೀಲ ಶಿರಿಯಾರ ಕಲ್ಮರ್ಗಿ ಪ್ರಭಾಕರ್ ನಾಯಕ್ ದೀಪ ಬೆಳಗಿಸಿ ಇ ಸ್ಟ್ಯಾಂಪ್ ಗೆ ಚಾಲನೆ ನೀಡಿ, ಸೊಸೈಟಿಯಲ್ಲಿ ಆರಂಭಗೊಂಡಿರುವ ಈ ಸ್ಟ್ಯಾಂಪ್ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ಶಿವಾನಂದ ಶ್ಯಾನುಭಾಗ್, ದಿನೇಶ ಭಟ್ ಕಾರ್ಯಕ್ರಮ ನಡೆಸಿಕೊಟ್ಟರು.

ಮಲ್ಪೆ ಕಡಲ ತೀರದ ತೇಲುವ ಸೇತುವೆ ಪ್ರವಾಸಿಗರಿಗೆ ಮುಕ್ತ

ಮಲ್ಪೆ: ಇಲ್ಲಿನ ಕಡಲತೀರದಲ್ಲಿ ರಾಜ್ಯದ ಪ್ರಪ್ರಥಮ ತೇಲುವ ಸೇತುವೆಯನ್ನು ಶಾಸಕ ರಘುಪತಿ ಭಟ್ ಭಾನುವಾರದಂದು ಮತ್ತೊಮ್ಮೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಘುಪತಿ ಭಟ್ ಈ ರೀತಿಯ ಸೇತುವೆ ಕೇರಳದಲ್ಲಿ ಮಾತ್ರವಿದ್ದು, ಇದೀಗ ಕರ್ನಾಟಕದ ಮಲ್ಪೆಯೂ ತೇಲುವ ಸೇತುವೆಯನ್ನು ಹೊಂದಲಿದೆ. ಇದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಲಿದೆ ಎಂದರು. ಈ ವರ್ಷದ ಮೇ ತಿಂಗಳಲ್ಲಿ ಸೇತುವೆ ಉದ್ಘಾಟನೆಯಾಗಿದ್ದರೂ ಎರಡೇ ದಿನಗಳಲ್ಲಿ ಮುರಿದು ಬಿದ್ದು ಮಳೆಗಾಲದ ಹಿನ್ನೆಲೆಯಲ್ಲಿ ಕಳಚಿ ಇಡಲಾಗಿತ್ತು. ಆದರೆ ಈ ಬಾರಿ ಕೇರಳ ಮತ್ತು ಕರ್ನಾಟಕದ ತಜ್ಞರ […]