14 ಬಾರಿಯ ಚಾಂಪಿಯನ್ ಅನ್ನು ಮಣಿಸಿ ಪ್ರಪ್ರಥಮ ಬಾರಿಗೆ ಥಾಮಸ್ ಕಪ್ ಕಿರೀಟವನ್ನು ಗೆದ್ದುಕೊಂಡ ಭಾರತ!!
ಥಾಮಸ್ ಕಪ್ 2022: ಭಾನುವಾರ ಮೇ 15 ರಂದು, ಬ್ಯಾಂಕಾಕ್ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಮಣಿಸುವ ಮೂಲಕ ಭಾರತವು ಮೊದಲ ಬಾರಿಗೆ ಥಾಮಸ್ ಕಪ್ ಕಿರೀಟವನ್ನು ಗೆದ್ದುಕೊಂಡಿದೆ. ಭಾರತೀಯ ಆಟಗಾರರಾದ ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಮತ್ತು ಕಿದಂಬಿ ಶ್ರೀಕಾಂತ್ ಅವರು 3-0 ಅಂತರದಿಂದ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಮಣಿಸಿ ಹೊಸ ಇತಿಹಾಸ ರಚಿಸಿದ್ದಾರೆ. # ಥಾಮಸ್ ಕಪ್ ಫೈನಲ್ನಲ್ಲಿ ಭಾರತವು 3-0 ಅಂತರದಲ್ಲಿ ಇಂಡೋನೇಷ್ಯಾವನ್ನು ಸೋಲಿಸಿದೆ. # ಶ್ರೀಕಾಂತ್ ಅವರು ಜೊನಾಥನ್ […]
ಡಾ. ಮಾಣಿಕ್ ಸಾಹ ಹೆಗಲಿಗೆ ತ್ರಿಪುರಾ ಕಮಾನು!! ಮುಖ್ಯ ಮಂತ್ರಿ ಹುದ್ದೆಗೆ ಬಿಜೆಪಿಯಿಂದ ಅಚ್ಚರಿಯ ಆಯ್ಕೆ: ಯಾರೀತ ಮಾಣಿಕ್ ಸಾಹ?
ದೆಹಲಿ: ಭಾರತೀಯ ಜನತಾ ಪಕ್ಷವು ಶನಿವಾರ ತನ್ನ ತ್ರಿಪುರಾ ಘಟಕದ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಡಾ. ಮಾಣಿಕ್ ಸಾಹ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದೆ. ತ್ರಿಪುರಾ ಮುಖ್ಯಮಂತ್ರಿಯಾಗಿದ್ದ ಬಿಪ್ಲಬ್ ದೇಬ್ ಅವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಮಾಣಿಕ್ ಹೆಗಲಿಗೆ ತ್ರಿಪುರಾ ಕಮಾನನ್ನು ಏರಿಸಿರುವುದು ಕುತೂಹಲ ಮೂಡಿಸಿದೆ. ಬಹಳ ಆಶ್ಚರ್ಯಕರ ರೀತಿಯಲ್ಲಿ ಬಿಪ್ಲಬ್ ದೇಬ್ ಶನಿವಾರ 5 ಗಂಟೆಗೆ ರಾಜೀನಾಮೆ ನೀಡಿದರೆ, ಸಹಾ ಅವರನ್ನು ಎರಡೇ ಗಂಟೆಗಳಲ್ಲಿ, ಸಂಜೆ 7 ರ […]
ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್ ಉದ್ಘಾಟಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಉಡುಪಿ: ಇಲ್ಲಿನ ಪೇಜಾವರ ಮಠದ ಅಂಗಸಂಸ್ಥೆಯಾದ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ, ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್ ಅನ್ನು ಭಾರತ ಸರಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು. ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿತರಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಕೃಷಿ ಸಚಿವೆ ಶೋಭಾ ಕೆರಂದ್ಲಾಜೆ,ಉಡುಪಿ ಶಾಸಕರಾದ ಕೆ.ರಘುಪತಿ ಭಟ್,ಉಡುಪಿ ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯದೆಲ್ಲೆಡೆ ಶಾಲೆಗಳ ಪುನರಾರಂಭ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಖಾದ್ಯದ ಸ್ವಾಗತ
ಬೆಂಗಳೂರು: ರಾಜ್ಯದೆಲ್ಲೆಡೆ ಶಾಲೆಗಳ ಪುನರಾರಂಭದ ದಿನದಂದು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಿಹಿ ಖಾದ್ಯ ನೀಡಿ ಸ್ವಾಗತಿಸಲಾಗುವುದು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಶಾಲೆಯ ಮೊದಲ ದಿನದ ಮಧ್ಯಾಹ್ನದ ಊಟದ ಜೊತೆಗೆ ಕನಿಷ್ಠ ಒಂದು ಸಿಹಿ ಖಾದ್ಯವನ್ನು ತಯಾರಿಸುವಂತೆ ಶಾಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸುತ್ತೋಲೆಯ ಪ್ರಕಾರ, ಕ್ಷೀರ ಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗಳು ಶಾಲಾ ಪುನರಾರಂಭದ ಮೊದಲ ದಿನದಿಂದಲೆ ಕಾರ್ಯನಿರ್ವಹಿಸಲಿವೆ. ಸಿಹಿ ಖಾದ್ಯದ ಜತೆಗೆ ಶಾಲೆಗಳನ್ನು ಅಲಂಕರಿಸಿ ಹಬ್ಬದ ವಾತಾವರಣ ಮೂಡಿಸುವಂತೆ […]
ಮೇ 16 ರಂದು ಸಂಪೂರ್ಣ ಚಂದ್ರಗ್ರಹಣ: ಪ್ರಪಂಚದ ಹಲವೆಡೆ ರಕ್ತ ಚಂದಿರನ ನೋಡುವ ಭಾಗ್ಯ
ದೆಹಲಿ: ಮೇ 15-16ರ ಮಧ್ಯರಾತ್ರಿಯಲ್ಲಿ ಈ ವರ್ಷದ ಮೊದಲ ಸಂಪೂರ್ಣ ಚಂದ್ರಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ. timeanddate.com ಪ್ರಕಾರ, ಈ ರಕ್ತ ಚಂದಿರ ಚಂದ್ರಗ್ರಹಣದ ಒಟ್ಟು ಹಂತವು ಉತ್ತರ ಮತ್ತು ದಕ್ಷಿಣ ಅಮೆರಿಕಾದಾದ್ಯಂತ ಮತ್ತು ಯುರೋಪ್ ಮತ್ತು ಆಫ್ರಿಕಾದ ಭಾಗಗಳಿಂದ ಗೋಚರಿಸುತ್ತದೆ. ದಕ್ಷಿಣ/ಪಶ್ಚಿಮ ಯುರೋಪ್, ದಕ್ಷಿಣ/ಪಶ್ಚಿಮ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕದ ಬಹುಭಾಗ, ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾ ಖಂಡಗಳು ಗ್ರಹಣದ ಕೆಲವು ಭಾಗಗಳನ್ನು ನೋಡುವ ಅವಕಾಶವನ್ನು ಪಡೆಯಲಿದೆ. ಸಂಪೂರ್ಣ ಗ್ರಹಣದ ಅವಧಿಯು […]