ಉತ್ತರ ಪ್ರದೇಶದಲ್ಲಿ ಬಾಕಿಯಾಗಿದ್ದ ವಿದ್ಯಾರ್ಥಿಗಳು ಮಂಗಳೂರಿಗೆ ವಾಪಾಸ್: ಎಲ್ಲರಿಗೂ‌ ಕ್ವಾರಂಟೈನ್

ಮಂಗಳೂರು: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ‌ಉತ್ತರ ಪ್ರದೇಶದಲ್ಲಿ ಬಾಕಿಯಾಗಿದ್ದ ಮಂಗಳೂರು ಹೊರವಲಯದ ಉಳ್ಳಾಲದ ಮುಡಿಪು ಜವಾಹರ್ ನವೋದಯ ಶಾಲೆಯ ವಿದ್ಯಾರ್ಥಿಗಳು, ವಿಶೇಷ ಬಸ್ಸಿನಲ್ಲಿ ತಮ್ಮ ಶಾಲೆಗೆ ಹಿಂದುರಿಗಿದ್ದು, ಶಾಲಾ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ನವೋದಯ ವಿದ್ಯಾಲಯಕ್ಕೆ ಸಂಬಂಧಿಸಿದ ಮೈಗ್ರೇಶನ್ ಪಾಲಿಸಿ ಪ್ರಕಾರ ವ್ಯಾಸಂಗಕ್ಕಾಗಿ ಶಾಲೆಯ ಒಂಭತ್ತನೇ ತರಗತಿಯ 22 ವಿದ್ಯಾರ್ಥಿಗಳು ಕಳೆದ ವರ್ಷ ಉತ್ತರ ಪ್ರದೇಶ ಜೆ.ಪಿ.ನಗರದ ಜವಹರಲಾಲ್ ನವೋದಯ ವಿದ್ಯಾಲಯಕ್ಕೆ ತೆರಳಿದ್ದರು. ಅವರ ವ್ಯಾಸಾಂಗ ಮುಗಿದ ಹಿನ್ನೆಲೆಯಲ್ಲಿ ಮಾರ್ಚ್ 22, 23ಕ್ಕೆ ಹಿಂದಿರುಗಬೇಕಿತ್ತು. ಲಾಕ್ಡೌನ್ […]

ಕೊರೊನಾ ರಾಜ್ಯದಲ್ಲಿ ಹೊಸ ಪ್ರಕರಣಗಳು ದಾಖಲು: ಸೋಂಕಿತರ ಸಂಖ್ಯೆ 848ಕ್ಕೆ ಏರಿಕೆ

ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ರಾಜ್ಯದಲ್ಲಿ ಮೇ 9ರ ಸಂಜೆ 5 ಗಂಟೆಯಿಂದ ಮೇ 10ರ ಸಂಜೆ 5 ಗಂಟೆವರೆಗೂ 54 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನುವಾರ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 848ಕ್ಕೆ ಏರಿಕೆಯಾಗಿದೆ. ಪ್ರಸ್ತುತ 388 ರೋಗಿಗಳು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಆರು ಜನರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ಪ್ರಕರಣದಲ್ಲಿ 31 ಮಂದಿ ಸಾವಿಗೀಡಾಗಿದ್ದು, […]

ಜಿಲ್ಲೆಯಾದ್ಯಂತ ಅಕ್ರಮ ಗೋ-ಸಾಗಾಟ, ಗೋ-ಹತ್ಯೆಗೆ ಕಡಿವಾಣ ಹಾಕುವಂತೆ ಜಿಲ್ಲಾಡಳಿತಕ್ಕೆ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ದಿನೇ ದಿನೇ ಅಕ್ರಮ ಗೋ-ಹತ್ಯೆ, ಗೋ-ಸಾಗಾಟದಂತಹ ಪ್ರಕರಣಗಳು ಜಾಸ್ತಿ ಆಗುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು ಅಲ್ಲದೇ ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದು ಮಾತ್ರವಲ್ಲ ಹಿಂದೂ ಸಮಾಜದ ಕಾರ್ಯಕರ್ತರು ಇದನ್ನು ತಡೆಯಲು ಹೋಗಿ ಪ್ರಕರಣಗಳನ್ನು ಮೈಮೇಲೆ ತಂದುಕೊಂಡ ಪ್ರಸಂಗಗಳು ಹಲವಾರು ಬಾರಿ ನಡೆದಿದೆ. ಆದುದರಿಂದ ಜಿಲ್ಲಾಡಳಿತವೇ ಇದನ್ನು ಗಂಬೀರವಾಗಿ ಪರಗಣಿಸಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ವಾಹನಗಳನ್ನು ಪರಿಶೀಲಿಸಬೇಕು ಮಾತ್ರವಲ್ಲ ಗೋ-ಹತ್ಯೆ, ಗೋ-ಸಾಗಾಟದ ಬಗ್ಗೆ ದೂರು […]

ಇವರ ಬಣ್ಣದ ಲೋಕ ಜಗಮಗ, ಇವರೇ ಕಲಾಪ್ರಪಂಚದ ಯುವ ಪಯಣಿಗ:ಬಣ್ಣದ ರಂಗಿನ ಹುಡುಗ “ಆಕಾಂಕ್ಷ್”

ಇದು ಉಡುಪಿ XPRESS “ಬಣ್ಣದ ಕನಸುಗಾರರು” ಸರಣಿಯ  7ನೇ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ಈ ಸಂಚಿಕೆಯಲ್ಲಿ ಉಡುಪಿಯ ಬೈಲೂರಿನ ಕಲಾಜಗತ್ತಿನ  ಯುವ ಪಯಣಿಗ ಆಕಾಂಕ್ಷ್ ಅವರ ಕತೆ. ಮನೆಯೇ ಸಣ್ಣ ರಂಗಕೇಂದ್ರವಾಗಿದ್ದಾಗ ಕಲೆಯಲ್ಲಿನ ಆಸಕ್ತಿ, ಸಣ್ಣ ಪುಟ್ಟ ತಿಳುವಳಿಕೆ, ಕಲಿಕೆ ಆಗುವುದು ಸಹಜ ಎನ್ನಬಹುದು. […]

ಮಲ್ಪೆ ಸೇಂಟ್ ಮೇರಿಸ್ ದ್ವೀಪದಲ್ಲಿ ಗುಂಡು ಪಾರ್ಟಿ: ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ಸಹಿತ ಏಳು ಮಂದಿ ಪೊಲೀಸ್ ವಶ

ಉಡುಪಿ: ಇಲ್ಲಿನ ಮಲ್ಪೆ ಸೇಂಟ್  ಮೇರಿಸ್ ದ್ವೀಪದಲ್ಲಿ ರಾತ್ರಿ ಗುಂಡು ಪಾರ್ಟಿ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ಸಹಿತ ಏಳು ಮಂದಿಯನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಮಲ್ಪೆ ಕಡಲತೀರದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಸೇಂಟ್ ಮೇರಿಸ್ ದ್ವೀಪದಲ್ಲಿ ಶನಿವಾರ ರಾತ್ರಿ 9.30ಕ್ಕೆ ದೀಪದ ಬೆಳಕು ಉರಿಯುತ್ತಿರುವುದು ಕಂಡುಬಂದಿದ್ದು, ಆ ದೀಪ ಒಂದೇ ಕಡೆ ಸುಮಾರು ರಾತ್ರಿ 11.30 ರ ವರೆಗೂ ಗೋಚರಿಸಿದೆ. […]