ಖ್ಯಾತ ಯಕ್ಷಗಾನ ಕಲಾವಿದ ನಾರಾಯಣ ಹಾಸ್ಯಗಾರ ಇನ್ನಿಲ್ಲ

ಹೊನ್ನಾವರ: ಪ್ರಸಿದ್ಧ ಕರ್ಕಿ ಪರಂಪರೆಯ ಉತ್ಕೃಷ್ಟ ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಹಾಸ್ಯಗಾರ, ಕರ್ಕಿ (89) ಅವರು ಸೋಮವಾರ ಇಹಲೋಕ ತ್ಯಜಿಸಿದ್ದಾರೆ. ಯಕ್ಷಗಾನಕ್ಕೆ ಅಪಾರ ಕೊಡುಗೆ ನೀಡಿದ ಕರ್ಕಿ ಹಾಸ್ಯಗಾರ ಮನೆತನದ ಪ್ರತಿನಿಧಿಯಾಗಿರುವ ನಾರಾಯಣ ಪರಮಯ್ಯ ಹಾಸ್ಯಗಾರ ಆರು ದಶಕಗಳಿಗೂ ಅಧಿಕ ಕಾಲ ಯಕ್ಷಗಾನ ಕಲಾಸೇವೆ ನೀಡಿದ ಸಾಧಕರು. ಆಂಗಿಕ ಅಭಿನಯ, ನಿಧಾನಗತಿಯ ಹೆಜ್ಜೆಗಾರಿಕೆ, ಎಲ್ಲ ಬಗೆಯ ಪರಿಪಕ್ವ ಕುಣಿತಗಳಲ್ಲಿ ಪ್ರಭುತ್ವ ಹೊಂದಿರುವ ಹಾಸ್ಯಗಾರ 82ರ ಇಳಿವಯಸ್ಸಿನಲ್ಲೂ ಕುಣಿಯುವ ಉತ್ಸಾಹ ಉಳಿಸಿಕೊಂಡಿದ್ದರು.ಬಡಗು ಮತ್ತು ಬಡಾಬಡಗು ಪ್ರಕಾರಗಳಲ್ಲಿಯೂ ಕರ್ಕಿ ಅವರ […]

ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾರೂ ಗೈರಾಗದಂತೆ ಕ್ರಮ: ಸಚಿವ ಸುರೇಶ್‌ಕುಮಾರ್

ಬೆಂಗಳೂರು: ಸಾರಿಗೆ ಸಮಸ್ಯೆಯಿಂದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಗೂ ಗೈರಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ  ಸಿಇಒಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಡಿಡಿಪಿಐಗಳೊಂದಿಗೆ ವಿಡಿಯೊ ಸಂವಾದದಲ್ಲಿ ಪರೀಕ್ಷೆಗೆ ಕೈಗೊಂಡ ಸಿದ್ಧತೆಗಳನ್ನು ಅವರು ಪರಿಶೀಲಿಸಿದ್ದಾರೆ. ಮಳೆಗಾಲದಲ್ಲಿ ಕರಾವಳಿ, ಮಲೆನಾಡು, ಮುಂಬೈ ಕರ್ನಾಟಕ ಪ್ರದೇಶದ ದೂರದ ಸಂಪರ್ಕರಹಿತ ಪ್ರದೇಶಗಳು, ನೆರೆ  ರಾಜ್ಯದ  ಗಡಿಭಾಗದ ವಿದ್ಯಾರ್ಥಿಗಳು ಹಾಗೆಯೇ […]

ಉಡುಪಿಯಲ್ಲಿ ಇಂದು ಪೊಲೀಸ್, ಆರೋಗ್ಯ ಸಿಬ್ಬಂದಿ ಸಹಿತ 14 ಮಂದಿಗೆ ಕೊರೊನಾ ಸೋಂಕು ದೃಢ

ಉಡುಪಿ: ಪೊಲೀಸ್ ಹಾಗೂ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಸಹಿತ ಜಿಲ್ಲೆಯಲ್ಲಿ ಇಂದು 14 ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇಂದಿನ ಸೋಂಕಿತರ ಪೈಕಿ ಎಂಟು ಮಂದಿ ಮುಂಬೈನಿಂದ ಬಂದವರಾಗಿದ್ದು, ಇಬ್ಬರ ಸೋಂಕಿನ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ‌ ನೀಡಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1077ಕ್ಕೆ ಏರಿಕೆ ಆಗಿದೆ. ಈವರೆಗೆ ಜಿಲ್ಲೆಯಲ್ಲಿ 961 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 114 ಸಕ್ರಿಯ ಸೋಂಕು ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

