udupixpress
Home Trending ಉಡುಪಿ: 11 ಮಂದಿ ಕೊರೊನಾ ಶಂಕಿತರು ಪತ್ತೆ: ಆಸ್ಪತ್ರೆಗೆ ದಾಖಲು

ಉಡುಪಿ: 11 ಮಂದಿ ಕೊರೊನಾ ಶಂಕಿತರು ಪತ್ತೆ: ಆಸ್ಪತ್ರೆಗೆ ದಾಖಲು

ಉಡುಪಿ: ಜಿಲ್ಲೆಯಲ್ಲಿ ಇಂದು 11 ಮಂದಿ ಕೊರೊನಾ ಶಂಕಿತರು ಪತ್ತೆಯಾಗಿದ್ದು, ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.
11 ಮಂದಿ ಶಂಕಿತರ ಪೈಕಿ 8 ಮಂದಿ ವಿದೇಶದಿಂದ ಮರಳಿದ್ದು, ಉಳಿದ ಮೂವರು ವಿದೇಶ ಪ್ರಯಾಣ ಮಾಡದವರಾಗಿದ್ದಾರೆ. ನಾಲ್ಕು ಮಂದಿಯಲ್ಲಿ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ಮತ್ತೆ ನಾಲ್ಕು ಮಂದಿ ಅವರ ಸಂಪರ್ಕದಲ್ಲಿದ್ದವರಾಗಿದ್ದಾರೆ. ಇಂದು ದಾಖಲಾದ ಶಂಕಿತರು ಸೇರಿದಂತೆ 31 ಮಂದಿಯ ವೈದ್ಯಕೀಯ ವರದಿ ಬರಲು‌ ಬಾಕಿಯಿದೆ. ಐಸೋಲೇಷನ್ ವಾರ್ಡ್ ನಿಂದ 13 ಮಂದಿ ಬಿಡುಗಡೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
error: Content is protected !!