ಮಂಗಳೂರು: ಲಾರಿ- ಬೈಕ್ ನಡುವೆ ಭೀಕರ ಅಪಘಾತ; ನವದಂಪತಿ ದುರ್ಮರಣ

ಮಂಗಳೂರು: ಲಾರಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನವದಂಪತಿಗಳು ದುರ್ಮರಣ ಹೊಂದಿದ ಘಟನೆ ಮಂಗಳೂರಿನ ತೊಕ್ಕೊಟ್ಟು ಓವರ್‌ಬ್ರಿಡ್ಜ್‌ನಲ್ಲಿ ಇಂದು ಸಂಭವಿಸಿದೆ.

ಮೃತರನ್ನು ಬಜಾಲ್ ನಿವಾಸಿ ರಯಾನ್ ಫರ್ನಾಂಡಿಸ್ ಮತ್ತು ಪ್ರಿಯಾ ಫರ್ನಾಂಡಿಸ್ ಎಂದು ಗುರುತಿಸಲಾಗಿದೆ.

ದಂಪತಿಗಳಿಬ್ಬರು ಬೈಕ್ ನಲ್ಲಿ ಉಳ್ಳಾಲ ಕಡೆಗೆ ತೆರಳುವ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಪ್ರಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಯಾನ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.