ಕರಾವಳಿಯ ಸಾಂಪ್ರದಾಯಿಕ-ನಾಡದೋಣಿ ಮೀನುಗಾರಿಕೆ ಆರಂಭ: ಮೀನುಗಾರ ಕಾರ್ಮಿಕರ ಕೊರತೆ..!

ಮಂಗಳೂರು: ಕೇಂದ್ರ ಸರ್ಕಾರದ ಸೂಚನೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕರಾವಳಿಯ ಎಲ್ಲಾ ಸಾಂಪ್ರದಾಯಿಕ ಮತ್ತು ನಾಡದೋಣಿ ಮೀನುಗಾರಿಕೆಗೆ ಇಂದಿನಿಂದ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಕೆಲ ಮೀನುಗಾರರು ನಾಡದೋಣಿಯಲ್ಲಿ ಇಂದು ಮೀನುಗಾರರು ಮೀನುಗಾರಿಕೆ ಆರಂಭಿಸಿದ್ದಾರೆ. ಮೀನುಗಾರಿಕೆ ‌ಮತ್ತೆ ಆರಂಭ ಆಗಿರುವುದು ಕರಾವಳಿಯ ಮೀನುಗಾರಿಗೆ ಖುಷಿಯ ವಿಚಾರ‌ವೇ ಸರಿ‌ ಆದ್ರೆ ಮೀನುಗಾರಿಕೆಗೆ ಸರಕಾರ ಅನುಮತಿ ನೀಡಿದ್ರು ನಾಡ ದೋಣೆ ಮಾಲೀಕರಿಗೆ ಮೀನು ಹಿಡಿಯೋಕೆ ಮೀನುಗಾರರ ಕೊರತೆ ಉಂಟಾಗಿದೆ. ಬಹುತೇಕ ಮೀನುಗಾರರು ಕೇರಳ, ಆಂದ್ರ, ತಮಿಳುನಾಡು ಮೂಲದವರು ಇವರಲ್ಲಿ […]

ಮಂಗಳೂರು: 70 ವರ್ಷದ ಕೊರೊನ ಪೀಡಿತ ಮಹಿಳೆ ಪೂರ್ಣ ಗುಣಮುಖ: ಇಂದು ಆಸ್ಪತ್ರೆಯಿಂದ ಬಿಡುಗಡೆ

ಮಂಗಳೂರು: ಮಂಗಳೂರಿನಲ್ಲಿ ಕೊರೊನಾ ಪೀಡಿತರಾಗಿದ್ದ 70 ವರ್ಷದ ಮಹಿಳೆ ಪೂರ್ಣ ಗುಣಮುಖರಾಗಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೇರಳ ಮೂಲದವರಾದ ಇವರು ಸೌದಿ ಅರೇಬಿಯಾದಿಂದ ಮಾರ್ಚ್ 9ರಂದು  ಕ್ಯಾಲಿಕಟ್ ಆಗಮಿಸಿದ್ದರು. ಅನಾರೋಗ್ಯದಿಂದ ಮಾರ್ಚ್ 19ರಂದು ಮಂಗಳೂರಿಗೆ ಚಿಕಿತ್ಸೆಗಾಗಿ ಆಗಮಿಸಿದ್ದರು. ಮಾರ್ಚ್ 24ರಂದು ಕೊರೊನಾ ಸೋಂಕು ತಗಲಿರುವುದು ಪರೀಕ್ಷೆಯಿಂದ ದೃಡಪಟ್ಟಿತ್ತು. ಅನಂತರ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗಿತ್ತು. ಏಪ್ರಿಲ್ 7 ಮತ್ತು 8ರಂದು‌ ಗಂಟಲಿನ ದ್ರವ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದ್ದು, ಹೀಗಾಗಿ‌ ಇಂದು ಆಸ್ಪತ್ರೆಯಿಂದ ಮಹಿಳೆ […]

ಕ್ವಾರಂಟೈನ್ ನಿಯಮದ ಪಾಲನೆ ಪರಿಶೀಲನೆಗೆ ಕ್ರಮ: ಮಹೇಶ್ವರ ರಾವ್

ಏಪ್ರಿಲ್ 12: ಜಿಲ್ಲೆಯಲ್ಲಿ ಕೋರೋನಾ ಸಂಬಂದಿಸಿದಂತೆ, ಹೋಂ ಕ್ವಾರಂಟೈನ್ ನಲ್ಲಿರುವವರು ಮತ್ತು ಆಸ್ಪತ್ರೆ ಕ್ವಾರಂಟೈನ್‍ನಲ್ಲಿರುವವರು, ಸರಕಾರದ ಮಾರ್ಗಸೂಚಿಯನ್ವಯ ನಿಯಮಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾ  ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದ್ದಾರೆ. ಅವರು ಭಾನುವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ,ಜಿಲ್ಲೆಯಲ್ಲಿನ  ಕೊರೋನಾ ನಿಯಂತ್ರಣ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕ್ವಾರಂಟೈನ್ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸುತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಿ, ಬಗ್ಗೆ ಜಿಲ್ಲೆಯ ಗಡಿ ಪ್ರದೇಶಗಳನ್ನು ಬಿಗಿಗೊಳಿಸುವಂತೆ ಸೂಚಿಸಿದ ಉಸ್ತುವಾರಿ […]

