ಎಡನೀರು ಶ್ರೀಗಳು ಹಸ್ತಂಗತ: ಉಡುಪಿ ಯಕ್ಷಗಾನ ಕಲಾರಂಗದಿಂದ ಸಂತಾಪ

ಉಡುಪಿ: ಶನಿವಾರ ಅಸ್ತಂಗತರಾದ ಎಡನೀರು ಮಠಾಧೀಶ ಕೇಶವಾನಂದ ಭಾರತೀ ತೀರ್ಥ ಮಹಾಸ್ವಾಮಿಗಳಿಗೆ ಉಡುಪಿ ಯಕ್ಷಗಾನ ಕಲಾರಂಗ ಸಂತಾಪ ಸೂಚಿಸಿದೆ. ಶ್ರೀಗಳು ಮಠದ ಹೆಸರಲ್ಲೇ ಮೇಳವನ್ನು ಕಟ್ಟಿ ಹಲವು ವರ್ಷ ಮನ್ನಡೆಸಿದ್ದಲ್ಲದೆ ಸ್ವತಃ ಭಾಗವತಿಕೆ ಮೂಲಕ ಯಕ್ಷಗಾನಕ್ಕೆ ವಿಶೇಷ ಪಾವಿತ್ರ್ಯವನ್ನು ತಂದೊದಗಿಸಿದ್ದರು. ತನ್ನ ಮಠದ ಸದಸ್ಯರೆಂಬಂತೆ ನೂರಾರು ಕಲಾವಿದರನ್ನು ಪ್ರೀತಿ ವಿಶ್ವಾಸದಿಂದ ಕಂಡು ಪೋಷಿಸಿದರು. ಶ್ರೀಗಳು ಕಲೆ ಹಾಗೂ ಕಲಾವಿದರ ಶ್ರೇಯಸ್ಸಿಗೆ ನೀಡಿದ ಕೊಡುಗೆಗಾಗಿ ಶ್ರೀ ಭಾರತೀಕಲಾಸದನ ಸಂಸ್ಥೆಗೆ 2007ರಲ್ಲಿ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು ಯಕ್ಷಗಾನ ಕಲಾರಂಗ ಸಂಸ್ಥೆ […]

ಕಾರ್ಕಳ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನೆ

ಕಾರ್ಕಳ: ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ನ ವತಿಯಿಂದ ಗುರುವಂದನಾ ಕಾರ್ಯಕ್ರಮವು ಸೆಪ್ಟಂಬರ್ 5 ರಂದು ನಡೆಯಿತು. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಬೇಲಾಡಿ ವಿಠಲ ಶೆಟ್ಟಿ, ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,ಪೂರ್ಣಿಮಾ ಸಂಸ್ಥೆಯೊಂದಿಗೆ ತಮ್ಮ ಸಂಬಂಧವನ್ನು ನೆನಪಿಸಿಕೊಂಡು ಇಂದು ಗುರುವಂದನೆಯ ಮೂಲಕ ಸಾಮಾಜಿಕ ಬದ್ದತೆ ಈಡೆರಿಸಿದೆ ಎಂದರು. ತಾಲೂಕು ಶಿಕ್ಷಣಾಧಿಕಾರಿ ಜಿ. ಎಸ್. ಶಶಿಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರನ್ನು ಸನ್ಮಾನ ಮಾಡುವುದರ ಮೂಲಕ ಪೂರ್ಣಿಮಾ ಸಿಲ್ಕ್ಸ್ ಸಂಸ್ಥೆಯು ಬೇರೆ ಸಂಸ್ಥೆಗೂ ಮೇಲ್ಪಂಕ್ತಿ ಹಾಕಿದೆ ಎಂದರು. ಪ್ರಾಸ್ತಾವಿಕವಾಗಿ […]

ಎಡನೀರು ಶ್ರೀಗಳಿಗೆ ಉಡುಪಿಯಲ್ಲಿ ಪೇಜಾವರ ಶ್ರೀಪಾದರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಮರ್ಪಣೆ

