ಮಣಿಪಾಲ ಈಶ್ವರನಗರದಲ್ಲಿ ಕಾರು ಡಿಕ್ಕಿ ಹೊಡೆದು ಗರ್ಭಿಣಿ ಹಸು ಗಂಭೀರ: ಕಾರು ಚಾಲಕ ಪರಾರಿ

ಮಣಿಪಾಲ: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಹಸುವೊಂದು ಗಂಭೀರವಾಗಿ ಗಾಯಗೊಂಡ ಘಟನೆ ಮಣಿಪಾಲದ ಈಶ್ವರ್ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 169ಎ ರಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಹಸು ಹೆದ್ದಾರಿಯ ಬಲ ಬದಿಯಿಂದ ಎಡ ಕಡೆಗೆ ರಸ್ತೆ ದಾಟುತ್ತಿತ್ತು. ಈ ವೇಳೆ ಮಣಿಪಾಲದಿಂದ ಪರ್ಕಳ ಕಡೆಗೆ ತೆರಳುತ್ತಿದ್ದ ಕಾರು ಚಾಲಕನು ಅತೀ ವೇಗದಿಂದ ಕಾರನ್ನು ಚಲಾಯಿಸಿಕೊಂಡು ಹೋಗಿ ಹಸುವಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಕಾರು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರು ಡಿಕ್ಕಿಯಾದ ರಭಸಕ್ಕೆ ಹಸು 10 ಮೀಟರ್ […]

ನ.6 ರಂದು ಉಡುಪಿಯಲ್ಲಿ ಹೀರೋ ಶಕ್ತಿ ಮೋಟರ್ಸ್ ನ ಕರಾವಳಿಯ ಪ್ರಪ್ರಥಮ ಶೋರೂಂ ಉದ್ಘಾಟನೆ

ಉಡುಪಿ: ಏಷಿಯಾ, ಆಫ್ರಿಕಾ, ದಕ್ಷಿಣ ಮತ್ತು ಮಧ್ಯ ಅಮೇರಿಕಾದಂತಹ 42 ದೇಶಗಳಲ್ಲಿ ತನ್ನ ವಿಸ್ತರಣೆಯನ್ನು ಹೊಂದಿರುವ ಹೀರೋ ಮೋಟರ್ ಕಾರ್ಪ್ ಸಂಸ್ಥೆಯು ಇದೇ ಮೊದಲ ಬಾರಿಗೆ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ತನ್ನ ಪ್ರಪ್ರಥಮ ಶೋರೂಂ ಅನ್ನು ಕರಾವಳಿ ಜಂಕ್ಷನ್ ಬಳಿಯಿರುವ ಶ್ರೀ ರಾಮದರ್ಶನ ಕಟ್ಟಡದಲ್ಲಿ ತೆರೆಯಲಿದ್ದು, ಇದರ ಉದ್ಘಾಟನಾ ಸಮಾರಂಭವು ನ.6 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಶಾಸಕ ರಘುಪತಿ ಭಟ್ ಉದ್ಘಾಟನಾ ಕಾರ್ಯವನ್ನು ನೆರವೇರಿಸಲಿದ್ದಾರೆ […]

ಹೊಸ ಅವತಾರದಲ್ಲಿ ಸುನೀಲ್ ಶೆಟ್ಟಿ: ಧಾರಾವಿ ಬ್ಯಾಂಕ್ ಒಟಿಟಿ ಸರಣಿಯಲ್ಲಿ ‘ತಲೈವನ್’ ಆದ ಬಾಲಿವುಡ್ ನ ಅಣ್ಣ!

ಬಾಲಿವುಡ್ ನಲ್ಲಿ “ಅಣ್ಣ” ಎಂದೇ ಪ್ರಖ್ಯಾತರಾದ ಸುನಿಲ್ ಶೆಟ್ಟಿಯವರು ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸುನೀಲ್ ಶೆಟ್ಟಿ ಅವರು ಎಂಎಕ್ಸ್ ಪ್ಲೇಯರ್ ಒಟಿಟಿಯಲ್ಲಿ ‘ಧಾರಾವಿ ಬ್ಯಾಂಕ್‌’ ಸರಣಿಯೊಂದಿಗೆ ಡಿಜಿಟಲ್ ಕ್ಷೇತ್ರಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಈ ಸರಣಿಯನ್ನು ಸಮಿತ್ ಕಕ್ಕಡ್ ಅವರು ನಿರ್ದೇಶಿಸಿದ್ದಾರೆ. ಧಾರಾವಿ ಬ್ಯಾಂಕ್ ಸರಣಿಯಲ್ಲಿ ಸುನಿಲ್ ‘ತಲೈವನ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ಕೂಡಾ ನಟಿಸಲಿದ್ದಾರೆ. ನಟಿ ಸೋನಾಲಿ ಕುಲಕರ್ಣಿ ಪ್ರಮುಖ ಪಾತ್ರದಲ್ಲಿದ್ದಾರೆ. ಧಾರಾವಿ […]

ಕನ್ನಡ ನಾಡು-ನುಡಿ-ಸಂಸ್ಕೃತಿಗಾಗಿ ನವೆಂಬರ್ 1 ರಿಂದ 30 ರವರೆಗೆ ಸಂಪದ ತಿಂಗಳ ಸಡಗರ ಕಾರ್ಯಕ್ರಮ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್ ಮಣೂರು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಿಂದ 30 ರ ವರೆಗೆ ಪೂರ್ತಿ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಜನಪದ, ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದ ಸಂಪದ ತಿಂಗಳ ಸಡಗರ ಕಾರ್ಯಕ್ರಮಗಳು ನಡೆಯಲಿದೆ. ನವೆಂಬರ್ 4 ರಂದು ಬೈಂದೂರು, ನ. 5 ರಂದು ಉಡುಪಿ ಹಾಗೂ ನ. […]

ನವೆಂಬರ್ 6 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ

ಉಡುಪಿ: ಪ್ರಸಕ್ತ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ.ಇ.ಟಿ) ಯು ನವೆಂಬರ್ 6 ರಂದು ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಾದ ಕುಂಜಿಬೆಟ್ಟು ಎಂ.ಜಿ.ಎಂ ಕಾಲೇಜು, ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕನ್ನರ್ಪಾಡಿ ಸೈಂಟ್ ಮೇರೀಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಕಡಿಯಾಳಿ ಯು. ಕಮಲಾಬಾಯಿ ಪ್ರೌಢಶಾಲೆ, ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಕ್ರಿಶ್ಚಿಯನ್ ಹೈಸ್ಕೂಲ್, ಸೈಂಟ್ […]