ಕರಾವಳಿಯ ಸಾಂಪ್ರದಾಯಿಕ-ನಾಡದೋಣಿ ಮೀನುಗಾರಿಕೆ ಆರಂಭ: ಮೀನುಗಾರ ಕಾರ್ಮಿಕರ ಕೊರತೆ..!

ಮಂಗಳೂರು: ಕೇಂದ್ರ ಸರ್ಕಾರದ ಸೂಚನೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕರಾವಳಿಯ ಎಲ್ಲಾ ಸಾಂಪ್ರದಾಯಿಕ ಮತ್ತು ನಾಡದೋಣಿ ಮೀನುಗಾರಿಕೆಗೆ ಇಂದಿನಿಂದ ಅವಕಾಶ ಕಲ್ಪಿಸಲಾಗಿದೆ.
ಹಾಗಾಗಿ ಕೆಲ ಮೀನುಗಾರರು ನಾಡದೋಣಿಯಲ್ಲಿ ಇಂದು ಮೀನುಗಾರರು ಮೀನುಗಾರಿಕೆ ಆರಂಭಿಸಿದ್ದಾರೆ.
ಮೀನುಗಾರಿಕೆ ‌ಮತ್ತೆ ಆರಂಭ ಆಗಿರುವುದು ಕರಾವಳಿಯ ಮೀನುಗಾರಿಗೆ ಖುಷಿಯ ವಿಚಾರ‌ವೇ ಸರಿ‌ ಆದ್ರೆ ಮೀನುಗಾರಿಕೆಗೆ ಸರಕಾರ ಅನುಮತಿ ನೀಡಿದ್ರು ನಾಡ ದೋಣೆ ಮಾಲೀಕರಿಗೆ ಮೀನು ಹಿಡಿಯೋಕೆ ಮೀನುಗಾರರ ಕೊರತೆ ಉಂಟಾಗಿದೆ. ಬಹುತೇಕ ಮೀನುಗಾರರು ಕೇರಳ, ಆಂದ್ರ, ತಮಿಳುನಾಡು ಮೂಲದವರು ಇವರಲ್ಲಿ ಹೆಚ್ಚಿನವರು ಬಹುತೇಕ ಮೀನುಗಾರರು ಊರಿಗೆ ತೆರಳಿದ್ದಾರೆ.
ದಕ್ಷಿಣ ಕನ್ನಡದ ಬಹುತೇಕ ಮೀನುಗಾರರು ಕೊರೊನಾ ಲಾಕ್‌ಡೌನ್‌ನಿಂದ ಊರಿಗೆ ಹೋಗಿದ್ದು, ಈಗ ಮತ್ತೆ ತಕ್ಷಣ ವಾಪಾಸ್ ಕರೆಸೋದು ಲಾಕ್‌ಡೌನ್ ಇರುವ ಕಾರಣದಿಂದ ಕಷ್ಷವಾಗಿದೆ.
ಹೀಗಾಗಿ ಇರುವ‌ ಮೀನುಗಾರರನ್ನು ಬಳಸಿಕೊಂಡು ನಾಡದೋಣಿ ಮೀನುಗಾರಿಕೆ ಆರಂಭಿಸಿದ್ದು, ಮೀನು ಮಾರುಕಟ್ಟೆಯಲ್ಲಿ ಭರ್ಜರಿ ಮೀನಿನ‌ ವ್ಯಾಪಾರ ಆಗುತ್ತಿದೆ.
ಇಷ್ಟು ದಿನ ಮೀನು ಸಿಗದೇ ನಿರಾಶೆಯಿಂದ ಇದ್ದ ಮೀನುಮಾಂಸ ಪ್ರೀಯರಿಗೆ ಮೀನುಗಾರಿಕೆ ಆರಂಭವಾಗಿದ್ದು ಖುಷಿಯ ವಿಚಾರವಾಗಿದೆ.