ಸಾಣೂರು: ಸಾರ್ವಜನಿಕ ಸ್ಥಳಗಳಲ್ಲಿ ಗಮನ ಸೆಳೆಯಿತು ಕೊರೊನಾ ಜಾಗೃತಿ ಗೋಡೆ ಬರಹ

ಕಾರ್ಕಳ: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಮತ್ತು ಯುವಕ ಮಂಡಲ ಸಾಣೂರು (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ವಿಜೇತ ಸಂಸ್ಥೆ) ಇದರ ವತಿಯಿಂದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ಜಾಗೃತಿ ಗೋಡೆ ಬರಹ ಬರೆಯಲಾಯಿತು. ಈ ಸಂದರ್ಭದಲ್ಲಿ ಮಂಡಲದ ಮಾಜಿ ಅಧ್ಯಕ್ಷರಾದ ಜಗದೀಶ್ ಕುಮಾರ್, ಅಧ್ಯಕ್ಷರಾದ ಪ್ರಸಾದ್ ಪೂಜಾರಿ, ಕಾರ್ಯದರ್ಶಿ ಮೋಹನ್ ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಸದಸ್ಯರುಗಳಾದ ಪ್ರಕಾಶ್ ರಾವ್, […]

ಜೂ.21ರಂದು ಮಲೆಕುಡಿಯರ ಕುಂದು ಕೊರತೆ ಸಭೆ

ಕಾರ್ಕಳ: ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಲೆಕುಡಿಯ ಸಂಘ ಉಡುಪಿ ಇವರ ಆಶ್ರಯದಲ್ಲಿ ಮಲೆಕುಡಿಯರ ಕುಂದು ಕೊರತೆ ಸಭೆ ಜೂ. 21(ಆದಿತ್ಯವಾರ)ರಂದು ಸಂಜೆ 3.30ಕ್ಕೆ ಮಾಳ ಪೇರಡ್ಕ ಸಂಘದ ಕೇಂದ್ರ ಕಚೇರಿಯಲ್ಲಿ ಜರಗಲಿದೆ. ಈ ಸಭೆಯಲ್ಲಿ ಸಮಾಜ ಬಾಂಧವರು ಭಾಗವಹಿಸಬೇಕೆಂದು ಜಿಲ್ಲಾ ಮಲೆಕುಡಿಯ ಸಂಘದ ಪ್ರಕಟನೆ ತಿಳಿಸಿದೆ.

ಪರಂಪರಾಗತ ಕೃಷಿ ವಿಕಾಸ ಯೋಜನೆ ಮಾಹಿತಿ ಕಾರ್ಯಗಾರ

ಉಡುಪಿ ಜೂನ್ 19: ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದ ತರಬೇತಿ ಕಾರ್ಯಕ್ರಮದಡಿ ಪರಂಪರಾಗತ ಕೃಷಿ ವಿಕಾಸ ಯೋಜನೆಯ ಒಂದು ದಿನದ ಮಾಹಿತಿ ಕಾರ್ಯಗಾರವನ್ನು ಜೂನ್ 19 ರಂದು  ಸಾಣೂರು ಯುವಕ ಮಂಡಲದ ಹೊರ ಆವರಣದಲ್ಲಿ ಸಾಮಾಜಿಕ ಅಂತರದೊಂದಿಗೆ ನಡೆಸಲಾಯಿತು. ಗಿಡ ನೆಡುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಯಿತು. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಬಿ. […]

ಉಡುಪಿಯಲ್ಲಿ ಮತ್ತೆ 11 ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಇಂದು‌ ಹೊಸದಾಗಿ 11 ಕೊರೊನಾ ಪಾಸಿಟಿವ್ ‌ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1050 ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಉಡುಪಿಯಲ್ಲಿ ಕೊರೊನಾ ಸೋಂಕಿಗೆ ಎರಡನೇ ಬಲಿ: ಮುಂಬೈನಿಂದ ಬಂದಿಳಿದ ನಾಲ್ಕು ತಾಸಿನಲ್ಲೇ ತೆಕ್ಕಟ್ಟೆ ನಿವಾಸಿ ಸಾವು

ಉಡುಪಿ: ಮುಂಬೈನಿಂದ ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆಗೆ ಗುರುವಾರ ಬಂದಿಳಿದ ನಾಲ್ಕು ತಾಸುಗಳಲ್ಲೇ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಮುಂಬೈನಿಂದ ನಾಲ್ಕು ಮಂದಿ ಗುರುವಾರ ತೆಕ್ಕಟ್ಟೆ ಬಂದಿದ್ದರು. ಅವರಿಗೆ ಜಿಲ್ಲಾ ಬಿಆರ್ ಸಿ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನ್ ಮಾಡಿದ್ದು ಅವರಿಗೆ ತಾಪಮಾನ ಇರದಿದ್ದರಿಂದ ಅಧಿಕಾರಿಗಳು ಅವರನ್ನು ಹೋಮ್ ಕ್ವಾರಂಟೈನ್ ಗೆ ಕಳುಹಿಸಿದ್ದರು. ಅದರಲ್ಲಿ ಒಬ್ಬರು ಏಕಾಏಕಿಯಾಗಿ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ […]