ವೃತ್ತಿಯಲ್ಲಿ ನಿಷ್ಠೆ- ಪ್ರಾಮಾಣಿಕತೆ ಇದ್ದಾಗ ಗೌರವ ಹೆಚ್ಚಾಗುವುದು: ಡಾ. ಹರೀಶ್ಚಂದ್ರ

ಉಡುಪಿ: ವೃತ್ತಿಯನ್ನು ಪ್ರೀತಿಸಿ, ನಿಷ್ಠೆಯಿಂದ ಮತ್ತು ಪ್ರಾಮಾಣಿಕತೆಯಿಂದ ತನ್ನನ್ನು ಸಮರ್ಪಿಸಿಕೊಂಡಾಗ ವೃತ್ತಿ ಗೌರವವೂ ಮತ್ತು ವ್ಯಕ್ತಿ ಗೌರವವೂ ಹೆಚ್ಚಾಗುತ್ತದೆ ಎಂದು ಗಾಂಧಿ ಆಸ್ಪತ್ರೆಯ ಎಮ್.ಡಿ ಡಾ. ಹರೀಶ್ಚಂದ್ರ ಅಭಿಪ್ರಾಯಪಟ್ಟರು.

ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ ಉಡುಪಿ ವಲಯ ಹಮ್ಮಿಕೊಂಡಿದ್ದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮತ್ತೋರ್ವ ಅತಿಥಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಮಾತನಾಡಿ, ಪ್ರವಾಸೋದ್ಯಮಕ್ಕೂ ಛಾಯಾಚಿತ್ರಗ್ರಾಹಕರಿಗೂ ಅವಿನಾಭಾವ ಸಂಬಂಧವಿದೆ. ಛಾಯಾಗ್ರಹಣದ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬದುಕು ಬಂಗಾರ ಎಂಬ ಕಿರು ಚಿತ್ರದ ಟ್ರೈಲರ್ ಬಿಡುಗಡೆಗೊಂಡಿತು. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯಲ್ಲಿ ನಡೆದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಿತು. ಉಡುಪಿ ವಲಯದ ಶಿಕ್ಷಕಿಯರಾದ ಜೀವಿತ ವಾಮನ್, ಪ್ರವೀಣ್ ಆನಂದ್, ನಯನ ಉದಯ್, ರಾಧಿಕಾ ದಿವಾಕರ್ ಹಾಗು ಕಾಪು ವಲಯದ ನಿಯತ ಸಚಿನ್, ಸವಿತಾ ಎಸ್ ಎರ್ಮಾಳ್, ಶಿಲ್ಪಾ ಶರಣ್ ರವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಮೂಡುಬಿದ್ರೆ ವಲಯಾಧ್ಯಕ್ಷ ಸುನಿಲ್ ಕೋಟ್ಯಾನ್, ಯು ಸುಧಾಕರ ಶೆಣೈ, ಉಡುಪಿ ಮಲಬಾರ್ ಗೋಲ್ಡ್ & ಡೈಮಂಡ್ ಮಾರುಕಟ್ಟೆ ಮುಖ್ಯಸ್ಥ ರಾಘವೇಂದ್ರ ನಾಯಕ್, ಪ್ರವೀಣ್ ಕೊರೆಯ ಉಪಸ್ಥಿತರಿದ್ದರು.

ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿದರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು. ದಿವಾಕರ್ ಕಟೀಲ್ ಪ್ರಾರ್ಥಿಸಿದರು. ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ ವಂದಿಸಿದರು.