ಬಂಟ್ವಾಳದಲ್ಲಿ‌ ಹೆಚ್ಚಿದ ಕೊರೊನಾ ಆತಂಕ: ಪೇಟೆಯ ರಸ್ತೆಗೆ ಮಣ್ಣು ಹಾಕಿ ಪೂರ್ಣ ಬಂದ್

ಬಂಟ್ವಾಳ: ಕೊರೊನ ಪಾಸಿಟಿವ್ ನಿಂದ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ‌ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ‌ಬಂಟ್ವಾಳದ ವಿವಿಧ ಕಡೆ ಸೀಲ್ ಡೌನ್ ಮಾಡಿ ಪೇಟೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗೆ ಅಡ್ಡವಾಗಿ ಮಣ್ಣು ಹಾಕಿ ಜಿಲ್ಲಾಡಳಿತ ಬಂದ್ ಮಾಡಿದೆ.
ಬಂಟ್ವಾಳ ತಾಲೂಕಿನ ಕಸ್ಬಾದ ಮಹಿಳೆ ಭಾನುವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಸಾವಿನ ನಂತರ ಬಂದ ಕೋವಿಡ್ ಪರಿಕ್ಷಾ ವರದಿಯಲ್ಲಿ, ಕೊರೊನಾ ಸೋಂಕುನಿಂದ ಮಹಿಳೆ ಸಾವನ್ನಪ್ಪಿದ್ದು ಎಂದು ದೃಢಪಟ್ಟಿತ್ತು.
ಅನಂತರ ಮಹಿಳೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್ ಮಾಡಿ ಬಂಟ್ವಾಳ ಪೇಟೆಯನ್ನು ಸೀಲ್‌ಡೌನ್ ಮಾಡಲಾಗಿತ್ತು. ಆದರೆ ಇಂದು ಮತ್ತೆ ಕೊರೊನಾದಿಂದ ಮೃತಪಟ್ಟ ಮಹಿಳೆಯ ನೆರೆ ಮನೆಯ 67 ವರ್ಷದ ಮಹಿಳೆಗೂ ಸೋಂಕು ದೃಡಪಟ್ಟಿದ್ದು ಮತ್ತೆ ಆತಂಕ ಹೆಚ್ಚಿಸಿದೆ.
ಹಾಗಾಗಿ ಬಂಟ್ವಾಳ ಪೇಟೆಗೆ ಯಾರು ಪ್ರವೇಶ ಮಾಡದಂತೆ ಹಾಗೂ ಪೇಟೆಯಿಂದ ಯಾರು ಹೊರಗಡೆ ಹೋಗದಂತೆ ತಡೆಯಲು ಜಿಲ್ಲಾಡಳಿತ ಬಂಟ್ವಾಳ ಪೇಟೆಗೆ ಬರುವ ಎಲ್ಲಾ ಮಾರ್ಗಗಳು ಬಂದ್ ಮಾಡಿ ರಸ್ತೆಗೆ ಅಡ್ಡವಾಗಿ ಮಣ್ಣು ಹಾಕಿದೆ.