udupixpress
Home Trending ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ಭಾಗವತ ರಾಘವೇಂದ್ರ ಮಯ್ಯರಿಂದ ನೆರವು:

ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ಭಾಗವತ ರಾಘವೇಂದ್ರ ಮಯ್ಯರಿಂದ ನೆರವು:

ಕುಂದಾಪುರ: ಖ್ಯಾತ ಯಕ್ಷಗಾನ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ ಅಭಿಮಾನಿ ಬಳಗದ ವತಿಯಿಂದ ಕೊರೊನಾ ಸಮಸ್ಯೆಯಿಂದ ಕೆಲಸವಿಲ್ಲದೆ ಅರ್ಥಿಕ ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಅವರ ಮನೆಗಳಿಗೆ ತೆರಳಿ ಆಹಾರ ವಸ್ತುಗಳ ಪಡಿತರ ಕಿಟ್ ವಿತರಿಸಲಾಯಿತು.

ಈ ಸಂದರ್ಭ ಕೊರೊನಾ ಕುರಿತು ಜಾಗೃತಿ ಮೂಡಿಸಲಾಯಿತು ಹಾಗೂ ಕಲಾವಿದರೆಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ. ಆದ್ದರಿಂದ ಸಮಸ್ಯೆಯನ್ನು ಎಲ್ಲರೂ ಒಟ್ಟಾಗಿ ಒಂದಾಗಿ ಎದುರಿಸುವ ಮತ್ತು ಕೈಲಾದವರು ಅಸಕ್ತರಿಗೆ ಆದಷ್ಟು ಸಹಕಾರ ನೀಡುವ ಎನ್ನುವ ಧೈರ್ಯದ ಮಾತುಗಳನ್ನು ತಿಳಿಸಲಾಯಿತು.

ಮಯ್ಯರ ಅಭಿಮಾನಿಗಳಾದ ಹೊರ್ಲಾಳಿ ಚಪ್ಪಾರ ಮಠ ಪಾಡುರಂಗ ಕರಬ ಕುಟುಂಬದವರು, ಅಮೆರಿಕಾದ ನಾಗಾನಂದ ಎ., ಸುಬ್ರಮಣ್ಯ ಮಿತ್ಯಂತ ಮಾರಾಳಿ ಮತ್ತು ಕಲ್ಯಾಣಿ ಮಂಜುನಾಥ ಮಾಸ್ಟರ್ ಬಿಜೂರು, ಬೋಜರಾಜ್ ಬೆಂಗಳೂರು ಅವರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

error: Content is protected !!