ಕೆ.ಎಂ.ಸಿ ಆಸ್ಪತ್ರೆ: ವಿಶ್ವ ಹೃದಯ ದಿನದ ಅಂಗವಾಗಿ ಹೃದಯ ಆರೋಗ್ಯ ಜಾಗೃತಿ ಕಲಾ ಶಿಲ್ಪ ಅನಾವರಣ

ಮಣಿಪಾಲ: ಪ್ರತಿ ವರ್ಷ ಸೆಪ್ಟೆಂಬರ್ 29 ಅನ್ನು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ. ಹೃದಯ ರಕ್ತನಾಳದ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ, ಇದು ಪ್ರಪಂಚದ ಎಲ್ಲಾ ಸಾಂಕ್ರಾಮಿಕವಲ್ಲದ ರೋಗಗಳ ಪಾಲಿನ ಅರ್ಧದಷ್ಟಿದೆ. ವಿಶ್ವ ಹೃದಯ ದಿನದ 2022 ರ ಘೋಷ ವಾಕ್ಯ “ಪ್ರತಿ ಹೃದಯಕ್ಕಾಗಿ ಹೃದಯವನ್ನು ಬಳಸಿ” ಎನ್ನುವುದಾಗಿದೆ. ವಿಶ್ವ ಹೃದಯ ದಿನದ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗ, ಹೃದಯ ರಕ್ತನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ […]

ವೃತ್ತಿಯಲ್ಲಿ ನಿಷ್ಠೆ- ಪ್ರಾಮಾಣಿಕತೆ ಇದ್ದಾಗ ಗೌರವ ಹೆಚ್ಚಾಗುವುದು: ಡಾ. ಹರೀಶ್ಚಂದ್ರ

ಉಡುಪಿ: ವೃತ್ತಿಯನ್ನು ಪ್ರೀತಿಸಿ, ನಿಷ್ಠೆಯಿಂದ ಮತ್ತು ಪ್ರಾಮಾಣಿಕತೆಯಿಂದ ತನ್ನನ್ನು ಸಮರ್ಪಿಸಿಕೊಂಡಾಗ ವೃತ್ತಿ ಗೌರವವೂ ಮತ್ತು ವ್ಯಕ್ತಿ ಗೌರವವೂ ಹೆಚ್ಚಾಗುತ್ತದೆ ಎಂದು ಗಾಂಧಿ ಆಸ್ಪತ್ರೆಯ ಎಮ್.ಡಿ ಡಾ. ಹರೀಶ್ಚಂದ್ರ ಅಭಿಪ್ರಾಯಪಟ್ಟರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ ಉಡುಪಿ ವಲಯ ಹಮ್ಮಿಕೊಂಡಿದ್ದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮತ್ತೋರ್ವ ಅತಿಥಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಮಾತನಾಡಿ, ಪ್ರವಾಸೋದ್ಯಮಕ್ಕೂ ಛಾಯಾಚಿತ್ರಗ್ರಾಹಕರಿಗೂ ಅವಿನಾಭಾವ ಸಂಬಂಧವಿದೆ. ಛಾಯಾಗ್ರಹಣದ ಮೂಲಕ […]

ಕೇರಳ ಹೈಕೋರ್ಟ್ ನಿಂದ ಪಿಎಫ್‌ಐ ಗೆ ತಪರಾಕಿ: ಬಂದ್ ವೇಳೆಯ ಹಾನಿಗಾಗಿ 5.20 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶ

ಕೊಚ್ಚಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕರ ಬಂಧನವನ್ನು ವಿರೋಧಿಸಿ ಸೆಪ್ಟೆಂಬರ್ 23 ರಂದು ಕರೆ ನೀಡಿದ್ದ ಬಂದ್ ವೇಳೆ ಉಂಟಾದ ಹಾನಿಗೆ ಪರಿಹಾರವಾಗಿ 5.20 ಕೋಟಿ ರೂಪಾಯಿಗಳನ್ನು ಠೇವಣಿ ಮಾಡುವಂತೆ ಕೇರಳ ಹೈಕೋರ್ಟ್ ಗುರುವಾರ ಆದೇಶಿಸಿದೆ. ಈ ಮೊತ್ತವನ್ನು 2 ವಾರಗಳಲ್ಲಿ ಠೇವಣಿ ಮಾಡುವಂತೆ ಕೋರ್ಟ್ ತಾಕೀತು ಮಾಡಿದೆ. ವಿಭಾಗೀಯ ಪೀಠ ನ್ಯಾಯಮೂರ್ತಿಗಳಾದ ಎ.ಕೆ. ಜಯಶಂಕರ ನಂಬಿಯಾರ್ ಮತ್ತು ಸಿ.ಪಿ.ಮೊಹಮ್ಮದ್ ನಿಯಾಸ್ ಅವರು ಪಿಎಫ್‌ಐ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಂಡಿದ್ದಾರೆ ಮತ್ತು ಪರಿಹಾರವಿಲ್ಲದೆ ಜಾಮೀನು […]

