ಬಂಟ್ವಾಳದಲ್ಲಿ ಹೆಚ್ಚಿದ ಕೊರೊನಾ ಆತಂಕ: ಪೇಟೆಯ ರಸ್ತೆಗೆ ಮಣ್ಣು ಹಾಕಿ ಪೂರ್ಣ ಬಂದ್
ಬಂಟ್ವಾಳ: ಕೊರೊನ ಪಾಸಿಟಿವ್ ನಿಂದ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಂಟ್ವಾಳದ ವಿವಿಧ ಕಡೆ ಸೀಲ್ ಡೌನ್ ಮಾಡಿ ಪೇಟೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗೆ ಅಡ್ಡವಾಗಿ ಮಣ್ಣು ಹಾಕಿ ಜಿಲ್ಲಾಡಳಿತ ಬಂದ್ ಮಾಡಿದೆ. ಬಂಟ್ವಾಳ ತಾಲೂಕಿನ ಕಸ್ಬಾದ ಮಹಿಳೆ ಭಾನುವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಸಾವಿನ ನಂತರ ಬಂದ ಕೋವಿಡ್ ಪರಿಕ್ಷಾ ವರದಿಯಲ್ಲಿ, ಕೊರೊನಾ ಸೋಂಕುನಿಂದ ಮಹಿಳೆ ಸಾವನ್ನಪ್ಪಿದ್ದು ಎಂದು ದೃಢಪಟ್ಟಿತ್ತು. ಅನಂತರ ಮಹಿಳೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್ […]
ಕುಂದಾಪುರ: ಸಾರಿಗೆ ಸಂಚಾರ ಮತ್ತಷ್ಟು ಬಿಗಿ: ಪೊಲೀಸರ ಹೊಸಕ್ರಮಕ್ಕೆ ಸಾರ್ವಜನಿಕರು ಕೆಂಡಾಮಂಡಲ
ಕುಂದಾಪುರ: ಲಾಕ್ಡೌನ್ಗೆ ಸಾರ್ವಜನಿಕರು ಹೊಂದಿಕೊಳ್ಳುತ್ತಿರುವ ಹೊತ್ತಲ್ಲೇ ಮಂಗಳವಾರ ಬೆಳಿಗ್ಗೆಯಿಂದ ಏಕಾಏಕಿ ನಗರದಲ್ಲಿ ಸಾರಿಗೆ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಿದ ಪೊಲೀಸರ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್-೧೯ ಹಿನ್ನೆಲೆ ಜಿಲ್ಲಾಡಳಿತವು ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗಾಗಿ ನಿಗದಿಪಡಿಸಿದ ಅವಧಿಯಲ್ಲಿ ನಗರದಲ್ಲೆಲ್ಲೆಡೆ ವಾಹನ ದಟ್ಟಣೆಯಾಗುತ್ತಿದೆ ಎಂಬ ದೂರಿನ ಮೇರೆಗೆ ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಪೊಲೀಸರು ಈ ಹೊಸಕ್ರಮಕ್ಕೆ ಮುಂದಾಗಿದ್ದಾರೆ. ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾದ ಚಿಕ್ಕನ್ಸಾಲ್, ಚರ್ಚ್ ರಸ್ತೆ ಹಾಗೂ ಶಾಸ್ತ್ರೀ ವೃತ್ತವನ್ನು […]
ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ಭಾಗವತ ರಾಘವೇಂದ್ರ ಮಯ್ಯರಿಂದ ನೆರವು:
