ಉಡುಪಿಯಲ್ಲಿ ‘ಮಾರ್ವಾಡಿ ಹಠಾವೋ‌’ ಅಭಿಯಾನ ಆರಂಭಿಸಿರುವುದು ಖಂಡನೀಯ: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ

ಉಡುಪಿ: ಉಡುಪಿ ಜಿಲ್ಲೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಹೊಂದಿದೆ. ಏಕತೆಯ ಸಂಕೇತವಾಗಿರುವ ಉಡುಪಿಯಲ್ಲಿ ಮಾರ್ವಾಡಿ ಹಠಾವೋ‌ ಅಂತಹ ಯಾವುದೇ ಹಠಾವೋ ಅಭಿಯಾನಗಳು ನಡೆಯುತ್ತಿರುವುದು ಸರಿಯಲ್ಲ. ಇದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಉಡುಪಿ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಯುತ್ತಿರುವ ‘ಮಾರ್ವಾಡಿ ಹಠಾವೋ’ ಎಂಬ ಅಭಿಯಾನವನ್ನು ಖಂಡಿಸಿದರು ‘ಏಕ್ ಭಾರತ್ ಶೇಷ್ಠ ಭಾರತ್’ ಎಂಬ […]

ಮಂಗಳೂರಿನಿಂದ ಪೂನಾಗೆ ಬಸ್ ಸಂಚಾರ ಆರಂಭ

ಉಡುಪಿ: ಮಂಗಳೂರು ವಿಭಾಗದ ಮಂಗಳೂರು ಬಸ್ ನಿಲ್ದಾಣದಿಂದ ಪೂನಾಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಕೆಎಸ್ ಆರ್ ಟಿಸಿ ನಾನ್ ಎಸಿ ಸ್ಲೀಪರ್ ಕೋಚ್ ಬಸ್ ಸಂಚಾರ ಅಕ್ಟೋಬರ್ 26 ರಿಂದ ಆರಂಭಗೊಂಡಿದೆ. ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್‍ಒಪಿ ರಲ್ಲಿಯ ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು. ಸದರಿ ಸಾರಿಗೆಗೆ ಆನ್‍ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ವೆಬ್ ಸೈಟ್ (www.ksrtc.in) ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್ ಸಂಪರ್ಕಿಸುವಂತೆ […]

ಆತ್ರಾಡಿ: ಯುವತಿ ನಾಪತ್ತೆ

ಹಿರಿಯಡಕ: ಉಡುಪಿ ತಾಲೂಕು ಆತ್ರಾಡಿ ಗ್ರಾಮದ ನಿವಾಸಿ ನಿಶ್ಮಿತಾ (19) ಎಂಬುವವರು ಅಕ್ಟೋಬರ್ 22 ರಿಂದ ನಾಪತ್ತೆಯಾಗಿದ್ದಾರೆ. ಚಹರೆ: 152 ಸೆಂ.ಮೀ ಎತ್ತರವಿದ್ದು, ಬಿಳಿ ಮೈಬಣ್ಣ, ಸಾಧಾರಣ ಶರೀರ, ದುಂಡು ಮುಖ ಹೊಂದಿದ್ದು, ಕನ್ನಡ ತುಳು ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಬಂಟಕಲ್ಲು: ಬ್ಲೇಡಿನಲ್ಲಿ ಕೈ ಕೊಯ್ದುಕೊಂಡು ವಿವಾಹಿತ ಮಹಿಳೆ ಆತ್ಮಹತ್ಯೆ

ಶಿರ್ವಾ: ಬ್ಲೇಡಿನಲ್ಲಿ ಕೈ ಕೊಯ್ದುಕೊಂಡು ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವಾದ ಬಂಟಕಲ್ಲು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಬಂಟಕಲ್ಲು ಅರಸೀಕಟ್ಟೆ ನಿವಾಸಿ ಪ್ರೇಮಾ (38) ಎಂದು ಗುರುತಿಸಲಾಗಿದೆ. ಈಕೆ ಭಾನುವಾರ (ಅ. 25) ಬೆಳಿಗ್ಗೆ 11.30ಕ್ಕೆ ಮದ್ಯಸೇವಿಸಿ ಪತಿ ರಮೇಶ್ ಜತೆಗೆ ಮನೆಯಲ್ಲಿ ಜಗಳ ಮಾಡಿದ್ದಳು ಎನ್ನಲಾಗಿದೆ. ರಾತ್ರಿ ಮತ್ತೆ ಗಂಡನ ಜೊತೆಗೆ ಗಲಾಟೆ ಮಾಡಿದ್ದಳು. ಈಕೆಯ ತಲೆಗೆ ಏರಿದ್ದ ಮದ್ಯದ ನಶೆ ಇನ್ನೂ ಇಳಿದಿರಲಿಲ್ಲ. ಹಾಗಾಗಿ ಗಂಡ ರಾತ್ರಿ 8.30 ಸುಮಾರಿಗೆ […]

ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಡಾ. ವೈ. ನಾಗಪ್ಪ ನಿಧನ

ಹರಿಹರ: ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಡಾ. ವೈ.ನಾಗಪ್ಪ (87) ಅವರು ಅನಾರೋಗ್ಯದಿಂದ ಮಂಗಳವಾರ ನಿಧನ ಹೊಂದಿದರು. ಹರಿಹರ ವಿಧಾನಸಭಾ ಕ್ಷೇತ್ರದಿಂದ 1989, 1999 ಹಾಗೂ 2004ರಲ್ಲಿ ನಾಗಪ್ಪ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ನಾಗಪ್ಪ ಅವರು ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅವರು ಆರು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. 2008ರ ಚುನಾವಣೆಯಲ್ಲಿ ಸೋತ ಬಳಿಕ ರಾಜಕೀಯದಿಂದ ದೂರ ಉಳಿದಿದ್ದರು. ಅವರಿಗೆ ಒಬ್ಬ ಪುತ್ರ, ಮೂವರು ಪುತ್ರಿಯರು ಇದ್ದಾರೆ.