ರೊನಾಲ್ಡೊ, ಮೆಸ್ಸಿ ಪಕ್ಕದಲ್ಲಿ ಭಾರತದ ಸುನಿಲ್ ಛೇತ್ರಿ: ಅಂತಾರಾಷ್ಟ್ರೀಯ ಗೋಲ್ ಗಳಿಕೆಯಲ್ಲಿ ಮೂರನೆ ಸ್ಥಾನ ಪಡೆದ ನಾಯಕ

ರತೀಯರೆಲ್ಲರೂ ಹೆಮ್ಮೆ ಪಡುವ ಕ್ಷಣವೊಂದು ಫುಟ್ ಬಾಲ್ ಕ್ರೀಡೆಯಿಂದ ಒದಗಿ ಬಂದಿದೆ. ಫುಟ್ ಬಾಲ್ ನ ದಂತ ಕಥೆಗಳೆಂದೆ ಪರಿಗಣಿತರಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಪಕ್ಕದಲ್ಲಿ ಭಾರತದ ಆಟಗಾರ ಸುನಿಲ್ ಛೇತ್ರಿ ಇರುವ ಫೋಟೋವೊಂದನ್ನು ಫಿಫಾ(FIFA) ಹಂಚಿಕೊಂಡಿರುವುದೆ ಈ ಖುಷಿಗೆ ಕಾರಣ. ಸಕ್ರಿಯ ಅಂತಾರಾಷ್ಟ್ರೀಯ ಗೋಲ್‌ ಗಳಿಕೆಯ ಪಟ್ಟಿಯಲ್ಲಿ ರೊನಾಲ್ಡೊ ಮತ್ತು ಮೆಸ್ಸಿ ಬಳಿಕದ ಮೂರನೇ ಸ್ಥಾನ ಭಾರತದ ಆಟಗಾರ ಛೇತ್ರಿ ಪಾಲಾಗಿದೆ. ವಿಶ್ವದ ಟಾಪ್ ಮೂರು ಗೋಲ್ ಗಳಿಕೆದಾರರಲ್ಲಿ ಒಬ್ಬರು ಭಾರತೀಯರಾಗಿರುವುದು ಸಮಸ್ತ […]

ಶಿವಮೊಗ್ಗ ಮಕ್ಕಳ ದಸರಾ ಕರಾಟೆ ಪಂದ್ಯಾವಳಿಯಲ್ಲಿ ಎಕ್ಸಲೆಂಟ್ ಕಾಲೇಜು ವಿದ್ಯಾರ್ಥಿಗಳ ಅಮೋಘ ಪ್ರದರ್ಶನ

ಶಿವಮೊಗ್ಗ: ಶಿವಮೊಗ್ಗ ಮಹಾನಗರಪಾಲಿಕೆ, ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್, ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಪ್ರಾಯೋಜಕತ್ವದಲ್ಲಿ ಶಿವಮೊಗ್ಗ ಮಕ್ಕಳ ದಸರಾ 2022 ಅಂಗವಾಗಿ 2ನೇ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯು ನೆಹರು ಒಳಾಂಗಣ ಕ್ರೀಡಾಂಗಣ ಶಿವಮೊಗ್ಗ ಇಲ್ಲಿ ಸೆಪ್ಪಂಬರ್ 27 ರಂದು ನಡೆದಿದ್ದು, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿಘ್ನೇಶ್ ನಾಯಕ್ 45 ಕೆಜಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ, ದ್ವಿತೀಯ ವಿಜ್ಞಾನ ವಿಭಾಗದ ಮೊಹಮ್ಮದ್ ಅನೀಸ್ 55ಕೆಜಿ ಪುರುಷರ ವಿಭಾಗದಲ್ಲಿ […]