ಚೀನಾದ ಆ್ಯಪ್ ಗಳಿಗೆ ಬಹಿಷ್ಕಾರ: ದೇಶಿಯ ಆ್ಯಪ್ ಗಳಿಗೆ ಅದೃಷ್ಟದ ಬಾಗಿಲು ಒಪನ್

ಬೆಂಗಳೂರು: ಭಾರತ ಹಾಗೂ ಚೀನಾದ ಮಧ್ಯೆ ಗಡಿ ವಿವಾದಕ್ಕೆ ಸಂಬಂಧಿಸಿ ನಡೆದ ಸಂಘರ್ಷವು ಇದೀಗ ಚೀನಾ ವಹಿವಾಟಿನ ಮೇಲೆ ದೊಡ್ಡ ನೀಡಿದ್ದು, ದೇಶದಲ್ಲಿ ಚೀನಾ ಉತ್ಪನ್ನಗಳ ವಿರುದ್ಧ ದೊಡ್ಡ ಮಟ್ಟಿನ ಆಕ್ರೋಶ ವ್ಯಕ್ತವಾಗಿದೆ. ಹಲವರು ಚೀನಾ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡುತ್ತಿದ್ದು, ಇದರಿಂದ ದೇಶಿಯ ಆ್ಯಪ್‌ಗಳಿಗೆ ಅದೃಷ್ಟ ಕುಲಾಯಿಸಿದೆ. ಬಹುಜನಪ್ರಿಯ ಆ್ಯಪ್‌ ಟಿಕ್‌ಟಾಕ್‌ ಮೇಲೂ ಜನರ ಮುನಿಸಿಕೊಂಡಿದ್ದು, ಅದನ್ನು ಅನ್‌ಇನ್‌ಸ್ಟಾಲ್‌ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದರ ಲಾಭ ಪಡೆದು ಸ್ಥಳೀಯ ಮನರಂಜನಾ ಆ್ಯಪ್‌ಗಳು ಜನಪ್ರಿಯಗೊಳ್ಳುತ್ತಿವೆ. ಹೀಗಾಗಿ ಬೆಂಗಳೂರು ಮೂಲದ […]

ಜೂನ್ 24ರಿಂದ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ

ಬೆಂಗಳೂರು: ರಾಜ್ಯದ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಜೂನ್ 24ರ ನಂತರ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು. ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಸೇರಿದಂತೆ ರಾಜ್ಯಾದ್ಯಂತ ಜೂನ್ ಅಂತ್ಯದವರೆಗೂ ಉತ್ತಮ ಮಳೆಯಾಗಲಿದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಎರಡರಲ್ಲೂ ಮೇಲ್ಮೈ ಸುಳಿಗಾಳಿ ಉಂಟಾಗುತ್ತಿರುವ ಹಿನ್ನೆಲೆ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ

ಮಂಗಳೂರು: ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು: ವನ ಮಹೋತ್ಸವ ಕಾರ್ಯಕ್ರಮ

ಮಂಗಳೂರು: ಎಕ್ಸ್‌ಪರ್ಟ್ ಪದವಿ ಪೂರ್ವಕಾಲೇಜು, ಮಂಗಳೂರು ಇಲ್ಲಿ ವನ ಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ವತಿಯಿಂದ ಸುಮಾರು 2000 ಸ್ಥಳೀಯ ಜಾತಿಯ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮಕ್ಕೆ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ನರೇಂದ್ರಎಲ್.ನಾಯಕ್‌ ಚಾಲನೆ ನೀಡಿದರು. ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಉಷಾಪ್ರಭಾ ಎನ್.ನಾಯಕ್‌ ಅವರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀಧರ್ ‌ ಉಪಸ್ಥಿತರಿದ್ದರು. ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಕ ಅಂಕುಶ್‌ಎನ್. ನಾಯಕ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ.ವಿಜಯನ್‌ ಸೇರಿದಂತೆ ಗಣ್ಯರು ಗಿಡಗಳನ್ನು ನೆಟ್ಟರು. […]

ಗಂಗೊಳ್ಳಿ: ಶ್ರೀ ಮಾತಾ ಚಕ್ರೇಶ್ವರಿ ದೇವಸ್ಥಾನದ 51 ಮಂದಿ ಭಕ್ತಾದಿಗಳು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಗೆ ಪಾದಯಾತ್ರೆ

ಗಂಗೊಳ್ಳಿ: ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯ ಶ್ರೀ ಮಾತಾ ಚಕ್ರೇಶ್ವರಿ ದೇವಸ್ಥಾನದ 51 ಮಂದಿ ಭಕ್ತಾದಿಗಳು ಗಂಗೊಳ್ಳಿಯ ಶ್ರೀ ಸಂಪಿಗೆ ಜಟ್ಟಿಗೇಶ್ವರ ದೇವರ ಸನ್ನಿಧಿಯಿಂದ ಸತತ 11ನೇ ಬಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಶ್ರೀ ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಚಂದ್ರ ಖಾರ್ವಿ ಗಂಗೊಳ್ಳಿ ಇವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಾನಕ್ಕೆ ಪಾದಯಾತ್ರೆ ಆರಂಭಿಸಿದರು. ಸಮಾಜದ ಉನ್ನತಿಗಾಗಿ, […]

ಕೋವಿಡ್- 19 ಲ್ಯಾಬ್ ಗೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಿಂದ ತಾಂತ್ರಿಕ ಸಹಾಯ

ನಿಟ್ಟೆ: ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗವು ಕುಂದಾಪುರ ಮೂಲದ ಖಾಸಗಿ ಸಂಸ್ಥೆ ಗುತ್ತಿಗೆ ಪಡೆದಿರುವ ಕೋವಿಡ್ -19 ಟೆಸ್ಟಿಂಗ್ ಲ್ಯಾಬೋರೇಟರಿ ನಿಮಾ೯ಣಕ್ಕೆ ತಾಂತ್ರಿಕ ಸಹಾಯ ನೀಡಿದೆ. ಈ ಸಂಸ್ಥೆಯು ಮಹಾರಾಷ್ಟ್ರದ ಔರಂಗಾಬಾದ್ನಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ, ಮಹಾರಾಷ್ಟ್ರದ ಜಾಲ್ನಾದ ಸಾರ್ವಜನಿಕ ಆಸ್ಪತ್ರೆ ಹಾಗು ಕರ್ನಾಟಕದ ಜಿಲ್ಲೆಯೊಂದರ ಆಸ್ಪತ್ರೆಯಲ್ಲಿ ಕೋವಿಡ್-19 ಟೆಸ್ಟಿಂಗ್ ಲ್ಯಾಬೋರೇಟರಿಗಳನ್ನು ನಿಮಿ೯ಸಿದೆ. ಈ ಹಿಂದೆ ಇದೇ ಸಂಸ್ಥೆ ದೇಶಾದ್ಯಂತ ನಿರ್ಮಿಸಿದ ೨೦ಕ್ಕೂ ಹೆಚ್ಚು ಬಯೋಸೇಫ್ಟಿ ಲೆವೆಲ್-III ಲ್ಯಾಬೊರೇಟರಿಗಳ ವಿನ್ಯಾಸಕ್ಕೂ ನಿಟ್ಟೆ ತಾಂತ್ರಿಕ […]