ಅಯೋಧ್ಯೆ ಪ್ರಭು ಶ್ರಿ ರಾಮಚಂದ್ರ ದಿಗ್ವಿಜಯ ಯಾತ್ರೆ ಸಂದರ್ಭದಲ್ಲಿ ಕ್ಷೀರಾಭಿಷೇಕ ಕಾರ್ಯಕ್ರಮ
ಉಡುಪಿ: ಅಖಿಲ ಭಾರತೀಯ ಸಂತ ಸಮಿತಿಯ ನೇತೃತ್ವದಲ್ಲಿ ಅಯೋಧ್ಯೆಯಿಂದ ಬರುವ ಪ್ರಭು ಶ್ರಿ ರಾಮಚಂದ್ರ ದೇವರ ದಿಗ್ವಿಜಯ ಯಾತ್ರೆಯು ನ.7 ರಂದು ಸೋಮವಾರ ಸಂತೆಕಟ್ಟೆ ಕಲ್ಯಾಣಪುರಕ್ಕೆ ಬರಲಿದೆ. ಈ ಸಂದರ್ಭದಲ್ಲಿ ಪ್ರಭು ಶ್ರೀ ರಾಮನಿಗೆ ಕ್ಷೀರಾಭಿಷೇಕವನ್ನು ಮಾಡಲಿದ್ದು, ಕ್ಷೀರಾಭಿಷೇಕ ಮಾಡಲಿಚ್ಚಿಸುವವರು ತಮ್ಮ ಮನೆಗಳಿಂದ ಶುದ್ದ ಮತ್ತು ತಾಜಾಹಾಲನ್ನು ತಂದು ಅಭಿಷೇಕ ಮಾಡಿ ಕೃತಾರ್ಥರಾಗಬಹುದು. ಹಾಲಿನ ಅಭಿಷೇಕ ಮಾಡಲು ದೂರ ಆಗುವವರಿಗೆ ಅವರ ಮನೆಯ ಪರಿಸರದಲ್ಲಿ ಹಾಲನ್ನು ಪಡೆಯುವ ಕೇಂದ್ರವನ್ನು ಮಾಡಲಾಗಿದ್ದು, ಹಾಲು ಪಡೆಯುವ ಕೇಂದ್ರದ ಮಾಹಿತಿಗಾಗಿ ಪ್ರಸಾದ್ ಹಾವಂಜೆ […]
ಸರ್ಕಾರಿ ಕಚೇರಿಯ ಹೊರಗುತ್ತಿಗೆ ನೌಕರರ ಕುಂದುಕೊರತೆಗಳನ್ನು ಕ್ಲಪ್ತ ಸಮಯದಲ್ಲಿ ಬಗೆಹರಿಸಿ: ಜಿಲ್ಲಾಧಿಕಾರಿ ಕೂರ್ಮಾ ರಾವ್
ಉಡುಪಿ: ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಸೇರಿದಂತೆ ಮತ್ತಿತರ ನೌಕರರ ಕುಂದು ಕೊರತೆಗಳನ್ನು ಕ್ಲಪ್ತ ಸಮಯದಲ್ಲಿ ಬಗೆಹರಿಸಿ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗುತ್ತಿಗೆ ಸಿಬ್ಬಂದಿ ವರ್ಗದವರ ವೇತನ ಸೇರಿದಂತೆ ಮತ್ತಿತರೆ ಕೆಲಸ ಕಾರ್ಯಗಳನ್ನು ವಿಳಂಬವಿಲ್ಲದೇ ಮಾಡಿಕೊಟ್ಟು ಕಚೇರಿಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿದರೆ ಕಚೇರಿಯ ದೈನಂದಿನ ಕೆಲಸ ಕಾರ್ಯಗಳು ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು […]
ಇಸ್ರೇಲಿನಲ್ಲಿ ಮತ್ತೊಮ್ಮೆ ಬೆಂಜಮಿನ್ ನೆತನ್ಯಾಹು ಸರ್ಕಾರ್: ಮಿತ್ರನಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ಟೆಲ್ ಅವೀವ್: ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಆಡಳಿತ ನಡೆಸಲು ಸಜ್ಜಾಗಿರುವ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಪ್ರಧಾನಿ ಮೋದಿ ಅವರು ಟ್ವಿಟರ್‌ನಲ್ಲಿ ಹೀಬ್ರೂ ಭಾಷೆಯಲ್ಲಿ ಅಭಿನಂದನೆ ಸಲ್ಲಿಸಿದ್ದು, “ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸಲು ನಮ್ಮ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ. מזל טוב ידידי @netanyahu על הצלחתך בבחירות. אני מצפה להמשיך במאמצים המשותפים שלנו להעמקת […]
ಕರಾವಳಿಯಿಂದ ಕ್ಯಾಲಿಫೋರ್ನಿಯಾದವರೆಗೆ ಕಾಂತಾರ ಕಂಪು: ಸೀಮೆಸುಣ್ಣ ಕಲೆಯಲ್ಲಿ ಮೂಡಿಬಂತು ಪಂಜುರ್ಲಿ ದೈವ
ಕರಾವಳಿಯ ದೈವಾರಾಧನೆಯ ಕಂಪು ದೂರದ ಕ್ಯಾಲಿಫೋರ್ನಿಯಾದಲ್ಲೂ ಪಸರಿಸಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಲಭ್ಯವಾಗಿದೆ. ಕ್ಯಾಲಿಫೋರ್ನಿಯಾದ ಫ್ರೀಮಾಂಟ್ ನಲ್ಲಿ ಸೀಮೆಸುಣ್ಣ(ಚಾಕ್)ದಲ್ಲಿ ಕಾಂತಾರಾ ಪಂಜುರ್ಲಿ ದೈವದ ಚಿತ್ರವು ಕಲಾವಿದೆಯ ಕೈಚಳಕದಲ್ಲಿ ಮೂಡಿಬಂದಿದೆ. ಈ ಪ್ರತಿಭಾವಂತ ಕಲಾವಿದೆಯ ಹೆಸರು ಶಿಲ್ಪಾ ಎಂದಾಗಿದ್ದು, ಅಮೇರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದ ಫ್ರೀಮಾಂಟ್ ನಲ್ಲಿ ವಾಸಿಸುತ್ತಿದ್ದಾರೆ. ಈ ಚಿತ್ರವನ್ನು ಪ್ರದೀಪ್ ಗೌಡ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಕೇಂದ್ರದಿಂದ ನಾಡದೋಣಿ ಮೀನುಗಾರಿಕೆಗೆ ಹೆಚ್ಚುವರಿ 30 ಲಕ್ಷ ಲೀಟರ್ ಸೀಮಎಣ್ಣೆ ಬಿಡುಗಡೆ: ಯಶ್ ಪಾಲ್ ಸುವರ್ಣ ಅಭಿನಂದನೆ
ಉಡುಪಿ: ರಾಜ್ಯದ ಕರಾವಳಿ ಭಾಗದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಮೀನುಗಾರಿಕೆ ನಡೆಸಲು ಸಕಾಲದಲ್ಲಿ ಸೀಮೆ ಎಣ್ಣೆ ಹಂಚಿಕೆಯಾಗದೇ ಎದುರಿಸುತ್ತಿದ್ದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರಕಾರ 2022-23 ನೇ ಸಾಲಿನ 30 ಲಕ್ಷ ಲೀಟರ್ ಹೆಚ್ಚುವರಿ ಸೀಮೆ ಎಣ್ಣೆಯನ್ನು ಬಿಡುಗಡೆಗೊಳಿಸಿದ ಕೇಂದ್ರ ಸರಕಾರಕ್ಕೆ ಸಮಸ್ತ ಮೀನುಗಾರರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಎ. ಸುವರ್ಣ ತಿಳಿಸಿದ್ದಾರೆ. ಜುಲೈ ತಿಂಗಳಿನಲ್ಲಿ ಕರ್ನಾಟಕ ಕರಾವಳಿ […]