ಜಿಲ್ಲೆಯ ರೈತರು ಬೆಳದ ಹಣ್ಣು ಮತ್ತು ತರಕಾರಿಗಳನ್ನು ಸಾಗಾಟ ಮಾಡಲು  ತೋಟಗಾರಿಕಾ ಇಲಾಖೆಯಿಂದ  ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ  ಏ.1: ಜಿಲ್ಲೆಯ ಅನೇಕ ರೈತರುಗಳು ಮಟ್ಟುಗುಳ್ಳ, ಕಲ್ಲಂಗಡಿ, ಅನಾನಸ್ಸು ಮುಂತಾದ  ಹಣ್ಣು ಮತ್ತು ತರಕಾರಿಗಳನ್ನು ಬೆಳೆದಿದ್ದು, ಬೆಳೆಗಳನ್ನು ಮಾರುಕಟ್ಟೆಗೆ ಕಳುಹಿಸಲು ಸಾದ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದು, ಉಡುಪಿ ಜಿಲ್ಲೆಯ ರೈತರು ಬೆಳೆದ ಉತ್ಪನ್ನಗಳನ್ನು ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳ ಮಾರುಕಟ್ಟೆಗೆ ಸಾಗಾಟ ಮಾಡಲು ಅನುವಾಗುವಂತೆ 7 ವಾಹನಗಳಿಗೆ ಅನುಮತಿ ಪತ್ರವನ್ನು ಒದಗಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ  25 ಹೆಕ್ಟೇರ್ ಪ್ರದೇಶದಲ್ಲಿ 1000 ಮೆ.ಟನ್ ಕಲ್ಲಂಗಡಿ ಮತ್ತು 150 ಹೆಕ್ಟೇರ್ ಪ್ರದೇಶದಲ್ಲಿ 9732 ಮೆ.ಟನ್  ಅನಾನಸ್ಸು, ಉತ್ಪಾದನೆಯಾಗುವ ಹಾಗೂ ಮಾರುಕಟ್ಟೆಯಾಗದೆ […]

ದಾನಿಗಳು ಆಹಾರ ಧಾನ್ಯ, ದಿನ ಬಳಕೆ ವಸ್ತುಗಳನ್ನು ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿಗೆ ನೀಡಿ: ಜಿಲ್ಲಾಧಿಕಾರಿ

ಉಡುಪಿ  ಏ.1:  ಕೋವಿಡ್-19 ಕ್ಕೆ ಸಂಬAಧಿಸಿದAತೆ ಪ್ರಸ್ತುತ ಜಿಲ್ಲಾ ವ್ಯಾಪ್ತಿಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ CRPC section 144(3)ರಂತೆ ನಿರ್ಬಂಧ ವಿಧಿಸಿ ಆದೇಶವನ್ನು ಹೊರಡಿಸಲಾಗಿದೆ. ಹಾಗೂ ಜಿಲ್ಲಾದ್ಯಂತ ನಾಗರಿಕರ ಸಂಚಾರವನ್ನು ನಿಷೇಧಿಸಲಾಗಿದ್ದು,  ಕೆಲವೊಂದು ವಲಸೆ ಕಾರ್ಮಿಕರ/ಕೂಲಿ ಕಾರ್ಮಿಕರ ವಾಸ್ತವ್ಯಕ್ಕಾಗಿ ತಾತ್ಕಾಲಿಕ ಶೆಲ್ಟರ್ ರೂಂಗಳನ್ನು ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಜಿಲ್ಲಾದ್ಯಂತ ನಾಗರಿಕರಿಗೆ ದಿನಬಳಕೆಯ ವಸ್ತುಗಳನ್ನು ಪಡೆಯುವಲ್ಲಿ ತೊಂದರೆ ಆಗುತ್ತಿರುವ ಕುರಿತು ಕೆಲವೊಂದು ಸಂಘ ಸಂಸ್ಥೆಗಳು/ ವ್ಯಕ್ತಿಗಳು ಸ್ವ ಇಚ್ಛೆಯಿಂದ ಜಿಲ್ಲಾಡಳಿತಕ್ಕೆ ದೈನಂದಿನ ದಿನಸಿ […]

