ಕರಾವಳಿ ಭಾಗದಲ್ಲಿ ಜೂ.23ರವರೆಗೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಸಾದ್ಯತೆ

ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದಿನಿಂದ ಮುಂದಿನ ಮಂಗಳವಾರದ ವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇದೆ 23ರವರೆಗೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಐದು ದಿನಗಳಲ್ಲೂ ಈ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ಸದ್ಯಕ್ಕಿಲ್ಲ:ಟ್ರಸ್ಟ್

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆರಂಭಿಸುವ ಯೋಜನೆಯನ್ನು ಸದ್ಯ ಭಾರತ– ಚೀನಾ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ  ಮುಂದೂಡಲಾಗಿದೆ ಎಂದು ರಾಮ ಮಂದಿರ ಟ್ರಸ್ಟ್‌ ತಿಳಿಸಿದೆ. ಸದ್ಯ ಗಡಿಯಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಗಾಲ್ವನ್‌ ಕಣಿವೆಯಲ್ಲಿ ಭಾರತದ ಯೋಧರು ಹುತಾತ್ಮರಾದ ಬಗ್ಗೆ ಶೋಕ ವ್ಯಕ್ತಪಡಿಸಿರುವ ಟ್ರಸ್ಟ್‌ ಮಂದಿರ ನಿರ್ಮಾಣ ಆರಂಭಿಸುವ ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು ಎಂದಿದೆ.

ನಿಟ್ಟೆ ಪ್ರಾಧ್ಯಾಪಕರು ಆವಿಷ್ಕರಿಸಿದ್ರು ಸ್ವಯಂಚಾಲಿತ ತೀರ್ಥ ವಿತರಣಾ ಯಂತ್ರ

ನಿಟ್ಟೆ: ಕೊರೋನ ಸೋಂಕು ವಿಶ್ವದಾದ್ಯಂತ ವ್ಯಾಪಿಸಿರುವ ಹಿನ್ನಲೆಯಲ್ಲಿ ಸರ್ವ ಕ್ಷೇತ್ರಗಳೂ ವಿವಿಧ ಬಗೆಯ ತೊಂದರೆಗಳಿಗೆ ಒಳಗಾಗಿವೆ. ಪ್ರಸ್ತುತ ಸಂದರ್ಭದಲ್ಲಿ ಕೊರೋನಾ ಸೋಂಕಿನ ತಡೆಗೆ ಅಗತ್ಯವಿರುವ ಹಲವಾರು ಕ್ರಮಗಳನ್ನು ಸರ್ಕಾರ, ಸಂಘ ಸಂಸ್ಥೆಗಳು ನಡೆಸುತ್ತಿವೆ. ಪ್ರತಿಕ್ಷೇತ್ರದಲ್ಲೂ ಅದರದ್ದೇ ಆದ ಹೊಸತೊಡಕುಗಳು ಹಾಗೂ ಅವಕಾಶಗಳು ಕಾಣಸಿಗುತ್ತಿವೆ. ಕೊರೊನಾ ತಡೆಗೆ ಅಗತ್ಯವಿರುವ ಸಾಮಾಜಿಕ ಅಂತರವನ್ನು ಕಾಪಾಡುವುದರೊಂದಿಗೆ ದೇವಾಲಯಗಳಲ್ಲಿ ತೀರ್ಥ ಪ್ರಸಾದ ವಿತರಣೆಗೆ ಅನುಕೂಲವಾಗುವ ರೀತಿಯ ಒಂದು ತಂತ್ರಜ್ಞಾನದ ಬಗೆಗೆ ಅದೆಷ್ಟು ಮಂದಿ ಚಿಂತಿಸಿದ್ದರೋ ತಿಳಿದಿಲ್ಲ, ಆದರೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ […]