ಆಗಸ್ಟ್ 17 ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ವೃತ್ತಿ ಸಮಾಲೋಚನಾ ಕಾರ್ಯಾಗಾರ

ಉಡುಪಿ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕಚೇರಿ ಉಡುಪಿ ಹಾಗೂ ಹೆಚ್.ಸಿ.ಎಲ್ ಟೆಕ್ನಾಲಜೀಸ್ ಇವರ ಸಹಯೋಗದೊಂದಿಗೆ ಹೆಚ್.ಸಿ.ಎಲ್ ಟೆಕ್ನಾಲಜೀಸ್ ಟೆಕ್ ಬಿ – ವೃತ್ತಿ ಸಮಾಲೋಚನಾ ಕಾರ್ಯಾಗಾರವು ಆಗಸ್ಟ್ 17 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ರ ವರೆಗೆ ನಗರದ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಲಿದೆ. ದ್ವಿತೀಯ ಪಿ.ಯು.ಸಿ ಯಲ್ಲಿ ಗಣಿತ ಹಾಗೂ ವ್ಯವಹಾರ ಅಧ್ಯಯನ ವಿಷಯದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ವೆಬ್‌ಸೈಟ್ https://bit.ly/hcltechbeeevent ನಲ್ಲಿ ನೋಂದಾಯಿಸಿಕೊಂಡು, ಎಸ್.ಎಸ್.ಎಲ್.ಸಿ […]

ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ: ಆಗಸ್ಟ್ 10 ರಂದು 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಮಾತ್ರೆ ವಿತರಣೆ

ಉಡುಪಿ: ಜಿಲ್ಲೆಯಲ್ಲಿ ಆಗಸ್ಟ್ 10 ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಜಿಲ್ಲೆಯ 1 ರಿಂದ 19 ವರ್ಷದೊಳಗಿನ 2,58,920 ಮಕ್ಕಳಿಗೆ ಅಲ್‌ಬೆಂಡಾಜೋಲ್ ಮಾತ್ರೆಯನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ, ಅಂಗನವಾಡಿ, ರೆಸಿಡೆನ್ಶಿಯಲ್ ಸ್ಕೂಲ್, ಐ.ಟಿ.ಐ ನರ್ಸಿಂಗ್ ಕಾಲೇಜು, ಪ್ರಥಮ ವರ್ಷದ ಪದವಿ ಹಾಗೂ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಆಯಾ ಶಾಲಾ- ಕಾಲೇಜುಗಳಲ್ಲಿ ಮಾತ್ರೆಗಳನ್ನು ನೀಡಲಾಗುವುದು. ಅಂಗನವಾಡಿ ಮಕ್ಕಳಿಗೆ ಹಾಗೂ ಶಾಲೆಯಿಂದ ಹೊರಗುಳಿದ 19 ವರ್ಷದೊಳಗಿನ ಮಕ್ಕಳಿಗೆ […]

ಆಗಸ್ಟ್ 9 ಮತ್ತು 14 ರಂದು ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜ ಖರೀದಿಗೆ ಅವಕಾಶ

ಉಡುಪಿ: ಅಂಚೆ ಇಲಾಖೆಯ ವತಿಯಿಂದ ಹರ್-ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಸಾರ್ವಜನಿಕರಿಗೆ ರಾಷ್ಟ್ರೀಯ ಧ್ವಜವನ್ನು ಖರೀದಿಸಲು ಅನುಕೂಲವಾಗುವಂತೆ ಆಗಸ್ಟ್ 9 ಹಾಗೂ 14 ರಂದು ಉಡುಪಿ ವಿಭಾಗದ ಎಲ್ಲಾ ಇಲಾಖಾ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸಲಿದ್ದು, ಈ ಎರಡೂ ದಿನಗಳಲ್ಲಿ ತಿರಂಗಾ ವಿತರಣೆ ಮಾತ್ರ ನಡೆಯಲಿದ್ದು, ಇತರ ಯಾವುದೇ ವ್ಯವಹಾರಗಳು ಇರುವುದಿಲ್ಲ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

ಬೈಂದೂರು: ವ್ಯಕ್ತಿ ನಾಪತ್ತೆ

ಉಡುಪಿ: ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ಬೀಸಿನಪಾರೆ ನಿವಾಸಿ ಸಾಜು ಕೆ.ಎಂ (47) ಎಂಬ ವ್ಯಕ್ತಿಯು ಜುಲೈ 31 ರಂದು ಬೆಳಗ್ಗೆ 8.45 ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಸಪೂರ ಶರೀರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ, ತುಳು ಹಾಗೂ ಮಲೆಯಾಳಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254- 258233, ಮೊ.ನಂ9480805460, ಬೈಂದೂರು […]

ಉಡುಪಿ ಜಿಲ್ಲಾ ರಜತ ಮಹೋತ್ಸವ: ಸಾರ್ವಜನಿಕರಿಂದ ಲಾಂಛನ ವಿನ್ಯಾಸ ಆಹ್ವಾನ

ಉಡುಪಿ: ಜಿಲ್ಲೆ ಆರಂಭಗೊಂಡು 25 ವಸಂತಗಳು ಸಂದ ಹಿನ್ನಲೆಯಲ್ಲಿ, ಆಗಸ್ಟ್‌ 25 ರಿಂದ ವಿವಿಧ ಹಂತಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಜತ ಮಹೋತ್ಸವ ಕಾರ್ಯಕ್ರಮವು ನಡೆಯಲಿದ್ದು, ರಜತ ಮಹೋತ್ಸವ ಕಾರ್ಯಕ್ರಮದ ಅಂದವಾದ ಲಾಂಛನವನ್ನು, ಟ್ಯಾಗ್ಲೈನ್‌ ನೊಂದಿಗೆ ರಚಿಸಿ, ಜಿಲ್ಲಾಡಳಿತಕ್ಕೆ ನೀಡಲು ಸಾರ್ವಜನಿಕರಿಂದ ಲಾಂಛನ ವಿನ್ಯಾಸಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕರು ರಚಿಸಿದ ಅತ್ಯುತ್ತಮ ಲಾಂಛನಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲಾಗುವುದು, ಆಯ್ಕೆಯಾದ ಲಾಂಛನಕ್ಕೆ ರೂ.10000 (ರೂಪಾಯಿ ಹತ್ತು ಸಾವಿರಗಳು) ಗಳ ಬಹುಮಾನ ನೀಡಲಾಗುವುದು. ಲಾಂಛನವನ್ನು ಜಿಲ್ಲಾಧಿಕಾರಿ ಕಛೇರಿಯ ಈಮೇಲ್‌ ವಿಳಾಸ […]