ಅತೀ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಸ್ಕೂಪಿ ಸ್ಕೂಟರ್: ಇದರ ಮೈಲೇಜ್ ನೋಡಿದ್ರೆ ನೀವು ಕೊಳ್ಳುವುದು ಗ್ಯಾರಂಟಿ.!
ನವದೆಹಲಿ: ಪ್ರತಿ ಒಂದು ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 59 ಕಿ.ಮೀ. ಮೈಲೇಜ್ ನೀಡಲ್ಲ ಸ್ಕೂಟರ್ ಅತೀ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಹೌದು, ಹೊಂಡಾ ಕಂಪೆನಿಯು ‘ಸ್ಕೂಪಿ ಸ್ಕೂಟರ್’ ಎಂಬ ನೂತನ ಮಾದರಿಯ ಸ್ಕೂಟರ್ ಅನ್ನು ಶೀಘ್ರದಲ್ಲೇ ವಿಶ್ವದಾದ್ಯಂತ ಬಿಡುಗಡೆ ಮಾಡಲಿದೆ. ಇದು 59 ಕಿ.ಮೀ. ಮೈಲೇಜ್ ನೀಡಲಿದ್ದು, ಈಗಾಗಲೇ ಇಂಡೋನೇಷಿಯಾದಲ್ಲಿ ಈ ಸ್ಕೂಟರ್ 2010ರಲ್ಲಿ ಬಿಡುಗಡೆಯಾಗಿದೆ. ಇಂಡೋನೇಷಿಯಾದಲ್ಲಿ ಬಿಡುಗಡೆಯಾಗಿರುವ ಈ ಸ್ಕೂಟರ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಇದೀಗ ವಿಶ್ವದ್ಯಂತ […]
ಬಿಹಾರ: ಸತತ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ
ಬಿಹಾರ: ಸತತ ನಾಲ್ಕನೇ ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ 7 ನೇ ಬಾರಿಗೆ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಹಾರದ ರಾಜ್ಯಪಾಲ ಫಗು ಚೌಹಾಣ್ ನಿತೀಶ್ ಕುಮಾರ್ಗೆ ಪ್ರಮಾಣವಚನ ಭೋದಿಸಿದ್ದಾರೆ. ಇನ್ನು ಬಿಹಾರ ಉಪಮುಖ್ಯಮಂತ್ರಿಗಳಾಗಿ ಬಿಜೆಪಿಯ ತಾರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸಮಾರಂಭದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ ಹಾಜರಿದ್ದರು. ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ […]
ಕಾರ್ಕಳ: ಯೂತ್ ಬಿಲ್ಲವ ಸಂಘಟನೆಯಿಂದ ದೀಪಾವಳಿ ಆಚರಣೆ
ಕಾರ್ಕಳ: ಯೂತ್ ಬಿಲ್ಲವ ಸಂಘಟನೆ ಕಾರ್ಕಳ ಇದರ ವತಿಯಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ಕೋಟಿ-ಚೆನ್ನಯ ಥೀಮ್ ಪಾರ್ಕ್ ನಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾರ್ಕಳ ಪುರಸಭೆಯ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್ ಕೆ, ಯೂತ್ ಬಿಲ್ಲವ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನ ಜನತೆ ಉಪಸ್ಥಿತರಿದ್ದರು. ಭಕ್ತಿಭಾವದಿಂದ ಸಾಮೂಹಿಕವಾಗಿ ದೀಪ ಬೆಳಗಿಸಿ ಬಲೀಂದ್ರ ಪೂಜೆಯನ್ನು ನೆರವೇರಿಸಲಾಯಿತು. ಬೆಳಿಗ್ಗೆ ಕೋಟಿ-ಚೆನ್ನಯ ಥೀಮ್ ಪಾರ್ಕ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಯಿತು.
ಅವನಿ ಫರ್ನೀಚರ್ ಅಂಡ್ ಇಂಟೀರಿಯರ್ಸ್ ಶೋರೂಂನಲ್ಲಿ ದೀಪಾವಳಿ ಧಮಾಕ: ವಿವಿಧ ಕಂಪನಿಯ ಫರ್ನಿಚರ್ ಮೇಲೆ ಶೇ. 30 ಡಿಸ್ಕೌಂಟ್ ಪಡೆಯಿರಿ
ಉಡುಪಿ: ಅಗ್ಗದ ಬೆಲೆಯೊಂದಿಗೆ ಉತ್ಕೃಷ್ಟ ಗುಣಮಟ್ಟದ ಗೃಹೋಪಯೋಗಿ ಪೀಠೋಪಕರಣಗಳನ್ನು ಮನೆಗೆ ತರುವ ಪ್ಲ್ಯಾನ್ ಮಾಡಿದ್ದೀರಾ.?. ಹಾಗಾದ್ರೆ ನಿಮಗೆ ಇಲ್ಲಿ ಸಿಗುತ್ತೇ ಭಾರೀ ರಿಯಾಯಿತಿಯೊಂದಿಗೆ ಗೃಹೋಪಯೋಗಿ ಪೀಠೋಪಕರಣಗಳು ಹಾಗೂ ಆಕರ್ಷಕ ಇಂಟೀರಿಯರ್ಸ್ ಸಾಮಾಗ್ರಿಗಳು. ಯಸ್, ದೀಪಾವಳಿ ಪ್ರಯುಕ್ತ ಮಲ್ಪೆ ಕಲ್ಮಾಡಿ ರಸ್ತೆಯಲ್ಲಿ ಇರುವ’ ಅವನಿ ಫರ್ನೀಚರ್ ಅಂಡ್ ಇಂಟೀರಿಯರ್ಸ್ ಶೋರೂಂ’ ಗೃಹೋಪಯೋಗಿ ಪೀಠೋಪಕರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ. ವಿವಿಧ ಕಂಪನಿಯ ಫರ್ನಿಚರ್ ಗಳು ಶೇ. 30 ವಿಶೇಷ ರಿಯಾಯತಿಯೊಂದಿಗೆ ಗ್ರಾಹಕರಿಗೆ ಲಭ್ಯವಿದೆ. ಆದ್ರೆ ಈ […]
ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಗೆ ಬಿಜೆಪಿ ಗಾಳ ?; ಪಕ್ಷಕ್ಕೆ ಬರುವಂತೆ ಮುಕ್ತ ಆಹ್ವಾನ
ಮಂಗಳೂರು: ಪಂಚಾಯತ್ ಚುನಾವಣೆ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ದಕ್ಷಿಣ ಕೆನರಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಬಿಜೆಪಿ ಗಾಳ ಹಾಕಿದೆ ಎಂದು ತಿಳಿದುಬಂದಿದೆ. ಭಾನುವಾರ ಮಂಗಳೂರಿನಲ್ಲಿ ನಡೆದ 67 ನೇ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಪಕ್ಷಕ್ಕೆ ಸೇರಲು ರಾಜೇಂದ್ರ ಕುಮಾರ್ ಅವರಿಗೆ ಮುಕ್ತ ಆಹ್ವಾನ ನೀಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ರಾಜೇಂದ್ರ […]