ಕುಂದಾಪುರ: ನಾಡದೋಣಿ ಮೀನುಗಾರಿಕೆಗೆ ಮತ್ತೆ ಮರುಜೀವ, ಮೀನುಗಾರರ ಮೊಗದಲ್ಲಿ ಸಂತಸದ ಭಾವ

ಕುಂದಾಪುರ: ಲಾಕ್‌ಡೌನ್‌ನಿಂದಾಗಿ ಕಳೆದ ಇಪ್ಪತ್ತು ದಿನಗಳಿಗೂ ಅಧಿಕ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದ ನಾಡದೋಣಿ ಮೀನುಗಾರಿಕೆ ಮತ್ತೆ ಮರುಜೀವ ಪಡೆದುಕೊಂಡಿದೆ. ಸರ್ಕಾರದ ಸೂಚನೆ ಮೇರೆಗೆ ಭಾನುವಾರದಿಂದ ನಾಡದೋಣಿ ಮೀನುಗಾರರು ತಮ್ಮ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಪ್ರಾರಂಭಿಸಿದ್ದಾರೆ. ಕುಂದಾಪುರ, ಬಂದೂರು ಭಾಗದ ಕೋಡಿ, ಗಂಗೊಳ್ಳಿ, ಬೆಣ್ಗೆರೆ, ಮಡಿ, ಕಂಚುಗೋಡು, ಹೊಸಪೇಟೆ, ಮರವಂತೆ, ತ್ರಾಸಿ, ಕೊಡೇರಿ, ಮಡಿಕಲ್, ಅಳ್ವೆಗದ್ದೆ ಮೊದಲಾದೆಡೆಯ ಸಾವಿರಾರು ನಾಡದೋಣಿಗಳು ಕಡಲಿಗಿಳಿದು ಮೀನುಗಾರಿಕೆಯನ್ನು ಆರಂಭಿಸಿವೆ. ಹಲವು ದಿನಗಳಿಂದ ತಾಜಾ ಮೀನುಗಳು ಸಿಗದೆ ಹತಾಶೆಯಲ್ಲಿದ್ದ ಮತ್ಸ್ಯಪ್ರಿಯರಲ್ಲಿ ಇದೀಗ ಸಂತಸ ಮನೆಮಾಡಿದೆ. ಸರ್ಕಾರದ ಸೂಚನೆಯಂತೆಯೇ […]

ದೆಹಲಿಯ ತಬ್ಲಿಘಿ ಜಮಾತ್ ಹಾಟ್ ಸ್ಪಾಟ್ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎನ್ನಲಾದ ಜಿಲ್ಲೆಯ ಇಬ್ಬರ ಮಾದರಿ ಸಂಗ್ರಹ: ಪ್ರಯೋಗಾಲಯಕ್ಕೆ ರವಾನೆ

ಉಡುಪಿ: ಸರ್ಕಾರ ಘೋಷಿಸಿರುವ ದೆಹಲಿಯ ತಬ್ಲಿಘಿ ಜಮಾತ್ ಹಾಟ್ ಸ್ಪಾಟ್ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎನ್ನಲಾದ ಜಿಲ್ಲೆಯ ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಇಂದು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಈ ಇಬ್ಬರ ಮೊಬೈಲ್ ನೆಟ್ ವರ್ಕ್ ಆಧಾರದಲ್ಲಿ ಇವರು ದೆಹಲಿಯ ತಬ್ಲಿಘಿ ಜಮಾತ್ ಹಾಟ್ ಸ್ಪಾಟ್ ಪ್ರದೇಶಕ್ಕೆ ಹೋಗಿದ್ದಾರೆಂದು ಪತ್ತೆ ಮಾಡಲಾಗಿದ್ದು, ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಇಂದು ಮಾದರಿಯನ್ನು ಸಂಗ್ರಹಿಸಿ  ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಇಬ್ಬರು ತಬ್ಲಿಘಿ ಜಮಾತ್ […]