ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಸಸಿಗಳ ದತ್ತು ಸ್ವೀಕಾರ ಕಾರ್ಯಕ್ರಮ; ಪ್ರಕೃತಿಯನ್ನು ಪ್ರೀತಿಸಿ-ಗುರುರಾಜ್ ಸನಿಲ್

ಶಿರ್ವ: ಮನುಷ್ಯರಂತೆಯೇ ಪ್ರಕೃತಿಯಲ್ಲಿರುವ ಸಕಲ ಜೀವಸಂಕುಲಗಳಿಗೂ ಭಾವನೆಗಳಿವೆ. ಇವು ಪ್ರಕೃತಿಯ ಸಮತೋಲನತೆಗೂ ಅವಶ್ಯಕ. ಆದ್ದರಿಂದ ನಾವೆಲ್ಲರೂ ಪ್ರಕೃತಿಯನ್ನು ಪ್ರೀತಿಸಬೇಕು ಎಂದು ಖ್ಯಾತ ಉರಗತಜ್ಞ ಗುರುರಾಜ್ ಸನಿಲ್‍ ಹೇಳಿದರು. ಶಿರ್ವ ಸಂತ ಮೇರಿ ಕಾಲೇಜಿನ ಮಾನವಿಕ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ ಘಟಕವು ಉಡುಪಿಯ ನಮ್ಮ ಮನೆ ನಮ್ಮ ಮರ ಸಂಸ್ಥೆಯ ಸಹಯೋಗದೊಂದಿಗೆ ರೈತರ ದಿನದ ಅಂಗವಾಗಿ ಇಂದು ಕಾಲೇಜಿನಲ್ಲಿ ಆಯೋಜಿಸಿದ ‘ಸಸಿಗಳ ದತ್ತು ಸ್ವೀಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಮನೆ, ನಮ್ಮ ಮರ ಸಂಘಟನೆಯ […]

ನೈಟ್ ಕರ್ಫ್ಯೂ ಇಂದಲ್ಲ ನಾಳೆ: ಸಮಯದಲ್ಲಿ ಬದಲಾವಣೆ

ಬೆಂಗಳೂರು: ರೂಪಾಂತರಗೊಂಡಿರುವ ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನವರಿ 2ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ ಈಗ ಕರ್ಫ್ಯೂ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಇಂದಿನ ಬದಲು ನಾಳೆಯಿಂದ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ. ಇಂದೇ ಕರ್ಫ್ಯೂ ಹೇರಿದರೆ ಜನರಿಗೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಈ ಬದಲಾವಣೆ ಮಾಡಲಾಗಿದೆ. ಸಮಯದಲ್ಲಿ ಬದಲಾವಣೆ: ಈ ಹಿಂದೆ ಆದೇಶಿಸಲಾದ ಮಾರ್ಗಸೂಚಿಯಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿತ್ತು. ಆದರೆ ಈಗ ಆದೇಶದಲ್ಲಿ ಬದಲಾವಣೆ ಮಾಡಲಾಗಿದೆ. […]

ರೈತನಿಂದ ಅನ್ನ ಉಣ್ಣುವ ನಾವು ಈ ಪ್ರತಿಜ್ಞೆಗಳನ್ನು ಮಾಡಲೇಬೇಕು: ರಾಷ್ಟ್ರೀಯ ಕೃಷಿಕರ ದಿನದ ವಿಶೇಷ ಇದು

ಇಂದು ರಾಷ್ಟ್ರೀಯ ಕೃಷಿಕರ ದಿನ. ಕೃಷಿಕನ ಶ್ರಮದ ಬೆವರು ಒಂದು ದಿನ ಹರಿಯದಿದ್ದರೂ ಜಗತ್ತಿನಲ್ಲಿ ಜನ ಸಾಮಾನ್ಯರ ಹೊಟ್ಟೆ ಹೊರೆಯುವುದು ಬಹಳ ಕಷ್ಟವಿದೆ. ಹಾಗಾಗಿ ಪ್ರತಿದಿನವೂ ಕೃಷಿಕರ ದಿನವೇ. ನಾವು ಕೃಷಿಕರಲ್ಲದೇ ಇರಬಹುದು. ಆದರೆ ಪ್ರತಿಯೊಬ್ಬರೂ ಆತನನ್ನು ಅವಲಂಬಿಸಿಯೇ ಬದುಕುತ್ತಿರುವವರಾದ್ದರಿಂದ ಆತನ ಶ್ರಮಕ್ಕೆ, ಬೆವರಿಗೆ ಗೌರವ ಕೊಡಲು ವರ್ಷವಿಡೀ ಹೀಗೆ ಮಾಡೋಣ. ಇದು ಉಡುಪಿ xpress ಕಾಳಜಿ • ಅವಶ್ಯವಿದ್ದಷ್ಟೇ ಆಹಾರ ತೆಗೆದುಕೊಂಡು ಒಂದಿಷ್ಟನ್ನೂ ತಟ್ಟೆಯಲ್ಲಿ ವ್ಯರ್ಥ‌ಮಾಡದೇ ಊಟ/ತಿಂಡಿ ಮಾಡೋಣ. • ವರ್ಷಕ್ಕೆ ಕನಿಷ್ಠ ಒಂದಾದರೂ ಗಿಡ […]

ಗೆಜ್ಜೆ ಕಟ್ಟಿ ಭರವಸೆಯ ಹೆಜ್ಜೆ ಹಾಕುತ್ತಿರುವ ದಿವ್ಯಾ ಹೊಳ್ಳ: ಕಣ್ಣೋಟದಲ್ಲಿ ಸೆಳೆಯೋ ಕಲಾವಿದೆ

»ಮಂಜುನಾಥ್ ಶೆಣೈ ಆಧುನಿಕ ಮಾಧ್ಯಮಗಳ ಅಭಿವೃದ್ಧಿ ಹಾಗೂ ಅದರ ಬಳಕೆ ಹೆಚ್ಚಾಗಿರುವ ಕಾಲವಿದು. ಯುವ ಜನತೆ ಸಾಹಿತ್ಯ, ಕಲಾಭಿರುಚಿಯಿಂದ ಕೊಂಚ ಕೊಂಚವೇ ದೂರವಾಗುತ್ತಿದ್ದಾರೆ ಎನ್ನುವಾಗಲೇ ಒಂದಷ್ಟು ಯುವಕ ಯುವತಿಯರು ಕಲಾರಂಗದಲ್ಲಿ ಮುಖ ಮಾಡಿ ಭರವಸೆ ಮೂಡಿಸುತ್ತಾರೆ. ಹೌದು. ಕರಾವಳಿಯ “ಗಂಡುಕಲೆ” ಎಂದೇ ಪ್ರಸಿದ್ದಿ ಪಡೆದ ಯಕ್ಷಗಾನವನ್ನು ಉಳಿಸುವಲ್ಲಿ ಒಂದೇ ಕುಟುಂಬದ ನಾಲ್ವರು ದಿಟ್ಟ ಹೆಜ್ಜೆಯೊಂದಿಗೆ ಕಾಲಿಗೆ ಗೆಜ್ಜೆ ,ಮುಖಕ್ಕೆ ಬಣ್ಣ ಹಚ್ಚಿ ಇದೀಗ ಹೊಸ ಭರವಸೆ ಮೂಡಿಸುತ್ತಿದ್ದಾರೆ.   ಕರಾವಳಿಯಲ್ಲಿ ಇಂದು ಕಲೆಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ, ಕಲಾವಿದರು […]

ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ: ಸಿಎಂ

ಬೆಂಗಳೂರು: ರೂಪಾಂತರಗೊಂಡಿರುವ ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ (ಡಿ.23) ಜನವರಿ 2ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇಂದು ರಾತ್ರಿಯಿಂದಲೇ ಈ ಕ್ರಮ ಜಾರಿಗೆ ಬರಲಿದೆ. ಇಡೀ ರಾಜ್ಯಕ್ಕೆ ಈ ಆದೇಶ ಅನ್ವಯವಾಗಲಿದೆ ಎಂದರು.