ಮೂರು ಹೊತ್ತು ಊಟ ಬಿಡಿ: ಹಸಿದವರ ಹೊಟ್ಟೆ ತುಂಬಿಸಿ: ಅದಮಾರು ಶ್ರೀ

ಉಡುಪಿ: ದೇಶದಲ್ಲಿ ಕೋವಿಡ್ 19 (ಕೊರೊನಾ) ಸೋಂಕಿನ ಹರಡುವಿಕೆ ಹೆಚ್ಚಾಗುತ್ತಿದ್ದು ಇದರಿಂದ ಭವಿಷ್ಯದಲ್ಲಿ ಆಹಾರದ ಕೊರತೆ ಎದುರಾಗುವ ಸಾಧ್ಯತೆಗಳಿವೆ. ಹಾಗಾಗಿ ಆರೋಗ್ಯವಂತರು ಒಂದು ದಿನವಿಡೀ ಉಪವಾಸವಿದ್ದು, ಆ ಮೂಲಕ ಹತ್ತಿರದಲ್ಲಿರುವ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡಬೇಕು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಕರೆ ನೀಡಿದ್ದಾರೆ. ಒಂದು ದಿನ ಮೂರು ಹೊತ್ತು ಊಟ ಬಿಡುವುದರಿಂದ ದೇಶದ ಆಹಾರ ಸರಬರಾಜು ವ್ಯವಸ್ಥೆ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಒಳ್ಳೆಯ ಮನಸ್ಸಿನಿಂದ ಉಪವಾಸ ಮಾಡಿ ಆಹಾರ ತ್ಯಜಿಸಿದರೆ ಶ್ರೀಕೃಷ್ಣನ […]

ವಾರದೊಳಗಡೆ ನೇತ್ರಾವತಿ ಸೇತುವೆಗೆ ಸಿಸಿ ಟಿವಿ, ತಂತಿ ಬೇಲಿಗೆ ಟೆಂಡರ್: ಶಾಸಕ ಕಾಮತ್

ಮಂಗಳೂರು: ನೇತ್ರಾವತಿ ಸೇತುವೆಯ ಇಕ್ಕೆಲಗಳಲ್ಲಿ ತಂತಿ ಬೇಲಿ ಹಾಗೂ ಸಿಸಿ ಟಿವಿ ಅಳವಡಿಕೆ ಕಾಮಗಾರಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಈ ವಾರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಈ ಹಿಂದೆ ಹೇಳಿದಂತೆ ನೇತ್ರಾವತಿ ಸೇತುವೆಯ ಮೇಲೆ ಸಿಸಿ ಟಿವಿ ಅಳವಡಿಸಲು 5 ಲಕ್ಷ ಹಾಗೂ ಸೇತುವೆಗೆ ರಕ್ಷಣಾ ಬೇಲಿ ನಿರ್ಮಾಣ ಕಾಮಗಾರಿಗೆ 58 ಲಕ್ಷ ರೂಪಾಯಿಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಸಿಸಿಟಿವಿ ಹಾಗೂ […]

ರಮಝಾನ್ ತಿಂಗಳಲ್ಲಿಯೂ ಲಾಕ್‍ಡೌನ್ ಕಡ್ಡಾಯವಾಗಿ ಪಾಲಿಸಿ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ

ಉಡುಪಿ: ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸಿದೆ. ಲಾಕ್ ಡೌನ್ ಮುಗಿಯುವವರೆಗೆ ಮಸೀದಿಗಳಲ್ಲಿ ಎಲ್ಲ ಸಾಮೂಹಿಕ ನಮಾಝ್ ಗಳನ್ನೂ  ನಿಲ್ಲಿಸಲು ಸರಕಾರ ಸೂಚನೆ ನೀಡಿದೆ. ಈ ನಡುವೆ ಪ್ರಾರಂಭವಾಗಲಿರುವ  ರಮಝಾನ್ ತಿಂಗಳಲ್ಲೂ  ಲಾಕ್‍ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಅವರು ಕರೆ ನೀಡಿದ್ದಾರೆ. ರಾಜ್ಯ ಸರಕಾರ, ರಾಜ್ಯ ವಕ್ಫ್ ಬೋರ್ಡ್ ಹಾಗು ರಾಜ್ಯದ ಅಮೀರೆ ಶರೀಅತ್  ಅವರು […]

