ಕರ್ಣ ಕುಂಡಲಧಾರಿಣಿ ಕಾದಂಬರಿ ಬಿಡುಗಡೆ

ಕಾರ್ಕಳ: ಉಪನ್ಯಾಸಕ ಪರಮ್ ಭಾರಧ್ವಜ್ ಅವರ ಚೊಚ್ಚಲ ಕೃತಿ ಕರ್ಣ ಕುಂಡಲಧಾರಿಣಿ ಕಾದಂಬರಿಯನ್ನು ಕಾರ್ಕಳ ರಾಮಸಮುದ್ರದ ದಡದಲ್ಲಿ ಜೆ.ಸಿ ತರಬೇತುದಾರ, ಲೇಖಕ ರಾಜೇಂದ್ರ ಭಟ್ ಕೆ. ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಓದುವ ಮತ್ತು ಬರೆಹಗಾರರ ಸಂಖ್ಯೆ ಕಡಿಮೆಯಾಗಿಲ್ಲ. ಮಾಧ್ಯಮ ಬದಲಾಗಿದೆಯಷ್ಟೆ. ಸಾಮಾಜಿಕ ಜಾಲತಾಣಗಳು ಅತ್ಯಂತ ವೇಗದಲ್ಲಿ ಸಮಾಜವನ್ನಾವರಿಸಿದೆ. ಜಾಗತಿಕ ವೇದಿಕೆಯಾಗಿರುವ ಆಧುನಿಕ ಮಾಧ್ಯಮಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಕರ್ಣ ಕುಂಡಲಧಾರಿಣಿ ಈಗಿನ ಯುವಕ ಯುವತಿಯರ ಮನಃಸ್ಥಿತಿಗೆ ಕನ್ನಡಿಯಂತಿದೆ. ವ್ಯಕ್ತಿಯೋರ್ವ ತನ್ನ ಮನಸ್ಸನ್ನು, ತನ್ನ ಸುತ್ತಲಿನ ಪರಿಸರವನ್ನು ಗ್ರಹಿಸಿ […]

ಉಡುಪಿಯಲ್ಲಿ ಇಂದು 156 ಮಂದಿ ಕೊರೊನಾದಿಂದ ಗುಣಮುಖ: ಐವರು ಕೊರೊನಾಗೆ ಬಲಿ

ಉಡುಪಿ: ಜಿಲ್ಲೆಯಲ್ಲಿ ಇಂದು 156 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 57 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 99 ಮಂದಿ ಸಹಿತ 156 ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 7557 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 103 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10236 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ […]

ಕೋವಿಡ್ ವಿಚಾರದಲ್ಲಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟರೆ, 24 ಗಂಟೆಯೊಳಗೆ ಅಮಾನತು: ಶಾಸಕ ರಘುಪತಿ ಭಟ್ 

ಉಡುಪಿ: ಕೋವಿಡ್ ವಿಚಾರದಲ್ಲಿ ಯಾವುದಾದರೂ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಅಥವಾ ಸೀಲ್ ಡೌನ್ ತೆಗೆಯಲು ಹಣ ಪಡೆದಿದ್ದಾರೆ. ಜಿಲ್ಲೆಯಲ್ಲಿ ಐದು ಬಿಜೆಪಿ ಶಾಸಕರು ಇದ್ದಾರೆ. ಅವರಿಗೆ ಮಾಹಿತಿ ನೀಡಿ. ಅದು ಎಷ್ಟೇ ದೊಡ್ಡ ಅಧಿಕಾರಿ ಆಗಿದ್ದರೂ ಅವರನ್ನು 24 ಗಂಟೆಯೊಳಗೆ ಅಮಾನತು ಮಾಡುತ್ತೇವೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು. ಉಡುಪಿ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೋವಿಡ್ ಪರೀಕ್ಷೆಯಲ್ಲಿ ಭಾರೀ ಗೋಲ್ ಮಾಲ್ ಆಗುತ್ತಿದೆ. ಹಣ ಮಾಡಲು ಕೋವಿಡ್ ಸಂಖ್ಯೆ ಹೆಚ್ಚಿಸುತ್ತಿದ್ದಾರೆ […]

ವಿಶ್ವಕರ್ಮ ಸಮುದಾಯಕ್ಕೆ 300 ಕೋಟಿ ರೂ. ಆರ್ಥಿಕ ಪ್ಯಾಕೇಜ್‌ ಘೋಷಿಸಿ: ವಿಶ್ವಕರ್ಮ ಮಹಾಸಭಾ ಆಗ್ರಹ

ಉಡುಪಿ: ನೇಕಾರರು, ಮೀನುಗಾರರ ಸಾಲ ಮನ್ನಾ ಮಾಡಿದಂತೆ ಅತೀ ಶೀಘ್ರವಾಗಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ಮನ್ನಾ  ಮಾಡಬೇಕು. ಕೊರೊನಾದಿಂದಾಗಿ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ವಿಶ್ವಕರ್ಮ ಸಮುದಾಯಕ್ಕೆ ತುರ್ತಾಗಿ 300 ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಉಡುಪಿ ಜಿಲ್ಲಾ ವಿಶ್ವಕರ್ಮ ಮಹಾಸಭಾದ ಮುಖಂಡ ನೇರಂಬಳ್ಳಿ ರಮೇಶ್ ಆಚಾರ್ಯ ಆಗ್ರಹಿಸಿದರು. ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊರೊನಾ ಸಮಸ್ಯೆಯಿಂದಾಗಿ ಸಮುದಾಯದ ಪರಿಸ್ಥಿತಿ ಮತ್ತಷ್ಟು ಶೋಚನೀಯ ಸ್ಥಿತಿಗೆ ತಲುಪಿದೆ. ಕಳೆದ ಆರೇಳು ವರ್ಷದಲ್ಲಿ […]