ಪೋಕಸ್ ರಾಘು ಅವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಉಡುಪಿ: ಸೈಬೀರಿಯದ ಬೆಲ್ಗ್ರೆಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಹಳ್ಳಿಯ ಕೆಸರುಗದ್ದೆಯ ಮಕ್ಕಳ ಆಟದ ಚಿತ್ರಕ್ಕೆ ಉಡುಪಿಯ ಪ್ರಖ್ಯಾತ ಛಾಯಾಗ್ರಾಹಕ ಪೋಕಸ್ ರಾಘು ಅವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ. ವಿಶ್ವದ ವಿವಿಧ ದೇಶಗಳ ಸಾವಿರಕ್ಕೂ ಛಾಯಾಗ್ರಾಹಕರ ಕ್ಕೂ 7000 ಕ್ಕೂ ಹೆಚ್ಚು ಛಾಯಾಚಿತ್ರಗಳು ಈ ಸ್ಪರ್ಧೆಯಲ್ಲಿದ್ದವು. ಎಫ್ಐಎಪಿ ಗೋಲ್ಡ್ ವಿಭಾಗದಲ್ಲಿ ಮೊದಲ ಪ್ರಶಸ್ತಿ ಲಭಿಸಿದ್ದು ಪೋಕಸ್ ರಾಘು ಅವರಿಗೆ ಇಪ್ಪತ್ನಾಲ್ಕನೆ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ. ಪೋಕಸ್ ರಾಘು ಹಳ್ಳಿಗಾಡಿನ ಪ್ರದೇಶದವರಾಗಿದ್ದು ಹಳ್ಳಿ ಗಾಡಿನ ಜನಪದ ಸೊಗಡಿನ ಕೆಸರುಗದ್ದೆಯ […]

ತಂಪುಪಾನೀಯ ಫ್ಯಾಕ್ಟರಿಯಲ್ಲಿ ವಿದ್ಯುತ್ ಆಘಾತ: ರತ್ನವರ್ಮ ಜೈನ್ ವಿಧಿವಶ

ಕಾರ್ಕಳ: ತಾಲೂಕಿನ ಮುಂಡ್ಲಿಯಲ್ಲಿ ತಂಪು ಪಾನೀಯ ಫ್ಯಾಕ್ಟರಿಯೊಂದರಲ್ಲಿ ಉಂಟಾದ ವಿಧ್ಯುತ್ ಆಘಾತದಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಇಂದು ಸಂಭವಿಸಿದೆ. ಮೃತರನ್ನು ಸಾಂತ್ರಬೆಟ್ಟು ರತ್ನ ವರ್ಮ ಜೈನ್(48) ಎಂದು ಗುರುತಿಸಲಾಗಿದೆ. ರತ್ನ ವರ್ಮ ಜೈನ್ ಅವರು ತಂಪು ಪಾನೀಯ ತಯಾರಕ ಸಂಸ್ಥೆ ಯಲ್ಲಿ ಜನರೇಟರ್ ಆಫ್‌ ಮಾಡುವ ಸಂದರ್ಭದಲ್ಲಿ ವಿಧ್ಯುತ್ ಅಘಾತಕ್ಕೊಳಗಾಗಿ ಸ್ಥಳದಲ್ಲಿ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಇವರು ಕಂಬಳ ಕ್ಷೇತ್ರದಲ್ಲಿ  ಹಲವು ಸಾಧನೆಗಳನ್ನು ಮಾಡಿ ಗುರುತಿಸಲ್ಪಟ್ಟಿದ್ದರು.