ಕ್ವಾರಂಟೈನ್ ಸೀಲ್ ಇದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ: ಪೊಲೀಸ್ ಸಹಾಯದಿಂದ ಕ್ವಾರೆಂಟನ್ ಕೇಂದ್ರಕ್ಕೆ ದಾಖಲು

ಉಡುಪಿ: ಕೈಗೆ ಕ್ವಾರೆಂಟನ್ ಸಿಲ್ ಇದ್ದು ಸಾರ್ವಜನಿಕ ಸ್ಥಳದಲ್ಲಿ ಅಲೆದಾಡುತ್ತ ಆತಂಕ ಸೃಷ್ಟಿಸಿದ ಇರ್ವರು ಹಿರಿಯ ನಾಗರಿಕರನ್ನು ಪೊಲೀಸರು ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಅವರನ್ನು ವಶಕ್ಕೆ ಪಡೆದು, ಆದಿ ಉಡುಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ವಾರೆಂಟನ್ ಕೇಂದ್ರದಲ್ಲಿ ದಾಖಲಿಸಿದ ಘಟನೆ ಶನಿವಾರ ನಡೆದಿದೆ. ಇವರಲ್ಲಿ ಒರ್ವರು ಕೇರಳದಲ್ಲಿರುವ ಮಠದ ಪೂಜ್ಯ ಹಿರಿಯ ಶ್ರೀಪಾದರು ಎಂದು ತಿಳಿದು ಬಂದಿದೆ. ಇವರು ಕೇರಳ ಮಾರ್ಗವಾಗಿ ಮಂಗಳೂರು ಮೂಲಕ ಉಡುಪಿಗೆ ಬಸ್ಸಿನಲ್ಲಿ ಆಗಮಿಸಿದ್ದರು. ಇವರ ಕೈಗೆ ಕ್ವಾರೆಂಟನ್ ಮುದ್ರೆ […]
ಉಡುಪಿ, ಮಂಗಳೂರಿಂದ ದೂರದ ಊರುಗಳಿಗೆ ಎಸಿ ಬಸ್ ಸಂಚಾರ ಸದ್ಯಕ್ಕಿಲ್ಲ

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೂರದ ಊರುಗಳಿಗೆ ಸದ್ಯಕ್ಕೆ ಹವಾನಿಯಂತ್ರಿತ (ಎಸಿ) ಕೆಎಸ್ ಆರ್ ಟಿಸಿ ಹಾಗೂ ಖಾಸಗಿ ಬಸ್ ಗಳ ಸಂಚಾರ ಆರಂಭವಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಪ್ರತಿದಿನ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಂದ ಅಂತರ್ ಜಿಲ್ಲೆ ಮತ್ತು ರಾಜ್ಯಗಳಿಗೆ ಸುಮಾರು 50 ಕ್ಕಿಂತಲೂ ಹೆಚ್ಚಿನ ಎಸಿ ಬಸ್ ಗಳು ಓಡಾಡುತ್ತಿದ್ದವು. ಆದರೆ ಸದ್ಯ ಕೊರೊನಾ ಭೀತಿಯಿಂದ ಅವುಗಳನ್ನು ಸ್ಥಗಿತ ಮಾಡಲಾಗಿದೆ. ಬೆಂಗಳೂರು […]
ದೇಶದಲ್ಲಿ ಕೊರೊನಾ ಹರಡಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ: ಸಂಸದೆ ಶೋಭಾ ಕರಂದ್ಲಾಜೆ ಆರೋಪ

ಉಡುಪಿ: ದೇಶದಲ್ಲಿ ಕೊರೊನಾ ಸೋಂಕನ್ನು ತಬ್ಲಿಘಿಗಳು ಉದ್ದೇಶ ಪೂರ್ವಕವಾಗಿ ಹರಡಿಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿ ಹೊಸದಿಲ್ಲಿ ಮತ್ತು ಮಹಾರಾಷ್ಟ್ರದಿಂದ ಇಡೀ ದೇಶಕ್ಕೆ ಕೋವಿಡ್ ಹಬ್ಬಿಕೊಂಡಿದೆ. ಬೆಂಗಳೂರಿನ ಪಾದರಾಯನಪುರ, ಸಿದ್ಧಿಕ್ ಲೇಔಟ್‌ನಲ್ಲಿ ತಬ್ಲಿಘಿಗಳು ಉದ್ದೇಶ ಪೂರ್ವಕವಾಗಿ ಸೋಂಕು ಹಂಚಿದ್ದಾರೆ. ಇವರ ಈ ನಡತೆ ನೋಡಿದರೆ ಉದ್ದೇಶ ಪೂರ್ವಕವಾಗಿದ್ದಂತೆ ಕಾಣುತ್ತಿದೆ. ಭಾರತದಲ್ಲಿ ಕೊರೊನಾ ಹರಡಲು ತಬ್ಲಿಘಿಗಳಿಂದ ವ್ಯವಸ್ಥಿತವಾಗಿ ಷಡ್ಯಂತ್ರ ನಡೆದಂತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಅವರು ಹೇಳಿದರು.
ಕೊರೊನಾ ವೈರಸ್ ಗೆ ಬ್ರೆಜಿಲ್‌ನಲ್ಲಿ ಒಂದೇ ದಿನ 1,005 ಮಂದಿ ಬಲಿ

ಕೊರೊನಾ ಸೋಂಕು ಲ್ಯಾಟಿನ್ ಅಮೆರಿಕದ ಬ್ರೆಜಿಲ್ ಗೆ ವ್ಯಾಪಿಕವಾಗಿ ಹರಡಿದ್ದು, ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಯಲ್ಲಿ 1,005 ಮಂದಿ ಮೃತಪಟ್ಟಿದ್ದಾರೆ ಎಂದು ಬ್ರೆಜಿಲ್ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ. ಸೋಂಕಿಗೆ ಬ್ರೆಜಿಲ್‌ನಲ್ಲಿ ಒಟ್ಟು 34,000ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆಯಲ್ಲಿ ಇಟಲಿಯನ್ನು ಹಿಂದೆಹಾಕಿದೆ. ಜಾಗತಿಕವಾಗಿ ಕೊರೊನಾ ಸೋಂಕಿನಿಂದ ಸಾವೀಗಿಡದವರ ಸಂಖ್ಯೆ 4,00,000 ಸಮೀಪಿಸಿದೆ. ಸಾವಿನ ಲೆಕ್ಕಾಚಾರದಲ್ಲಿ ಬ್ರೆಜಿಲ್ ಈಗ ಮೂರನೇ ಸ್ಥಾನದಲ್ಲಿದೆ. ಜಗತ್ತಿನಾದ್ಯಂತ ಒಟ್ಟು 68,44,705 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 3,98,141 […]