ಉಡುಪಿ: ಶನಿವಾರ ನಮ್ಮನ್ನಗಲಿದ ಕಾಸರಗೋಡು ಎಡನೀರು ಶ್ರೀ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಕೇಶವಾನಂದ ಭಾರತೀ ತೀರ್ಥ ಮಹಾಸ್ವಾಮಿಗಳ ದಿವ್ಯಾತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸಿ ಉಡುಪಿಯ ಸಂಸ್ಕೃತ ಮಹಾವಿದ್ಯಾಲಯ ಮತ್ತು ಶ್ರೀಗಳ ಅಭಿಮಾನಿಗಳ ವತಿಯಿಂದ ಇಂದು ಕಾಲೇಜಿನ ಆವರಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಎಡನೀರು ಶ್ರೀಗಳ ಆಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಾಮಾಜಿಕ ಮತ್ತು ಧಾರ್ಮಿಕ ಕೊಡುಗೆಗಳನ್ನು ಹಾಗೂ ಉಡುಪಿಯ ಮಠಗಳು ಸಂಸ್ಕೃತ ಕಾಲೇಜಿನೊಂದಿಗಿನ‌ ಬಾಂಧವ್ಯವನ್ನು ಸ್ಮರಿಸಿದರು. ಶ್ರೀಗಳ ಆದರ್ಶಗಳು ನಮಗೆಲ್ಲ ಸದಾ ಮಾರ್ಗದರ್ಶಕವಾಗಲಿ. […]

ಬಿಲ್ವಪತ್ರೆ ಆರಾಧನೆಗೂ ಶ್ರೇಷ್ಠ ಆರೋಗ್ಯಕ್ಕೂ ಉತ್ತಮ: ಪೇಜಾವರ ಶ್ರೀ

ಉಡುಪಿ: ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ವಿಭಾಗ ಉಡುಪಿ ಹಾಗೂ ಪೇಜಾವರ ಮಠದ ಜಂಟಿ ಆಶ್ರಯದಲ್ಲಿ ಎಸ್ಎಂಎಸ್ ಪಿ ಸಂಸ್ಕೃತ ಕಾಲೇಜಿನ ಎನ್ಎಸ್ ಎಸ್ ಘಟಕಗಳ ಸಹಯೋಗದಲ್ಲಿ ಶ್ರೀಕೃಷ್ಣ ಜಯಂತಿ ಪ್ರಯುಕ್ತ ಇಂದಿನಿಂದ ಮೂರು ದಿನಗಳ ಕಾಲ ಸಂಸ್ಕೃತ ಕಾಲೇಜಿನ ಆವರಣದಲ್ಲಿ ಆಯೋಜಿಸಿರುವ ಭಕ್ತರಿಗೆ ಉಚಿತ ಬಿಲ್ವಪತ್ರೆ ಸಸಿ ವಿತರಣೆ ಕಾರ್ಯಕ್ರಮಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾನುವಾರ ಚಾಲನೆ ನೀಡಿದರು.   ಬಳಿಕ ಶ್ರೀಪಾದರು ಮಾತನಾಡಿ, ಉಡುಪಿ ನಾಗರಿಕರು, ಭಕ್ತರು ಆರಾಧನೆ ಹಾಗೂ ಆರೋಗ್ಯಕ್ಕೆ ಶ್ರೇಷ್ಠವಾಗಿರುವ […]

ತೆಲುಗು ನಿರ್ಮಾಪಕ ನೂತನ್ ನಾಯ್ಡು ಉಡುಪಿಯಲ್ಲಿ ಅರೆಸ್ಟ್

ಉಡುಪಿ: ಆಂಧ್ರಪ್ರದೇಶದಲ್ಲಿ ದಲಿತ ಯುವಕನ ಮೇಲಿನ ದೌರ್ಜನ್ಯ ಪ್ರಕರಣದ ಆರೋಪಿ ತೆಲುಗು ಚಿತ್ರ ನಿರ್ಮಾಪಕ ನೂತನ್ ನಾಯ್ಡು ಎಂಬಾತನನ್ನು ಪೊಲೀಸರು ಉಡುಪಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ವಿಶಾಖಪಟ್ಟಣ ಪೊಲೀಸರ ಮಾಹಿತಿಯ ಆಧಾರದ ಮೇಲೆ ನಿನ್ನೆ ಬೆಳಗ್ಗೆ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರ ನಿರ್ಮಾಪಕನಾಗಿರುವ ಈತ, ತೆಲುಗು ಬಿಗ್‌ಬಾಸ್ ಮೊದಲ ಆವೃತ್ತಿಯ ಸ್ಪರ್ಧಿ ಕೂಡ ಆಗಿದ್ದ. ದಲಿತ ಯುವಕನ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಈತನ ಪಾತ್ರವಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಆಂಧ್ರಪ್ರದೇಶದಲ್ಲಿ ಭಾರೀ […]