ಕುಂದಾಪುರ: ಖ್ಯಾತ ಯಕ್ಷಗಾನ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ ಅಭಿಮಾನಿ ಬಳಗದ ವತಿಯಿಂದ ಕೊರೊನಾ ಸಮಸ್ಯೆಯಿಂದ ಕೆಲಸವಿಲ್ಲದೆ ಅರ್ಥಿಕ ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಅವರ ಮನೆಗಳಿಗೆ ತೆರಳಿ ಆಹಾರ ವಸ್ತುಗಳ ಪಡಿತರ ಕಿಟ್ ವಿತರಿಸಲಾಯಿತು. ಈ ಸಂದರ್ಭ ಕೊರೊನಾ ಕುರಿತು ಜಾಗೃತಿ ಮೂಡಿಸಲಾಯಿತು ಹಾಗೂ ಕಲಾವಿದರೆಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ. ಆದ್ದರಿಂದ ಸಮಸ್ಯೆಯನ್ನು ಎಲ್ಲರೂ ಒಟ್ಟಾಗಿ ಒಂದಾಗಿ ಎದುರಿಸುವ ಮತ್ತು ಕೈಲಾದವರು ಅಸಕ್ತರಿಗೆ ಆದಷ್ಟು ಸಹಕಾರ ನೀಡುವ ಎನ್ನುವ ಧೈರ್ಯದ ಮಾತುಗಳನ್ನು ತಿಳಿಸಲಾಯಿತು. ಮಯ್ಯರ ಅಭಿಮಾನಿಗಳಾದ ಹೊರ್ಲಾಳಿ […]
ಅನುಮತಿಯಿಲ್ಲದೇ ಪ್ಯಾರಸಿಟಮಾಲ್ ಆಧಾರಿತ ಔಷಧ ಮಾರಾಟ ನಿಷೇಧ
ಉಡುಪಿ ಏ.21: ಕರೋನಾ ವೈರಸ್ ರೋಗಗಳು (ಕೋವಿಡ್-19) ಸಾಂಕ್ರಾಮಿಕ ರೋಗವನ್ನು ಹರಡುವುದನ್ನು ನಿಲ್ಲಿಸಲು , ಉಡುಪಿ ಜಿಲ್ಲೆಯ ಎಲ್ಲಾ ಚಿಲ್ಲರೆ ಔಷಧ ವ್ಯಾಪಾರಸ್ಥರು, ಕೆಮ್ಮು, ಶೀತ, ಜ್ವರ, ದಣಿವು, ಉಸಿರಾಟದ ತೊಂದರೆಗಳಂತಹ ರೋಗ ಲಕ್ಷಣಗಳಿಗೆ, ಪ್ಯಾರಸಿಟಮಲ್ ಆಧಾರಿತ ಔಷಧಿಗಳನ್ನು (ಪ್ರಿಸ್ಕ್ರಿಪ್ಟಿವ್ ಮತ್ತು ಒಟಿಸಿ ಎರಡೂ) ವೈದ್ಯರ ಸಲಹಾ ಚೀಟಿಯಿಲ್ಲದೇ ಮಾರಾಟ ಮಾಡದಂತೆ ಸೂಚಿಸಲಾಗಿದೆ. ಮುಂದುವರೆದು ರೋಗಿಯ ಹೆಸರು, ವೈದ್ಯರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮುಂತಾದ ಎಲ್ಲಾ ದಾಖಲೆಗಳನ್ನು ನಿರ್ವಹಿಸಲು ಸೂಚಿಸಲಾಗಿದೆ. ಮೇಲಿನ ಸೂಚನೆಗಳನ್ನು ಪಾಲಿಸಿದದ್ದಲ್ಲಿ, ಅಂತಹವರ […]
ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಪಡಿತರ ವಿತರಣೆ: ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ ಏ.21: ಜಿಲ್ಲೆಯಲ್ಲಿ ಈಗಾಗಲೇ ಆದ್ಯತಾ (ಬಿಪಿಎಲ್) ಮತ್ತು ಆದ್ಯತೇತರ (ಎಪಿಎಲ್) ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ, ವಿಲೇವಾರಿಗೆ ಬಾಕಿ ಇರುವ ಅರ್ಜಿದಾರರು, ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಪಡೆಯಬಹುದಾಗಿದೆ. ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಅರ್ಜಿಗೆ 10 ಕೆಜಿ ಯಂತೆ ಅಕ್ಕಿಯನ್ನು ಉಚಿತವಾಗಿ ಮತ್ತು ಎಪಿಎಲ್ ಪಡಿತರ ಚೀಟಿ ಅರ್ಜಿದಾರರಿಗೆ ಪ್ರತಿ ಅರ್ಜಿಗೆ 15 ರೂ ದರದಲ್ಲಿ 10 ಕೆಜಿ ಅಕ್ಕಿಯನ್ನು ಪಡೆಯಬಹುದಾಗಿದೆ. ಅರ್ಜಿದಾರರು ಅರ್ಜಿ ಸಲ್ಲಿಸಿದ ಬಗ್ಗೆ ತಮ್ಮಲ್ಲಿ ಇರುವ ಅರ್ಜಿಯ ಪ್ರತಿಯನ್ನು […]