ದೇಶದಲ್ಲಿ ಏರುತ್ತಿರುವ ಗೋಧಿ ಬೆಲೆ ತಗ್ಗಿಸಲು ರಫ್ತಿಗೆ ನಿಷೇಧ ಹೇರಿದ ಭಾರತ: ನಿರ್ಧಾರದಿಂದ ಯೂರೋಪಿನಲ್ಲಿ ತಳಮಳ!

ದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಅದರ ಉತ್ಪನ್ನಗಳ ಬೆಲೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತತ್ಕಾಲದಿಂದಲೇ ಜಾರಿಗೆ ಬರುವಂತೆ ಗೋದಿಯ ರಫ್ತನ್ನು ನಿಷೇಧಿಸಿ ಭಾರತ ಸರಕಾರದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಆದೇಶ ಹೊರಡಿಸಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ದ, ಹಾಗೂ ಏರುತ್ತಿರುವ ತಾಪಮಾನದಿಂದಾಗಿ ವಿದೇಶೀ ಮಾರುಕಟ್ಟೆಗಳಲ್ಲಿ ಗೋಧಿಯ ಆವಕ ಕಡಿಮೆಯಾಗುತ್ತಿದ್ದು, ಯೂರೋಪ್, ಅಮೇರಿಕಾ ಮತ್ತಿತರ ದೇಶಗಳಿಗೆ ಗೋಧಿಯನ್ನು ರಫ್ತು ಮಾಡುವ ಉದ್ದೇಶದಲ್ಲಿದ್ದ ಭಾರತವು ಇದೀಗ ರಫ್ತಿನ ಮೇಲೆ ನಿಷೇಧ ಹೇರಿರುವುದು ಯೂರೋಪ್ ಮುಂತಾದ ದೇಶಗಳಲ್ಲಿ ತಳಮಳವನ್ನು […]

ಕುಂದಾಪುರ ವೆಂಕಟರಮಣ ಪದವಿ  ಪೂರ್ವ ಕಾಲೇಜಿನಲ್ಲಿ  ಪ್ರೇರಣಾ ಶಿಬಿರ

ಕುಂದಾಪುರ: ವೆಂಕಟರಮಣ ಪದವಿ  ಪೂರ್ವ ಕಾಲೇಜಿನಲ್ಲಿ ಮೇ 13 ಶುಕ್ರವಾರದಂದು  ದ್ವಿತೀಯ ಪಿಯುಸಿ  ವಿಜ್ಞಾನ ವಿಭಾಗದ  ವಿದ್ಯಾರ್ಥಿಗಳಿಗೆ  ಆಯೋಜಿಸಲಾಗಿದ್ದ ಪ್ರೇರಣಾ ಶಿಬಿರದಲ್ಲಿ ಕುಂದಾಪುರ ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಕೋಟೇಶ್ವರ ಇಲ್ಲಿನ ವೈದ್ಯರುಗಳಾದ ಡಾ. ಅಕ್ಷತಾ  ಹಾಗೂ  ಡಾ. ವಾಣಿಶ್ರೀ ಐತಾಳ  ಮುಖ್ಯ ಅತಿಥಿಗಳಾಗಿ  ಆಗಮಿಸಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಏಕಾಗ್ರತೆಯನ್ನು ಸಾಧಿಸುವ  ಮಾರ್ಗಗಳು ಹಾಗೂ ಇಂದಿನ ವೈಜ್ಞಾನಿಕ ಕಂಪ್ಯೂಟರ್ ಯುಗದ  ಧಾವಂತದ  ಬದುಕಿನಲ್ಲಿ ವಿದ್ಯಾರ್ಥಿಗಳು ಮೊಬೈಲ್, ಇಂಟರ್ ನೆಟ್ ನ ಅತಿಯಾದ ಬಳಕೆಯಿಂದ  ದೂರ ಇರುವುದರ  ಮೂಲಕ  ಭವ್ಯ  ಭವಿಷ್ಯ  ರೂಪಿಸಿಕೊಳ್ಳುವುದು ಹೇಗೆ ಎನ್ನುವುದರ  ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರಾಗಿಣಿ ಉಪಸ್ಥಿತರಿದ್ದರು. ಆಂಗ್ಲ ಭಾಷಾ   ಉಪನ್ಯಾಸಕ  ಶ್ರೀ ಅಶೋಕ್  ಕಾರ್ಯಕ್ರಮ ನಿರೂಪಿಸಿದರು.

ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ

ಉಡುಪಿ: ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಪ್ರಸಿದ್ಧ ಸಂಸ್ಥೆಯಾಗಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ತರಬೇತಿ ಪಾಲುದಾರ ಸಂಸ್ಥೆಯಾದ ಉನ್ನತಿ ಕೆರಿಯರ್ ಅಕಾಡೆಮಿಯಲ್ಲಿ ಶನಿವಾರದಂದು ‘ಬಿಎಫ್ಎಸ್ಐ ಕ್ಷೇತ್ರದ ಭವಿಷ್ಯ ಮತ್ತು ಉದ್ಯೋಗಾವಕಾಶಗಳು’ ಕುರಿತ ವಿಷಯದ ಬಗ್ಗೆ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ್ ಬಿಸಿನೆಸ್ ಸೊಲ್ಯೂಷನ್ಸ್ ನ ಆಪರೇಷನ್ಸ್ ಮ್ಯಾನೇಜರ್ ಶ್ರೀಮತಿ ಆರತಿ ಮಾತನಾಡಿ, “ಅತಿ ವೇಗವಾಗಿ ಬೆಳೆಯುತ್ತಿರುವ ಬಿಎಫ್ಎಸ್ಐ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಪುಲ ಉದ್ಯೋಗವಕಾಶಗಳಿವೆ. ಆದರೆ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿ […]

ಶ್ರೀ ದುರ್ಗಾ ಆದಿ ಶಕ್ತಿ ಕ್ಷೇತ್ರ, ದೊಡ್ಡಣ್ಣಗುಡ್ಡೆ ಇದರ 16 ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಉಡುಪಿ: ಶ್ರಿ ಚಕ್ರಪೀಠ ಸುರಪೂಜಿತ, ಶ್ರೀ ದುರ್ಗಾ ಆದಿ ಶಕ್ತಿ ಕ್ಷೇತ್ರ, ದೊಡ್ಡಣ್ಣಗುಡ್ಡೆ ಇದರ 16 ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ದಿನಾಂಕ 15 ಮೇ ರವಿವಾರದಿಂದ 17 ಮೇ ಮಂಗಳವಾರದವರೆಗೆ ನಡೆಯಲಿದೆ. ಮೇ 15 ರವಿವಾರದಂದು ಸಂಜೆ 6 ರಿಂದ ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ವಾಸ್ತು ರಾಕ್ಷೋಘ್ನಾದಿ ಪ್ರಕ್ರಿಯೆ, ಆದಿವಾಸ ಪ್ರಕ್ರಿಯೆ ಜರುಗಲಿದೆ. ಮೇ16 ಸೋಮವಾರದಂದು ಬೆಳಿಗ್ಗೆ 7ರಿಂದ ಸಪರಿವಾರ ದೇವರುಗಳ ಪ್ರಧಾನ ಹೋಮ, ಕಲಶಾಭಿಷೇಕ. ಬೆಳಿಗ್ಗೆ 9.32ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ […]

ಆಸ್ಟ್ರೇಲಿಯಾದ ಪ್ರಖ್ಯಾತ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವು

ದೆಹಲಿ: ಕ್ರಿಕೆಟ್ ಪ್ರೇಮಿಗಳಿಗೊಂದು ಆಘಾತ ಕಾದಿದೆ. ಮಾರ್ಚ್ 4 ರಂದು ಹೃದಯಾಘಾತದಿಂದ ನಿಧನರಾದ ಆಸ್ಟ್ರೇಲಿಯಾ ಆಟಗಾರ ಶೇನ್ ವಾರ್ನ್ ನಿಧನರಾದ ಸುಮಾರು ಎರಡು ತಿಂಗಳ ನಂತರ ಅವರ ಸಹ ಆಟಗಾರನಾಗಿದ್ದ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತವೊಂದರಲ್ಲಿ ಮೃತ ಪಟ್ಟಿದ್ದಾರೆ. ಟೆಸ್ಟ್ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. 46 ವರ್ಷ ವಯಸ್ಸಿನ ಮತ್ತು ಆಸ್ಟ್ರೇಲಿಯಾ ಪರ 26 ಬಾರಿ ಆಡಿರುವ ಸೈಮಂಡ್ಸ್ ಶನಿವಾರ ರಾತ್ರಿ ಟೌನ್ಸ್‌ವಿಲ್ಲೆಯಿಂದ […]