udupixpress
Home Trending ದೆಹಲಿಯ ತಬ್ಲಿಘಿ ಜಮಾತ್ ಹಾಟ್ ಸ್ಪಾಟ್ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎನ್ನಲಾದ ಜಿಲ್ಲೆಯ ಇಬ್ಬರ ಮಾದರಿ...

ದೆಹಲಿಯ ತಬ್ಲಿಘಿ ಜಮಾತ್ ಹಾಟ್ ಸ್ಪಾಟ್ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎನ್ನಲಾದ ಜಿಲ್ಲೆಯ ಇಬ್ಬರ ಮಾದರಿ ಸಂಗ್ರಹ: ಪ್ರಯೋಗಾಲಯಕ್ಕೆ ರವಾನೆ

ಉಡುಪಿ: ಸರ್ಕಾರ ಘೋಷಿಸಿರುವ ದೆಹಲಿಯ ತಬ್ಲಿಘಿ ಜಮಾತ್ ಹಾಟ್ ಸ್ಪಾಟ್ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎನ್ನಲಾದ ಜಿಲ್ಲೆಯ ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಇಂದು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಈ ಇಬ್ಬರ ಮೊಬೈಲ್ ನೆಟ್ ವರ್ಕ್ ಆಧಾರದಲ್ಲಿ ಇವರು ದೆಹಲಿಯ ತಬ್ಲಿಘಿ ಜಮಾತ್ ಹಾಟ್ ಸ್ಪಾಟ್ ಪ್ರದೇಶಕ್ಕೆ ಹೋಗಿದ್ದಾರೆಂದು ಪತ್ತೆ ಮಾಡಲಾಗಿದ್ದು, ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಇಂದು ಮಾದರಿಯನ್ನು ಸಂಗ್ರಹಿಸಿ  ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಇಬ್ಬರು ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದಾರೆಯೇ ಅಥವಾ ಆ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂಬುವುದು ಖಚಿತಗೊಂಡಿಲ್ಲ.
error: Content is protected !!