ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿ ನಿರಂಜನ್ ಭಟ್ ಗೆ ನಾಲ್ಕು ವರ್ಷಗಳ ಬಳಿಕ 15 ದಿನಗಳ‌ ಜಾಮೀನು ಮಂಜೂರು

ಉಡುಪಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ 2016ರಲ್ಲಿ ನಡೆದ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನಂದಳಿಕೆಯ ನಿರಂಜನ್ ಭಟ್(30)ಗೆ ಉಡುಪಿ ನ್ಯಾಯಾಲಯ 15 ದಿನಗಳ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ. ನಿರಂಜನ್ ಭಟ್ ತಂದೆ ಹಾಗೂ ಪ್ರಕರಣದ ಸಾಕ್ಷನಾಶ ಆರೋಪಿ ಶ್ರೀನಿವಾಸ ಭಟ್ ಜೂನ್ 22ರಂದು ಅನಾರೋಗ್ಯದಿಂದ ನಿಧನರಾಗಿದ್ದರು. ನಿರಂಜನ್  ಕಳೆದ ನಾಲ್ಕು ವರ್ಷಗಳಿಂದ ಜಾಮೀನು ಸಿಗದೆ ಜೈಲಿನಲ್ಲಿದ್ದಾನೆ. ಈತ ಶ್ರೀನಿವಾಸ್ ಭಟ್ ಅವರ ಏಕೈಕ ಪುತ್ರನಾಗಿರುವುದರಿಂದ, ಧಾರ್ಮಿಕ ಕಾರ್ಯ ನೆರವೇರಿಸಲು ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. […]

ಉಡುಪಿಯಲ್ಲಿ ಮತ್ತೆ ಕೊರೊನಾ ಆರ್ಭಟ: ಇಂದು 14 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಆರ್ಭಟ ಜೋರಾಗಿದ್ದು, ಇಂದು ಹೊಸದಾಗಿ 14 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1102ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

‘ಸಿಜಿಕೆ-2020 ರ ಪ್ರಶಸ್ತಿಗೆ ಕಲಾವಿದ ಚಂದ್ರನಾಥ ಬಜಗೋಳಿ ಆಯ್ಕೆ

ಕಾರ್ಕಳ: ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ, ಸಂಸ ಥಿಯೇಟರ್, ಅವಿರತ ಪುಸ್ತಕ ಬೆಂಗಳೂರು ಆರ್ಟ್ ಫೌಂಡೇಶನ್ ನೀಡುವ ಸಿಜಿಕೆ 2020ರ ಪ್ರಶಸ್ತಿಗೆ ಕಲಾವಿದ, ರಂಗ ನಿರ್ದೇಶಕ, ಕಾರ್ಕಳದ ಚಂದ್ರನಾಥ ಬಜಗೋಳಿ ಅವರು ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುಕುಮಾರ್ ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಂದ್ರನಾಥ ಬಜಗೋಳಿ ಕಳೆದ 24 ವರ್ಷಗಳಿಂದ ಚಿತ್ರಕಲೆ ಮತ್ತು ರಂಗಭೂಮಿಯ ಚಟುವಟಿಕೆಗಳಲ್ಲಿ ನಿರಂತರ ಸೇವೆ ಮಾಡುತ್ತಾ ಬಂದಿದ್ದು, ಐದು ದೊಡ್ಡ ನಾಟಕಗಳು ಹಾಗೂ 17 ಸಣ್ಣ ನಾಟಕಗಳನ್ನು ರಚಿಸಿದ್ದಾರೆ. ಹಿರಿಯ ಸಾಹಿತಿಗಳಾದ […]

ಜುಲೈ 1ರಂದು ಕೃಷ್ಣಮಠದಲ್ಲಿ ಯತಿವರ್ಯರಿಗೆ ತಪ್ತಮುದ್ರಾಧಾರಣೆ: ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಅವಕಾಶ

ಉಡುಪಿ: ಚಾತುರ್ಮಾಸ ವೃತಾಚರಣೆಯ ಆರಂಭದ ಆಷಾಢ ಶುದ್ಧ ಏಕಾದಶಿಯಂದು‌ ಶ್ರೀಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಮಾಡುವುದು ಸಂಪ್ರದಾಯ. ಅದರಂತೆ ಜುಲೈ 1ರ ಏಕಾದಶಿಯಂದು ಶ್ರೀಕೃಷ್ಣಮಠದಲ್ಲಿ ತಪ್ತಮುದ್ರಾಧಾರಣೆ ಸಂಬಂಧಿಸಿದ ಸಕಲ ಧಾರ್ಮಿಕ ಕಾರ್ಯಗಳು ಶಾಸ್ತ್ರೋಕ್ತವಾಗಿ ನಡೆಯಲಿದ್ದು, ಈ ಕಾರ್ಯಕ್ರಮ ಯತಿವರ್ಯರಿಗೆ ಮಾತ್ರ ಸೀಮಿತವಾಗಿರುತ್ತದೆ. ಮುಂದಿನ ಯಾವುದಾದರೂ ಶುಭ ದಿನಗಳಲ್ಲಿ ಸಾರ್ವಜನಿಕರಿಗೆ ಮುದ್ರಾಧಾರಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ‌ ಹೇಳಿದರು. ಜೂನ್ 30ರಂದು ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ದೇವರಿಗೆ ವಾರ್ಷಿಕ ಮಹಾಭಿಷೇಕ (ಸೀಯಾಳ ಅಭಿಷೇಕ) ಜರುಗಲಿದೆ. […]

ಉಡುಪಿ: ರಾಜಾಂಗಣ ಪಾರ್ಕಿಂಗ್ ರಸ್ತೆಗೆ ತಡೆಗೊಡೆ ನಿರ್ಮಿಸಲು ಆಗ್ರಹ

ಉಡುಪಿ: ಕಲ್ಸಂಕ ರಾಷ್ಟ್ರೀಯ ಹೆದ್ದಾರಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆಯ ಎರಡು ಪಾರ್ಶ್ವಗಳಲ್ಲಿಯೂ ಇಂದ್ರಾಣಿ ತೀರ್ಥ ನದಿ ಹರಿಯುತ್ತಿದ್ದು, ಯಾವುದೇ ತಡೆಗೋಡೆ ಇಲ್ಲ. ಅತಿವೇಗದಲ್ಲಿ ಸಂಚರಿಸುವ ವಾಹನಗಳು ನಿಯಂತ್ರಣ ತಪ್ಪಿ ನದಿಗೆ ಬೀಳುವ ಸಾಧ್ಯತೆ ಹೆಚ್ಚು ಇದೆ. ಹಾಗಾಗಿ ಜಿಲ್ಲಾಡಳಿತ, ನಗರಸಭೆ ಕೂಡಲೇ ಎಚ್ಚೆತ್ತುಕೊಂಡು ರಸ್ತೆಯ ಎರಡು ಬದಿಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಆಗ್ರಹಿಸಿದೆ. ಕಳೆದ ವರ್ಷ ಆಟೋ ಒಂದು ಇಂದ್ರಾಣಿ […]