ಕಾರ್ಕಳ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನೆ

ಕಾರ್ಕಳ: ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ನ ವತಿಯಿಂದ ಗುರುವಂದನಾ ಕಾರ್ಯಕ್ರಮವು ಸೆಪ್ಟಂಬರ್ 5 ರಂದು ನಡೆಯಿತು.

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಬೇಲಾಡಿ ವಿಠಲ ಶೆಟ್ಟಿ, ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು,ಪೂರ್ಣಿಮಾ ಸಂಸ್ಥೆಯೊಂದಿಗೆ ತಮ್ಮ ಸಂಬಂಧವನ್ನು ನೆನಪಿಸಿಕೊಂಡು ಇಂದು ಗುರುವಂದನೆಯ ಮೂಲಕ ಸಾಮಾಜಿಕ ಬದ್ದತೆ ಈಡೆರಿಸಿದೆ ಎಂದರು.

ತಾಲೂಕು ಶಿಕ್ಷಣಾಧಿಕಾರಿ ಜಿ. ಎಸ್. ಶಶಿಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರನ್ನು ಸನ್ಮಾನ ಮಾಡುವುದರ ಮೂಲಕ ಪೂರ್ಣಿಮಾ ಸಿಲ್ಕ್ಸ್ ಸಂಸ್ಥೆಯು ಬೇರೆ ಸಂಸ್ಥೆಗೂ ಮೇಲ್ಪಂಕ್ತಿ ಹಾಕಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪಾಲುದಾರರಾದ ರವಿಪ್ರಕಾಶ್ ಪ್ರಭು, ಜೀವನದಲ್ಲಿ ಯಶಸ್ಸು ಪಡೆಯಲು ಗುರುವಿನ ಪ್ರೇರಣೆಯಿಂದ ಮಾತ್ರಾ ಸಾದ್ಯ, ಜಾತಿ, ಮತ, ಬೇಧವಿಲ್ಲದೇ ವಿದ್ಯಾರ್ಥಿಗಳ ಏಳಿಗೆಯನ್ನೆ ಬಯಸುವವರು ಶಿಕ್ಷಕರು ಎಂದರು.

ನಮ್ಮ ವಸ್ರ ಉದ್ಯಮವು ವಿವಿದ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮವನ್ನು ಅಯೋಜಿಸಲು ಬದ್ದವಾಗಿದೆ. ನಮ್ಮ ಲಾಭಂಶದ ಒಂದು ಭಾಗವನ್ನು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ನಾವು ಬಯಸುತ್ತೇವೆ ಎಂದು ತಿಳಿಸಿದರು.

ಶ್ರೀ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಣ್ಣೆಹೊಳೆ ಪಾಂಡುರಂಗ ನಾಯಕ್, ಉಪನ್ಯಾಸಕರಾದ ನಾಗರಾಜ ನಾಯಕ್ ಶ್ರೀ ಭುವನೇಂದ್ರ ಪೌಢಶಾಲಾ ನಿವೃತ ಮುಖ್ಯೋಪಾಧ್ಯಾಯರಾದ ಶ್ರೀಧರ ಆಚಾರ್, ಮತ್ತು ಶಿಕ್ಷಕರಾದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಬೇಲಾಡಿ ವಿಠಲ ಶೆಟ್ಟಿ, ನಕ್ರೆ ಜೋರ್ಜ್ ಕ್ಯಾಸೋಲಿನೋ, ಮತ್ತು ಲಕ್ಷೀಕಾಂತ್ ಭಟ್, ಜೇಸಿಸ್ ಅಂಗ್ಲ ಮಾದ್ಯಮ ಶಾಲಾ ನಿವೃತ್ತ ಮುಖ್ಯೋಪಾದ್ಯಾಯಿನಿ ವೀರಾ ಪಾಯಸ್, ಎಸ್. ವಿ. ಟಿ. ಅಂಗ್ಲ ಮಾದ್ಯಮ ಶಾಲಾ ಮುಖ್ಯೋಪಾದ್ಯಾಯಿನಿ ಮೋಹಿನಿ ನಾಯಕ್,

ತೆಳ್ಳಾರು ಸರಕಾರಿ ಪೌಢಶಾಲಾ ವಿಜ್ಞನ ಶಿಕ್ಷಕಿ ಇಂದಿರಾ ಭಟ್, ಕಾರ್ಕಳ ಕುಕ್ಕೂಂದೂರಿನ ವಿಜೇತಾ ವಿಶೇಷ ಮಕ್ಕಳ ಶಾಲಾ ಸಂಚಾಲಕಿ ಡಾ| ಕಾಂತಿ ಹರೀಶ್, ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಆಧಕ್ಷರಾದ ಕನ್ನಡ ಶಿಕ್ಷಕ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ತಾಲೂಕು ಶಿಕ್ಷಣಾಧಿಕಾರಿ ಶಶಿಧರ್, ಇನ್ನ ಪೌಢ ಶಾಲಾ ಗಣಿತ ಶಿಕ್ಷಕ ರಾಜೇಂದ್ರ ಭಟ್ ಇವರಿಗೆ ಪೂರ್ಣಿಮಾ ಸಿಲ್ಕ್ಸ್ ವತಿಯಿಂದ  ಅಭಿನಂದಿಸಲಾಯಿತು.

ಸಪ್ಟಂಬರ್ 2೦ರ ವರೆಗೆ ಶಿಕ್ಷಕರಿಗಾಗಿ ಬಟ್ಟೆ ಖರೀದಿಯಲ್ಲಿ ವಿಶಷ 5% ರಿಯಾಯತಿ ನೀಡಲಾಗುವುದು ಎಂದು ಸಂಸ್ಥೆಯ ಪಾಲುದಾರರಾದ ಕಿರಣ ರವಿಪ್ರಕಾಶ್ ಪ್ರಭು ತಿಳಿಸಿದರು. ರಾಜೇಂದ್ರ ಭಟ್ ಕೆ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಸಮೂಹ ಸಂಸ್ಥೆಯ ಹರಿಪ್ರಸಾದ್ ಪ್ರಭು, ಸುಧೀರ್ ಪ್ರಭು, ಪ್ರಗತಿ ಪ್ರಭು, ಪ್ರಖ್ಯಾತಿ ಪ್ರಭು, ಪವಿತ್ರ ಪ್ರಭು ಉಪಸ್ಥಿತರಿದ್ದರು. ಅರ್. ವರದರಾಯ ಪ್ರಭು ವಂದಿಸಿದರು.