ಅತೀ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಸ್ಕೂಪಿ ಸ್ಕೂಟರ್: ಇದರ ಮೈಲೇಜ್ ನೋಡಿದ್ರೆ ನೀವು ಕೊಳ್ಳುವುದು ಗ್ಯಾರಂಟಿ.!

ನವದೆಹಲಿ: ಪ್ರತಿ ಒಂದು ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 59 ಕಿ.ಮೀ. ಮೈಲೇಜ್ ನೀಡಲ್ಲ ಸ್ಕೂಟರ್ ಅತೀ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ.

ಹೌದು, ಹೊಂಡಾ ಕಂಪೆನಿಯು ‘ಸ್ಕೂಪಿ ಸ್ಕೂಟರ್’ ಎಂಬ ನೂತನ ಮಾದರಿಯ ಸ್ಕೂಟರ್ ಅನ್ನು ಶೀಘ್ರದಲ್ಲೇ ವಿಶ್ವದಾದ್ಯಂತ ಬಿಡುಗಡೆ ಮಾಡಲಿದೆ. ಇದು 59 ಕಿ.ಮೀ. ಮೈಲೇಜ್ ನೀಡಲಿದ್ದು, ಈಗಾಗಲೇ ಇಂಡೋನೇಷಿಯಾದಲ್ಲಿ ಈ ಸ್ಕೂಟರ್ 2010ರಲ್ಲಿ ಬಿಡುಗಡೆಯಾಗಿದೆ.

ಇಂಡೋನೇಷಿಯಾದಲ್ಲಿ ಬಿಡುಗಡೆಯಾಗಿರುವ ಈ ಸ್ಕೂಟರ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಇದೀಗ ವಿಶ್ವದ್ಯಂತ ಈ ಸ್ಕೂಟರ್ ಬಿಡುಗಡೆ ಮಾಡಲು ಹೊಂಡಾ ನಿರ್ಧರಿಸಿದೆ.

ಇಂಡೋನೇಷಿಯಾದಲ್ಲಿ ಇದರ ಬೆಲೆ 19.95 ಮಿಲಿಯನ್ IDR. ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಸ್ಕೂಪಿ ಸ್ಕೂಟರ್ ಬೆಲೆ 1.05 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ನೂತನ ಸ್ಕೂಟರ್ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಇದೆ. LED ಹೆಡ್‌ಲೈಟ್ ಸೇರಿದಂತೆ ಮುಂಭಾಗದ ಶೈಲಿ ಬದಲಾಗಿದೆ.

ಸ್ಪೊರ್ಟಿ, ಫ್ಯಾಶನ್ ಸೇರಿದಂತೆ ನಾಲ್ಕು ವೇರಿಯೆಂಟ್‌ಗಳಲ್ಲಿ ಸ್ಕೂಪಿ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಇನ್ನು 15.4 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. USB ಚಾರ್ಜರ್ ಸೇರಿದಂತೆ ಹಲವು ಫೀಚರ್ಸ್ ಈ ಸ್ಕೂಟರ್‌ನಲ್ಲಿದೆ.