ಜಿಲ್ಲೆಗೆ ಇನ್ಪೋಸಿಸ್ ನಿಂದ 2 ನೇ ಹಂತದಲ್ಲಿ 28.75 ಲಕ್ಷದ ನೆರವು

ಉಡುಪಿ ಏ.16: ಕೋವಿಡ್-19 ವಿರುದ್ದ ಕಾರ್ಯದಲ್ಲಿ ನೆರವಾಗಲು  ಉಡುಪಿ ಜಿಲ್ಲೆಗೆ ಈಗಾಗಲೇ ಇನ್ಪೋಸಿಸ್ ಫೌಂಡೇಶನ್ ವತಿಯಿಂದ 50 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಮುಂದುವರೆದು ಜಿಲ್ಲೆಗೆ  2 ನೇ ಹಂತದಲ್ಲಿ ,ರೂ.28,75,320 ಮೌಲ್ಯದ , ಗ್ಲೌವ್ಸ್, ಎನ್95 ಫೇಸ್ ಮಾಸ್ಕ್, ಫೇಸ್ ಶೀಲ್ಡ್ ಹಾಗೂ ಪಿಪಿಇ ಕಿಟ್ ಗಳನ್ನು ಇನ್ಪೋಸಿಸ್ ಫೌಂಡೇಶನ್ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಜಿಲ್ಲೆಗೆ ಕೋವಿಡ್ ಕಾರ್ಯಾಚರಣೆಯ ಸಂದರ್ಭದಲ್ಲಿ, ವೈದ್ಯಕೀಯ ಸಲಕರಣೆಗಳು ಅಭಾವವಿರುವ ಸಂದರ್ಭದಲ್ಲಿ, ಜಿಲ್ಲಾಡಳಿತ ಮನವಿಗೆ ತುರ್ತಾಗಿ ಸ್ಪಂದಿಸಿ, […]

ಕಾರ್ಕಳದ ಈ ಯುವಕನ ಕೈಯಲ್ಲರಳುತ್ತೆ ಬೆರಗಿನ ಚಿತ್ರಗಳು: “ಅನುಷ್” ಚಿತ್ರಕಲೆಯಲ್ಲೇ ಯಾವತ್ತೂ ಖುಷ್

ಈ ಯುವಕನ ಕೈಯಲ್ಲರಳುವ ಚಿತ್ರಗಳನ್ನು ನೋಡಿದರೆ ಮನಸ್ಸು ಬೆರಗಾಗುತ್ತದೆ. ವ್ಹಾ ವ್ಹಾ ಎಂತಹ ಚೆಂದ ಚಿತ್ರ ಬಿಡಿಸ್ತಾನಪ್ಪ ಈ ಹುಡುಗ ಎಂದು ನಮ್ಮ ಹುಬ್ಬೇರಿಬಿಡುತ್ತದೆ. ನಮ್ಮ ನಡುವೆಯೇ ಹಿತವಾದ ಕನಸು ಕಂಡು ಬದುಕುತ್ತಿರುವ ಪ್ರತಿಭೆಗಳು ತುಂಬಾ ಮಂದಿ ಇದ್ದರೂ, ಕೆಲವರಷ್ಟೇ ತಮ್ಮ ಕಠಿಣ ಪರಿಶ್ರಮದಿಂದ ಆ ಪ್ರತಿಭೆಯನ್ನು ಇನ್ನಷ್ಟು  ಕರಗತ ಮಾಡಿಕೊಂಡಿರುತ್ತಾರೆ. ಅಂತಹ ಕೆಲವರಲ್ಲಿ ಕಾರ್ಕಳದ ಈ ಯುವಕ ಕೂಡ ಒಬ್ಬರು. ಇವರೇ ಚಿತ್ರ ಕಲಾವಿದ ಅನುಷ್. ಈ ಕಲಾವಿದನ ಪ್ರತಿಭೆಯನ್ನು ನೇೂಡಿದ್ರೆ ನೀವು ಬೆರಗಾಗುವುದು ಮಾತ್ರ […]