14 ಬಾರಿಯ ಚಾಂಪಿಯನ್ ಅನ್ನು ಮಣಿಸಿ ಪ್ರಪ್ರಥಮ ಬಾರಿಗೆ ಥಾಮಸ್ ಕಪ್ ಕಿರೀಟವನ್ನು ಗೆದ್ದುಕೊಂಡ ಭಾರತ!!

ಥಾಮಸ್ ಕಪ್ 2022: ಭಾನುವಾರ ಮೇ 15 ರಂದು, ಬ್ಯಾಂಕಾಕ್‌ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಮಣಿಸುವ ಮೂಲಕ ಭಾರತವು ಮೊದಲ ಬಾರಿಗೆ ಥಾಮಸ್ ಕಪ್ ಕಿರೀಟವನ್ನು ಗೆದ್ದುಕೊಂಡಿದೆ. ಭಾರತೀಯ ಆಟಗಾರರಾದ ಲಕ್ಷ್ಯ ಸೇನ್, ಸಾತ್ವಿಕ್‌ ಸಾಯಿರಾಜ್-ಚಿರಾಗ್ ಶೆಟ್ಟಿ ಮತ್ತು ಕಿದಂಬಿ ಶ್ರೀಕಾಂತ್ ಅವರು 3-0 ಅಂತರದಿಂದ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಮಣಿಸಿ ಹೊಸ ಇತಿಹಾಸ ರಚಿಸಿದ್ದಾರೆ.

# ಥಾಮಸ್ ಕಪ್ ಫೈನಲ್‌ನಲ್ಲಿ ಭಾರತವು 3-0 ಅಂತರದಲ್ಲಿ ಇಂಡೋನೇಷ್ಯಾವನ್ನು ಸೋಲಿಸಿದೆ.

# ಶ್ರೀಕಾಂತ್ ಅವರು ಜೊನಾಥನ್ ಕ್ರಿಸ್ಟಿ ವಿರುದ್ಧದ ಅಂತಿಮ ಪಂದ್ಯದಲ್ಲಿ ನೇರ ಆಟಗಳಲ್ಲಿ ಗೆದ್ದಿದ್ದಾರೆ.

# ಥಾಮಸ್ ಕಪ್ ಕಿರೀಟ ಗೆದ್ದ 6ನೇ ರಾಷ್ಟ್ರ ಭಾರತ.