ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನಗರ ಭಜನಾ ಕಾರ್ಯಕ್ರಮ
ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಮಂಗಳವಾರದಂದು 122 ನೇ ಭಜನಾ ಸಾಪ್ತಾಹ ಅಂಗವಾಗಿ ನಗರ ಭಜನೆ ನಡೆಯಿತು ದೇವಳದಿಂದ ಹೊರಟ ನಗರ ಭಜನೆಯಲ್ಲಿ ನೂರಾರು ಯುವಕರು ಹಾಗೂ ಸಮಾಜ ಭಾಂದವರು ಹರಿನಾಮ ಸ್ಮರಣೆ ಮಾಡುತ್ತಾ ಉಡುಪಿ ಮುಖ್ಯ ರಸ್ತೆಯವರೆಗೆ ಸಾಗಿ ಪುನಃ ದೇವಳಕ್ಕೆ ವಾಪಾಸಾಗಿ ಭಜನೆಯನ್ನು ಸಮಾಪ್ತಿಗೊಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಕುರಿ ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ಸೌಲಭ್ಯ
ಉಡುಪಿ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿಶೇಷ ಘಟಕ ಯೋಜನೆ/ ಗಿರಿಜನ ಉಪಯೋಜನೆಯಡಿ ಕುರಿ ಹಾಗೂ ಮೇಕೆ ಘಟಕಗಳನ್ನು ಅರಂಭಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹ ಅಭ್ಯರ್ಥಿಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ನೊಂದಾಯಿತರಾದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 18 ರಿಂದ 60 ವರ್ಷ ವಯೋಮಿತಿಯ ಮಹಿಳಾ […]
ಗಾಜಾ ಉಗ್ರಗಾಮಿಗಳು ರಾಕೆಟ್ ಗಳ ಸುರಿಮಳೆಗೈದರೂ ಇಸ್ರೇಲಿಗರ ಕೂದಲೂ ಕೊಂಕಲು ಬಿಡದ ಐರನ್ ಡೋಮ್!! ಇಸ್ರೇಲಿನ ಅಬೇಧ್ಯ ಕೋಟೆಯ ರಕ್ಷಕ ಈ ಡೋಮ್
ಟೆಲ್ ಅವೀವ್: ಪ್ರಪಂಚದಲ್ಲಿ ಪ್ರತಿನಿತ್ಯವೂ ಯುದ್ದ ಸನ್ನದ್ಧ ಸ್ಥಿತಿಯಲ್ಲಿರುವ ದೇಶ ಇಸ್ರೇಲ್. ಇಲ್ಲಿಯ ಪ್ರತಿ ನಾಗರಿಕನೂ ಒಬ್ಬ ಸೈನಿಕ. ಅತ್ಯಂತ ಮುಂದುವರಿದ ದೇಶವಾಗಿರುವ ಅಂಗೈ ಅಷ್ಟಗಲದ ಇಸ್ರೇಲ್ ಬಳಿ ಅತ್ಯಾಧುನಿಕ ಅಸ್ತ್ರ ಶಸ್ತ್ರಗಳಿವೆ. ಅವೆಲ್ಲವುಗಳಲ್ಲಿ ಅತಿ ವಿನೂತನ ಮತ್ತು ಅತ್ಯಂತ ಮಹತ್ವಪೂರ್ಣವಾಗಿರುವುದು ಐರನ್ ಡೋಮ್. ಇಸ್ರೇಲಿನ ಶತ್ರು ದೇಶವಾದ ಪ್ಯಾಲೆಸ್ಟೀನ್ ನಲ್ಲಿ ನೆಲೆಸಿರುವ ಉಗ್ರಗಾಮಿಗಳು ನಿತ್ಯವೂ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ತನ್ನ ದೇಶದ ನಾಗರಿಕರನ್ನು ರಕ್ಷಿಸಲು ಇಸ್ರೇಲಿನ ರಕ್ಷಣಾ ಸಚಿವಾಲಯವು ಐರನ್ […]
ಆಗಸ್ಟ್ 25 ರಂದು ಉಡುಪಿ ಜಿಲ್ಲೆ ರಚನೆಯಾದ ರಜತ ಸಂಭ್ರಮೋತ್ಸವದ ವಿಜೃಂಭಣೆಯ ಆಚರಣೆ: ಕೆ.ಜಯಪ್ರಕಾಶ್ ಹೆಗ್ಡೆ
ಉಡುಪಿ: ಉಡುಪಿ ಜಿಲ್ಲೆಯು ಅಸ್ಥಿತ್ವಕ್ಕೆ ಬಂದು ಇದೇ ಆಗಸ್ಟ್ 25 ಕ್ಕೆ 25 ವರ್ಷಗಳು ಪೂರ್ಣಗೊಳ್ಳುತ್ತಿದ್ದು, ಜಿಲ್ಲೆಯು ಸಾಗಿ ಬಂದ ಅಭಿವೃದ್ಧಿ ಕಾರ್ಯಗಳ ಪುನರಾವಲೋಕನದ ರಜತ ಮಹೋತ್ಸವದ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಜತ ಮಹೋತ್ಸವ ಕಾರ್ಯಕ್ರಮದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳು ಈ ಹಿಂದೆ ದಕ್ಷಿಣ ಕನ್ನಡ […]
ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಆಗಸ್ಟ್ 10 ರಂದು ಕುಂದಾಪ್ರ ಸಿರಿ ವೈಭೋಗ ಕಾರ್ಯಕ್ರಮ
ಕುಂದಾಪುರ: ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಪ್ರಸ್ತುತ ಪಡಿಸುತ್ತಿದೆ ಗ್ರಂಥಾಲಯ ಕುಟಿ ವೈಭವಂ ಪುಸ್ತಕದ ಸೂರಿನಡಿಯಲ್ಲಿ ‘ಕುಂದಾಪ್ರ ಸಿರಿ ವೈಭೋಗ’ವು ಆಗಸ್ಟ್ 10 ರಂದು ಬೆಳಿಗ್ಗೆ 10 ಗಂಟೆಗೆ ಕಾಲೇಜು ಗ್ರಂಥಾಲಯದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕುಂದಾಪುರದ ಆಚಾರ-ವಿಚಾರ-ಆಹಾರಕ್ಕೆ ಸಂಬಂಧಪಟ್ಟ ಪ್ರದರ್ಶನಗಳನ್ನು ಏರ್ಪಡಿಸಲಾಗುವುದು. ಸೂರಿನಡಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿರುವುದು. ಕಾಲೇಜಿನ ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಮನಶಾಸ್ತ್ರ ವಿದ್ಯಾರ್ಥಿಗಳು ನಡೆಸಿಕೊಡುವ ಈ ಕಾರ್ಯಕ್ರಮದ ನೇತೃತ್ವವನ್ನು ಪತ್ರಿಕೋದ್ಯಮ ವಿಭಾಗದ ಸುಮಲತಾ ಇವರು ವಹಿಸಲಿದ್ದಾರೆ.