ನವೆಂಬರ್ 5ರೊಳಗೆ ಮೊರಾಟೋರಿಯಂ ಚಕ್ರಬಡ್ಡಿ ಹಣವನ್ನು ವಾಪಸ್ ಸಾಲಗಾರರ ಖಾತೆಗೆ ಪಾವತಿಸಿ: ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಸಾಲ ಮರುಪಾವತಿ ಅವಧಿ ವಿಸ್ತರಣೆ (ಲೋನ್ ಮೊರಾಟೋರಿಯಂ) ಯಲ್ಲಿ ಸಾಲದ ಮೇಲೆ ಪಾವತಿಸಿಕೊಂಡಿರುವ ಚಕ್ರಬಡ್ಡಿಯನ್ನು ವಾಪಸ್ ಅರ್ಹ ಸಾಲಗಾರರ ಖಾತೆಗಳಿಗೆ ನವೆಂಬರ್ 5ರೊಳಗೆ ನೀಡುವಂತೆ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಇದನ್ನು ಉಲ್ಲೇಖಿಸಿದೆ. 2 ಕೋಟಿ ರೂಪಾಯಿ ಮೊತ್ತದ ಸಾಲಗಳಿಗೆ ವಿಧಿಸಲಾಗಿರುವ, ಆರ್ ಬಿಐ ಸಾಲ ಮರುಪಾವತಿ ಅವಧಿ ವಿಸ್ತರಣೆ ಯೋಜನೆಯಡಿ ಬರುವ ಚಕ್ರ ಬಡ್ಡಿಗಳಿಗೆ ಈ ನಿಯಮ ಅನ್ವಯವಾಗಲಿದೆ. ಹಣವನ್ನು […]

ಮಂಗಳೂರು: ಲಾರಿ- ಬೈಕ್ ನಡುವೆ ಭೀಕರ ಅಪಘಾತ; ನವದಂಪತಿ ದುರ್ಮರಣ

ಮಂಗಳೂರು: ಲಾರಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನವದಂಪತಿಗಳು ದುರ್ಮರಣ ಹೊಂದಿದ ಘಟನೆ ಮಂಗಳೂರಿನ ತೊಕ್ಕೊಟ್ಟು ಓವರ್‌ಬ್ರಿಡ್ಜ್‌ನಲ್ಲಿ ಇಂದು ಸಂಭವಿಸಿದೆ. ಮೃತರನ್ನು ಬಜಾಲ್ ನಿವಾಸಿ ರಯಾನ್ ಫರ್ನಾಂಡಿಸ್ ಮತ್ತು ಪ್ರಿಯಾ ಫರ್ನಾಂಡಿಸ್ ಎಂದು ಗುರುತಿಸಲಾಗಿದೆ. ದಂಪತಿಗಳಿಬ್ಬರು ಬೈಕ್ ನಲ್ಲಿ ಉಳ್ಳಾಲ ಕಡೆಗೆ ತೆರಳುವ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಪ್ರಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಯಾನ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.  

ಕಾರ್ಕಳ ಪುರಸಭೆ ಬಿಜೆಪಿ ತೆಕ್ಕೆಗೆ: ಅಧ್ಯಕ್ಷರಾಗಿ ಸುಮಾ, ಉಪಾಧ್ಯಕ್ಷರಾಗಿ ಪಲ್ಲವಿ ಆಯ್ಕೆ

ಕಾರ್ಕಳ: ಕಾರ್ಕಳ ಪುರಸಭೆ ಕೊನೆಗೂ ಬಿಜೆಪಿ ತೆಕ್ಕೆಗೆ ಒಲಿದಿದ್ದು, ಅಧ್ಯಕ್ಷರಾಗಿ ಬಿಜೆಪಿಯ ಸುಮಾ, ಉಪಾಧ್ಯಕ್ಷರಾಗಿ ಪಲ್ಲವಿ ಆಯ್ಕೆಯಾಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಆದರೆ ಕಡೆಗೂ ಪುರಸಭೆ ಬಿಜೆಪಿ ಪಾಲಾಗಿದೆ. ಒಟ್ಟು 23 ಸದಸ್ಯ ಬಲ ಹೊಂದಿರುವ ಕಾರ್ಕಳ ಪುರಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ತಲಾ 11, ಪಕ್ಷೇತರ 1 ಸ್ಥಾನದಲ್ಲಿ ಗೆಲುವು ಕಂಡಿದ್ದರು. ಆದರೆ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಹಾಗೂ ಸಂಸದರಿಗೂ ಮತದಾನ ಮಾಡಲು ಅವಕಾಶ ಇರುವುದರಿಂದ ಕಾರ್ಕಕ ಬಿಜೆಪಿ […]

ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಯೋಜನೆ: ಅಧಿಸೂಚನೆ ಹೊರಡಿಸಿದ ಆರ್‌ಬಿಐ

ಮುಂಬೈ: ಕೇಂದ್ರ ಸರ್ಕಾರದ ಹಣಕಾಸು ಸಮಿತಿ ಜಾರಿಗೊಳಿಸಿರುವ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಯೋಜನೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಆರ್‌ಬಿಐ, ಸರ್ಕಾರ ಅಕ್ಟೋಬರ್ 23, 2020 ರಂದು ನಿಗದಿತ ಸಾಲ ಖಾತೆಗಳಲ್ಲಿ (2020ರ ಮಾ.1 ರಿಂದ ಆ.31) ಸಾಲಗಾರರಿಗೆ ಆರು ತಿಂಗಳ ಕಾಲ ಚಕ್ರ ಬಡ್ಡಿ ಮತ್ತು ಸರಳ ಬಡ್ಡಿ ನಡುವಿನ ವ್ಯತ್ಯಾಸವನ್ನು ಎಕ್ಸ್-ಗ್ರೇಷಿಯಾ ಪಾವತಿ ನೀಡುವ ಯೋಜನೆ ಪ್ರಕಟಿಸಿದೆ. ಇದರ ಅನುಸಾರ ಮಾರ್ಚ್ 1 ರಿಂದ […]

ಬ್ರಹ್ಮಾವರ: ಶೆಟರ್ ಮುರಿದು ₹1.40 ಲಕ್ಷ ಮೌಲ್ಯದ ಗೇರುಬೀಜ ಕಳವು

ಬ್ರಹ್ಮಾವರ: ತಾಲ್ಲೂಕಿನ ಚೇರ್ಕಾಡಿ ಗ್ರಾಮದ ಮುಂಡ್ಕಿನ್‌ಜೆಡ್ಡುವಿನ ವಿಜಯದುರ್ಗಾ ಗೇರುಬೀಜ ಕಾರ್ಖಾನೆಯಲ್ಲಿ 1.40 ಲಕ್ಷ ಮೌಲ್ಯದ ತಲಾ 10 ಕೆ.ಜಿ. ತೂಕದ 32 ಗೇರುಬೀಜ ಡಬ್ಬಗಳನ್ನು ಕಳವು ಮಾಡಲಾಗಿದೆ. ನವರಾತ್ರಿಯ ಹಿನ್ನೆಲೆಯಲ್ಲಿ ಅ.21ರಿಂದ 26ರ ವರೆಗೆ ಕಾರ್ಖಾನೆಯ ಕೆಲಸದವರಿಗೆ ರಜೆ ನೀಡಲಾಗಿತ್ತು. ಆದ್ದರಿಂದ ಗೇರುಬೀಜಗಳನ್ನು ಸಂಸ್ಕರಿಸಿ ತಲಾ 10 ಕೆಜಿ ತೂಗುವ ಡಬ್ಬಗಳಲ್ಲಿ ತುಂಬಿಸಿ ಸ್ಟಾಕ್ ರೂಮ್‌ನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಅ. 27ರಂದು ಬೆಳಿಗ್ಗೆ 7.30ಕ್ಕೆ ಕಾರ್ಖಾನೆಯ ಮಾಲೀಕ ರಾಮಕೃಷ್ಣ ಶಾನುಭಾಗ್ ಅವರು ಕಾರ್ಖಾನೆಯ ಬೀಗವನ್ನು ತೆರೆದು ಒಳಗೆ ಹೋಗಿ […]