ಉತ್ತರ ಪ್ರದೇಶದಲ್ಲಿ ಬಾಕಿಯಾಗಿದ್ದ ವಿದ್ಯಾರ್ಥಿಗಳು ಮಂಗಳೂರಿಗೆ ವಾಪಾಸ್: ಎಲ್ಲರಿಗೂ‌ ಕ್ವಾರಂಟೈನ್

ಮಂಗಳೂರು: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ‌ಉತ್ತರ ಪ್ರದೇಶದಲ್ಲಿ ಬಾಕಿಯಾಗಿದ್ದ ಮಂಗಳೂರು ಹೊರವಲಯದ ಉಳ್ಳಾಲದ ಮುಡಿಪು ಜವಾಹರ್ ನವೋದಯ ಶಾಲೆಯ ವಿದ್ಯಾರ್ಥಿಗಳು, ವಿಶೇಷ ಬಸ್ಸಿನಲ್ಲಿ ತಮ್ಮ ಶಾಲೆಗೆ ಹಿಂದುರಿಗಿದ್ದು, ಶಾಲಾ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ನವೋದಯ ವಿದ್ಯಾಲಯಕ್ಕೆ ಸಂಬಂಧಿಸಿದ ಮೈಗ್ರೇಶನ್ ಪಾಲಿಸಿ ಪ್ರಕಾರ ವ್ಯಾಸಂಗಕ್ಕಾಗಿ ಶಾಲೆಯ ಒಂಭತ್ತನೇ ತರಗತಿಯ 22 ವಿದ್ಯಾರ್ಥಿಗಳು ಕಳೆದ ವರ್ಷ ಉತ್ತರ ಪ್ರದೇಶ ಜೆ.ಪಿ.ನಗರದ ಜವಹರಲಾಲ್ ನವೋದಯ ವಿದ್ಯಾಲಯಕ್ಕೆ ತೆರಳಿದ್ದರು. ಅವರ ವ್ಯಾಸಾಂಗ ಮುಗಿದ ಹಿನ್ನೆಲೆಯಲ್ಲಿ ಮಾರ್ಚ್ 22, 23ಕ್ಕೆ ಹಿಂದಿರುಗಬೇಕಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ರೈಲು ಸೇವೆ ರದ್ದಾದ ಕಾರಣ ವಿದ್ಯಾರ್ಥಿಗಳು ಉತ್ತರ ಪ್ರದೇಶ ಶಾಲೆಯಲ್ಲಿಯೇ ಬಾಕಿಯಾಗಿದ್ದರು.
ಅನಂತರ ವಿದ್ಯಾರ್ಥಿಗಳನ್ನು ವಿಶೇಷ ಬಸ್ಸಿನ ಕರೆಯಲಾಯಿತು. ಮುಡಿಪು ಶಾಲೆಗೆ ತಲುಪಿದ ವಿದ್ಯಾರ್ಥಿಗಳನ್ನು ವೈದ್ಯಾಧಿಕಾರಿ ನೇತೃತ್ವದ ವೈದ್ಯರ ತಂಡ ಮುಡಿಪುವಿಗೆ ಆಗಮಿಸಿ ವಿದ್ಯಾರ್ಥಿಗಳ ತಪಾಸಣೆ ನಡೆಸಿ, ‌ಎಲ್ಲರ ಕೈಗಳಿಗೆ ಮುದ್ರೆ ಹಾಕಿದ್ದು, ವೈದ್ಯಕೀಯ ವರದಿ ನಾಳೆ ಬರುವ ನಿರೀಕ್ಷೆ ಇದೆ.
ಹೊರರಾಜ್ಯದಿಂದ ಆಗಮಿಸಿದ್ದರಿಂದ ವಿದ್ಯಾರ್ಥಿಗಳ ಜೊತೆ ಅವರೊಂದಿಗಿದ್ದ ಆರು ಮಂದಿಯನ್ನೂ ಶಾಲಾ‌‌ ಹಾಸ್ಟೆಲ್ ನಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.