ನಾಳೆಯಿಂದ ಎಸೆಸ್ಸೆಲ್ಸಿ ಎಕ್ಸಾಂಗೆ ರಾಜ್ಯ ರೆಡಿ: ಪರೀಕ್ಷೆ ಬರೆಯಲಿದ್ದಾರೆ 8,48,203 ವಿದ್ಯಾರ್ಥಿಗಳು

ಬೆಂಗಳೂರು: ಲಾಕ್‌ ಡೌನ್‌ ನಿಂದ ಮುಂದೂಡಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂ.25 ರಿಂದ ಆರಂಭವಾಗಲಿದ್ದು, ಪರೀಕ್ಷಾ ಕೊಠಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ. ರಾಜ್ಯದಲ್ಲಿ 3,209 ಪರೀಕ್ಷಾ ಕೇಂದ್ರಗಳಲ್ಲಿ 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸುಮಾರು 1 ಲಕ್ಷ ಮಂದಿ ವಿವಿಧ ಹಂತಗಳಲ್ಲಿ ಪರೀಕ್ಷಾ ಮೇಲ್ವಿಚಾರಣೆ ಹಾಗೂ ವ್ಯವಸ್ಥೆಗೆ ಸಹಕರಿಸಲಿದ್ದಾರೆ.‌ ಸೋಂಕು ಹರಡುವುದನ್ನು ತಡೆಗಟ್ಟಲು ಪೋಷಕರಿಗೆ ಮನವರಿಕೆ: ಪೋಷಕರಿಗೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಬಗ್ಗೆ 9 ಲಕ್ಷ ಕರಪತ್ರಗಳನ್ನು ವಿತರಿಸಿ, ಅವರು ಪಾಲಿಸಬೇಕಾದ ನಿಯಮಗಳ ಬಗ್ಗೆ ಮನವರಿಕೆ […]

ವಂದೇ ಭಾರತ್ ಹಾರಾಟ: 1.25 ಲಕ್ಷ ಮಂದಿ ತವರಿಗೆ

ನವದೆಹಲಿ: ದೇಶದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆ ವಂದೇ ಭಾರತ್   ಅಡಿಯಲ್ಲಿ ವಿದೇಶದಲ್ಲಿ ಸಿಲುಕಿರುವ ಸುಮಾರು 1,25,000  ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಹೊರ ದೇಶದಿಂದ ಜೂ.23ರಂದು 6,037 ಮಂದಿ ಭಾರತಕ್ಕೆ ಮರಳಿ ಬಂದಿದ್ದು, ವಿದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಭರವಸೆ ಮತ್ತು ಸಂತೋಷದ ಧ್ಯೇಯವಾಗಿ ಮುಂದುವರೆದಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ವಿದೇಶದಲ್ಲಿ ಸಿಲುಕಿರುವ 1,25,000 ಮಂದಿ ಭಾರತೀಯರು ಮಿಷನ್ ವಂದೇ ಭಾರತ್ ವಿಮಾನಗಳಲ್ಲಿ ತವರಿಗೆ ಮರಳಿ ಬಂದಿದ್ದು, […]