ಕರಾವಳಿಯಾದ್ಯಂತ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಉಡುಪಿ: ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಏ. 10, 13 ಹಾಗೂ 14ರಂದು ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹುಡುಗರ ಜೊತೆ ಸೇರೋಕೆ ಏನೋ ಒಂಥರಾ ಅನ್ನಿಸಿದ ಆ ಕ್ಷಣ:ಹುಡುಗಿಯೊಬ್ಬಳ ಪಿಸುಮಾತು

ನನ್ನ ತಂಗಿ‌ ಹೈಸ್ಕೂಲ್ ಓದ್ತಾಳೆ. ಮೊನ್ನೆ ರೂಮಲ್ಲಿ ಕೂತ್ಕೊಂಡು ಏನೋ ಮಾಡ್ತಿದ್ಲು. ಅಮ್ಮ ಒಂದು ಸಣ್ಣ ಕೆಲಸ‌, ಅಂದ್ರೆ ಯಾವುದೋ ಒಂದು ವಸ್ತುವನ್ನು ತಂದುಕೊಡಲು ಹೇಳಿದಳು. ಇವಳು “ಹುಂ” ಎಂದವಳು ಐದು ನಿಮಿಷವಾದರೂ ಅಮ್ಮ ಹೇಳಿದ ಕೆಲಸ‌ ಮಾಡ್ಲಿಲ್ಲ, ಅಮ್ಮ ಮತ್ತೊಮ್ಮೆ “ತಂದುಕೊಡ್ತೀಯಾ” ಎಂದಳಷ್ಟೇ. ಇವಳಿಗೆ ಎಲ್ಲಿತ್ತೋ ಸಿಟ್ಟು ಗೊತ್ತಿಲ್ಲ, ಅಮ್ಮನ ಮೇಲೆ ರೇಗಾಡತೊಡಗಿದಳು. “ಎಲ್ಲಾ‌ ಕೆಲಸನೂ‌ ನಂಗೇ ಹೇಳ್ತೀಯಾ, ಅಕ್ಕಗೆ ಏನೂ ಹೇಳಲ್ಲ. ಮಾಡದು ಚೂರು ಲೇಟಾದ್ರೂ ಬೈತೀಯಾ ಅನ್ನುವಲ್ಲಿಂದ ಪ್ರಾರಂಭವಾದ ಸಿಟ್ಟು ನನ್ನನ್ನ ಕಂಡ್ರೆ […]

ನೈಟ್ ಕರ್ಪ್ಯೂನಿಂದ ಧಾರ್ಮಿಕ ಆಚರಣೆಗೆ ತೊಂದರೆ: ಕರ್ಪ್ಯೂನಿಂದ ಉಡುಪಿ, ಮಣಿಪಾಲಕ್ಕೆ ವಿನಾಯಿತಿ ನೀಡುವಂತೆ ಸಿಎಂಗೆ ಶಾಸಕ ರಘುಪತಿ ಭಟ್ ಮನವಿ

ಉಡುಪಿ: ಜಿಲ್ಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ದೈವಸ್ಥಾನಗಳ ನೇಮೋತ್ಸವ, ದೇವಸ್ಥಾನಗಳ ಉತ್ಸವ, ಯಕ್ಷಗಾನ ಹಾಗೂ ಆರ್ಥಿಕತೆಗೆ ಹೊಡೆತ ಬೀಳುವ ಹಿನ್ನೆಲೆಯಲ್ಲಿ ಉಡುಪಿ ಮತ್ತು ಮಣಿಪಾಲಕ್ಕೆ ವಿಧಿಸಿರುವ ರಾತ್ರಿ ಕರ್ಫ್ಯೂ ಅನ್ನು ಹಿಂಪಡೆಯಬೇಕೆಂದು ಉಡುಪಿ ಶಾಸಕ ರಘುಪತಿ ಭಟ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಭಾಗದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ರಾತ್ರಿಯ ವೇಳೆ ನಡೆಯುತ್ತವೆ. ಕಳೆದ ಬಾರಿಯು ಕೋವಿಡ್ […]

ಬೈಂದೂರು ಶಾಸಕರಿಂದ ನಿತ್ಯ ಕಿರುಕುಳ, ಬೆದರಿಕೆ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಆರೋಪ

ಕುಂದಾಪುರ: ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ನನಗೆ ಹಾಗೂ ನನ್ನ ಕುಟುಂಬಕ್ಕೆ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ದೂರವಾಣಿ ಕರೆ ಮಾಡಿ ಕುಟುಂಬವನ್ನು ಬೀದಿಗೆ ತರುತ್ತೇನೆಂಬ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಗಂಭೀರ ಆರೋಪ ಮಾಡಿದ್ದಾರೆ. ಅವರು ಇಂದು ಪತ್ನಿ ರೇಷ್ಮಾ, ತಾಯಿ ನೀಲಾವತಿ ಹಾಗೂ ಮೂವರು ಮಕ್ಕಳ‌ ಜೊತೆಗೆ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕರ ವಿರುದ್ಧ […]

ನೈಟ್ ಕರ್ಪ್ಯೂ ಮಾರ್ಗಸೂಚಿ ಬಿಡುಗಡೆ: ಯಾವುದಕ್ಕೆಲ್ಲ ಅವಕಾಶ?, ಯಾವುದಕ್ಕಿಲ್ಲ?

ಬೆಂಗಳೂರು: ರಾಜ್ಯದಲ್ಲಿ ಉಲ್ಬಣಿಸುತ್ತಿರುವ ಕೋವಿಡ್ ಎರಡನೆ ಅಲೆ ತಡೆಗೆ ಶನಿವಾರದಿಂದ (ಏ.10ರಿಂದ 20ರ ವರೆಗೆ) ಉಡುಪಿ, ಮಣಿಪಾಲ, ಮಂಗಳೂರು, ಬೆಂಗಳೂರು ಸಹಿತ ರಾಜ್ಯದ 8 ನಗರಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಕೊರೊನಾ ಕರ್ಫ್ಯೂ (ರಾತ್ರಿ ಕರ್ಪ್ಯೂ) ಹೇರಲಾಗುತ್ತಿದ್ದು, ಈ ಅವಧಿಯಲ್ಲಿ ವೈದ್ಯಕೀಯ ಸೇವೆ ಮತ್ತು ತುರ್ತು ಚಟುವಟಿಕೆಗೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದಂತೆ ಎಲ್ಲ ವಾಣಿಜ್ಯ ಚಟುವಟಿಕೆಯನ್ನು ರಾಜ್ಯ ಸರ್ಕಾರ ನಿರ್ಬಂಧಿಸಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಶುಕ್ರವಾರ ಆದೇಶ ಹೊರಡಿಸಿದ್ದಾರೆ. […]