ಉಡುಪಿ: 11 ಮಂದಿ ಕೊರೊನಾ ಶಂಕಿತರು ಪತ್ತೆ: ಆಸ್ಪತ್ರೆಗೆ ದಾಖಲು

ಉಡುಪಿ: ಜಿಲ್ಲೆಯಲ್ಲಿ ಇಂದು 11 ಮಂದಿ ಕೊರೊನಾ ಶಂಕಿತರು ಪತ್ತೆಯಾಗಿದ್ದು, ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ. 11 ಮಂದಿ ಶಂಕಿತರ ಪೈಕಿ 8 ಮಂದಿ ವಿದೇಶದಿಂದ ಮರಳಿದ್ದು, ಉಳಿದ ಮೂವರು ವಿದೇಶ ಪ್ರಯಾಣ ಮಾಡದವರಾಗಿದ್ದಾರೆ. ನಾಲ್ಕು ಮಂದಿಯಲ್ಲಿ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ಮತ್ತೆ ನಾಲ್ಕು ಮಂದಿ ಅವರ ಸಂಪರ್ಕದಲ್ಲಿದ್ದವರಾಗಿದ್ದಾರೆ. ಇಂದು ದಾಖಲಾದ ಶಂಕಿತರು ಸೇರಿದಂತೆ 31 ಮಂದಿಯ ವೈದ್ಯಕೀಯ ವರದಿ ಬರಲು‌ ಬಾಕಿಯಿದೆ. ಐಸೋಲೇಷನ್ […]

ಕೊರೊನ ಹರಡಿದ ನಿಝಾಮುದ್ದೀನ್ ಮುಸ್ಲಿಂ ಧಾರ್ಮಿಕ ಸಮಾವೇಶ: ದ.ಕ.ಜಿಲ್ಲೆಯಿಂದ 21 ಮಂದಿ ಭಾಗಿ

ಮಂಗಳೂರು: ದೇಶವನ್ನೇ ಬೆಚ್ಚಿಬೀಳಿಸುವಂತೆ ಕೊರೊನ‌ ವೈರಸ್ ಹರಡುವಿಕೆಗೆ ಕಾರಣವಾದ ದೆಹಲಿ ನಿಝಾಮುದ್ದೀನ್ ನಲ್ಲಿ ನಡೆದ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 21 ಮಂದಿ ಭಾಗಿಯಾಗಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿ ಲಭ್ಯವಾಗಿದೆ. ಈ‌ ಬಗ್ಗೆ ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದ್ದು, 21 ಮಂದಿಯನ್ನೂ ಸಂಪರ್ಕಿಸಲಾಗಿದೆ. ಎಲ್ಲರನ್ನೂ ಆಸ್ಪತ್ರೆಯ ಐಸೋಲೇಷನ್ ವಿಭಾಗ ದಾಖಲಿಸಲಾಗಿದೆ ಎಂದು ತಿಳಿಸಿದೆ. ಎಲ್ಲರ ಮೇಲೂ ನಿಗಾ ಇಡಲಾಗಿದ್ದು, ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಎಲ್ಲರ ಗಂಟಲಿನ  ದ್ರವ ಪರೀಕ್ಷೆಯನ್ನು ಆರೋಗ್ಯ ಇಲಾಖೆ ನಡೆಸಿದೆ. […]

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ಟೆಲಿಮೆಡಿಸಿನ್ ಸೌಲಭ್ಯ 

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು  ಏಪ್ರಿಲ್ 2 ರಿಂದ ಜಾರಿಗೆ ಬರುವಂತೆ ಈಗಾಗಲೇ ಚಿಕಿತ್ಸೆಯಲ್ಲಿರುವ ಮತ್ತು ತನ್ನ ಹಳೆಯರೋಗಿಗಳ ಅನುಕೂಲಕ್ಕಾಗಿ, ಟೆಲಿಮೆಡಿಸಿನ್ ಮೂಲಕ ಸಮಾಲೋಚನೆಯನ್ನು ಪರಿಚಯಿಸಲಿದೆ ಎಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಹೇಳಿದ್ದಾರೆ. ಕರೋನಾ ವೈರಸ್ (ಕೋವಿಡ್ – 19) ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಹಲವು ನಿರ್ಬಂಧಗಳಿರುವುದರಿಂದ, ನಮ್ಮ ಹೆಚ್ಚಿನ ರೋಗಿಗಳು ವೈದ್ಯರೊಂದಿಗೆ ಸಮಯೋಚಿತ ಸಮಾಲೋಚನೆ ಮತ್ತು ಮರು ಸಮಾಲೋಚನೆಯಿಂದ ವಂಚಿತರಾಗಿದ್ದಾರೆ. ಈ ಸಂಗತಿಯನ್ನು ಅರಿತುಕೊಂಡು, ನಮ್ಮ ರೋಗಿಗಳಿಗೆ ಸಮಾಲೋಚನೆ ಮತ್ತು […]