ಮರಗಳ ತೆರವು: ಸಾರ್ವಜನಿಕ ಅಹವಾಲು ಸಭೆ, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ‌

ಉಡುಪಿ: ಕುಂದಾಪುರ ತಾಲೂಕು ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಕಿ.ಮೀ 312.40 ರಿಂದ 335.00 ರ ವರೆಗೆ (ಮಡಾಮಕ್ಕಿಯಿಂದ ಹಾಲಾಡಿವರೆಗೆ) ಆಯ್ದ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಅಡಚಣೆಯಾಗಿರುವ ವಿವಿಧ ಜಾತಿಯ 181 ಮರಗಳನ್ನು ಹಾಗೂ ಬ್ರಹ್ಮಾವರ ತಾಲೂಕು ಆವರ್ಸೆ ಹಾಗೂ ಹಿಲಿಯಾಣ ಗ್ರಾಮದ ಕೋಟ-ಗೋಳಿಯಂಗಡಿ ರಸ್ತೆಯ ಪಕ್ಕದಲ್ಲಿರುವ ಒಣಗಿದ, ರಸ್ತೆ ತಿರುವುಗಳಲ್ಲಿ ರಸ್ತೆ ವಿಸ್ತರಣೆಗೆ ಅಡಚಣೆಯಾದ ಹಾಗೂ ತೀರಾ ರಸ್ತೆಗೆ ಬಾಗಿದ ಒಟ್ಟು 73 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ. ಸದ್ರಿ ಸ್ಥಳದಲ್ಲಿರುವ ಮರಗಳು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯಡಿ […]

ನೈಟ್ ಕರ್ಫ್ಯೂನಲ್ಲಿ ಮಹತ್ವದ ಬದಲಾವಣೆ: ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಬ್ರಿಟನ್ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನವರಿ 2ರ ವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಮಹತ್ವದ ಆದೇಶ ನೀಡಿದೆ. ಆದರೆ ಇದೀಗ ತರಾತುರಿಯಲ್ಲಿ ಜಾರಿಗೊಳಿಸಿದ ಆದೇಶದಲ್ಲಿ ಸರ್ಕಾರ ಮಾರ್ಪಾಡು ತಂದು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ: ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯಲ್ಲಿ ಇಂದಿನ ಬದಲಾಗಿ ನಾಳೆ (ಡಿ. 24)ರ ರಾತ್ರಿ ಜನವರಿ 2ರವರೆಗೆ ರಾತ್ರಿ 11ರಿಂದ ಬೆಳಿಗ್ಗೆ 5 ಗಂಟೆ ತನಕ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ. ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆ […]

ಮಣಿಪಾಲ: ಬ್ರಹ್ಮಾವರ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ನೇಣಿಗೆ ಶರಣು

ಮಣಿಪಾಲ: ಬ್ರಹ್ಮಾವರದ ಸಹಕಾರಿ ಸೊಸೈಟಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಹಾಡಿಯಲ್ಲಿ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯ ಪೆರಂಪಳ್ಳಿ ಎಂಬಲ್ಲಿ ನಡೆದಿದೆ. ಬ್ರಹ್ಮಾವರದ ಉಪ್ಪಿನಕೋಟೆಯ ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೃಥ್ವಿ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಸಾಲದ ಸುಳಿಗೆ ಸಿಲುಕಿದ್ದ ಎನ್ನಲಾಗಿದೆ. ಅಲ್ಲದೆ ಇಂದು ಮುಂಜಾನೆ ಈತ ತನ್ನ ಮಾವನಿಗೆ ‘ತಾನು ವಿಪರೀತ ಸಾಲ ಮಾಡಿದ್ದು, ನನಗೆ ಬದುಕಲು ಸಾಧ್ಯವಾಗುತ್ತಿಲ್ಲ. ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ವಾಟ್ಸಾಪ್ ಸಂದೇಶ ಕಳುಹಿಸಿದ್ದನು. ಬಳಿಕ ಪೆರಂಪಳ್ಳಿಯ […]

ಪಡುಬಿದ್ರಿ ಬಾರ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು

ಪಡುಬಿದ್ರಿ: ಬಾರ್ ಮ್ಯಾನೇಜರ್ ಒಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಡ್ವೆ ಲಾಡ್ಜ್ ನಲ್ಲಿ ನಡೆದಿದೆ. ಪಡುಬಿದ್ರಿಯ ಡೌನ್ ಟೌನ್ ಬಾರ್ ನ ಮ್ಯಾನೇಜರ್ ಸುರೇಶ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಮೂಲತಃ ನಿಟ್ಟೆಯ ನಿವಾಸಿಯಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಹೃದಯ ಬಡಿದರೆ ಬರಲಿ ಕನ್ನಡ: ಶರಧಿ ಶೆಟ್ಟಿ ಬರೆದ ಕನ್ನಡಾಭಿಮಾನದ ಬರಹ

»ಶರಧಿ ಶೆಟ್ಟಿ ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿ ನಿಮಿರುವುದು ಕಾಮನ‌ ಬಿಲ್ಲನ್ನು ಕವಿಯೊಳು ತೆಕ್ಕನೆ ಮನೆ ಮೈ ಮರೆಯುವುದು ಕನ್ನಡ ಎಂದರೆ ನಾವು ಅತ್ಯಂತ ಪ್ರೀತಿಯಿಂದ ಆರಾಧನಾ ಭಾವನೆಯಿಂದ ನೋಡುತ್ತೇವೆ. ಹಿಂದಿ, ಬಂಗಾಳಿ ಮತ್ತು ಪಂಜಾಬಿ ಈ ಭಾಷೆಗಳು ಇತ್ತೀಚಿನ ಭಾಷೆಗಳು.ಈ ಕನ್ನಡ ಎನ್ನುವಂತಹ ಒಂದು ಲೋಕ ಒಂದು ರಾಜ್ಯದ ಸ್ವರೂಪ.ಅಂದರೆ ಕನಾ೯ಟಕ ಎಂಬ ರೂಪ ಪಡೆದುಕೊಂಡಿದೆ.ಕನ್ನಡಕ್ಕೆ ಸುಮಾರು ೨೦೦೦ ವಷ೯ ಸುದೀರ್ಘ ಇತಿಹಾಸವಿದೆ. ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯನ್ನು ವಿವಿಧ ರೂಪದಲ್ಲಿ ೪೫ ದಶಲಕ್ಷ […]