ಬಿಲ್ವಪತ್ರೆ ಆರಾಧನೆಗೂ ಶ್ರೇಷ್ಠ ಆರೋಗ್ಯಕ್ಕೂ ಉತ್ತಮ: ಪೇಜಾವರ ಶ್ರೀ

ಉಡುಪಿ: ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ವಿಭಾಗ ಉಡುಪಿ ಹಾಗೂ ಪೇಜಾವರ ಮಠದ ಜಂಟಿ ಆಶ್ರಯದಲ್ಲಿ ಎಸ್ಎಂಎಸ್ ಪಿ ಸಂಸ್ಕೃತ ಕಾಲೇಜಿನ ಎನ್ಎಸ್ ಎಸ್ ಘಟಕಗಳ ಸಹಯೋಗದಲ್ಲಿ ಶ್ರೀಕೃಷ್ಣ ಜಯಂತಿ ಪ್ರಯುಕ್ತ ಇಂದಿನಿಂದ ಮೂರು ದಿನಗಳ ಕಾಲ ಸಂಸ್ಕೃತ ಕಾಲೇಜಿನ ಆವರಣದಲ್ಲಿ ಆಯೋಜಿಸಿರುವ ಭಕ್ತರಿಗೆ ಉಚಿತ ಬಿಲ್ವಪತ್ರೆ ಸಸಿ ವಿತರಣೆ ಕಾರ್ಯಕ್ರಮಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾನುವಾರ ಚಾಲನೆ ನೀಡಿದರು.

 

ಬಳಿಕ ಶ್ರೀಪಾದರು ಮಾತನಾಡಿ, ಉಡುಪಿ ನಾಗರಿಕರು, ಭಕ್ತರು ಆರಾಧನೆ ಹಾಗೂ ಆರೋಗ್ಯಕ್ಕೆ ಶ್ರೇಷ್ಠವಾಗಿರುವ ಬಿಲ್ವವನ್ನು ಮನೆಮನೆಗಳಲ್ಲಿ ನೆಟ್ಟು ಪೋಷಿಸಬೇಕು ಎಂಂದು ಕರೆನೀಡಿದರು.

ವಲಯ ಅರಣ್ಯಾಧಿಕಾರಿ (ಸಾಮಾಜಿಕ ಅರಣ್ಯ) ರವೀಂದ್ರ ಆಚಾರ್ಯ, ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ, ಪ್ರಾಚಾರ್ಯ ಡಾ.ಎನ್.ಎಲ್. ಭಟ್, ಮಠದ ದಿವಾನ ಎಂ. ರಘುರಾಮಾಚಾರ್ಯ, ಉದ್ಯಮಿ ಯಶ್ ಪಾಲ್ ಸುವರ್ಣ, ದೇವರಾಜ್ ಪಾಣ , ಉಪನ್ಯಾಸ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದರು. ಮಂಗಳವಾರದವರೆಗೆ ಪ್ರತಿದಿನ ದಿನ‌ ಬೆಳಿಗ್ಗೆ 10ರಿಂದ ಸಂಜೆ 6 ವರೆಗೆ ಸಸಿ ವಿತರಣೆ ನಡೆಯಲಿದೆ.