ನಾಳೆಯಿಂದ ಉಜ್ವಲ ಗ್ಯಾಸ್ ಯೋಜನೆಯ ಫಲಾನುಭವಿಗಳಿಗೆ ಮೂರು ತಿಂಗಳು ಉಚಿತ ಗ್ಯಾಸ್

ಉಡುಪಿ: COVID-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಕೇಂದ್ರ ಸರಕಾರದ ಉಜ್ವಲ ಗ್ಯಾಸ್ ಯೋಜನೆಯ ಫಲಾನುಭವಿಗಳಿಗೆ ನಾಳೆಯಿಂದ ಪ್ರತಿ ತಿಂಗಳಿಗೆ ಒಂದು ಉಚಿತ ಗ್ಯಾಸ್ ಸಿಲಿಂಡರ್ ದೊರೆಯಲಿದೆ ಎಂದು ಉಡುಪಿ ಜಿಲ್ಲಾ ನೋಡಲ್ ಆಫೀಸರ್ ರೋಹಿತ್ ಹೇಳಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 28,000 ಜನರಿಗೆ ಈ ಸೌಲಭ್ಯ ದೊರೆಯಲಿದೆ. ಉಜ್ವಲ ಗ್ಯಾಸ್ ಫಲಾನುಭವಿಗಳ ಖಾತೆಗೆ ನಾಳೆ ಒಂದು ಸಿಲಿಂಡರ್ ನ ಹಣ ಜಮೆ ಆಗಲಿದೆ . ಆ ಹಣವನ್ನು ವಿತರಕರಿಗೆ ನೀಡಿ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಈ ಉಚಿತ ಗ್ಯಾಸ್ […]

ದೆಹಲಿಯ ನಿಜಾಮುದ್ದೀನ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಉಡುಪಿ ಜಿಲ್ಲೆಯಿಂದ ಯಾರು ಭಾಗವಹಿಸಿಲ್ಲ: ಡಿಸಿ ಸ್ಪಷ್ಟನೆ

ಉಡುಪಿ: ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಈಚೆಗೆ ನಡೆದ ಧಾರ್ಮಿಕ ಸಭೆಯಲ್ಲಿ ಉಡುಪಿ ಜಿಲ್ಲೆಯಿಂದ ಯಾರು ಕೂಡ ಭಾಗವಹಿಸಿಲ್ಲ ಎಂದು ಜಿಲ್ಲಾಧಿಕಾರಿ ಜಿ.‌ ಜಗದೀಶ್ ಸ್ಪಷ್ಟ ಪಡಿಸಿದ್ದಾರೆ. ಟಿವಿ ಮಾಧ್ಯಮಗಳಲ್ಲಿ ಜಿಲ್ಲೆಯಿಂದ 16 ಮಂದಿ ಭಾಗವಹಿಸಿದ್ದಾರೆ ಎಂಬ ಸುದ್ದಿ ಬರುತ್ತಿದ್ದು, ಇದು ಸಂಪೂರ್ಣ ಸುಳ್ಳಾಗಿದೆ. ಹಾಗಾಗಿ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಸಿ ತಿಳಿಸಿದ್ದಾರೆ.

ದೇಶದಲ್ಲಿ 50 ಕ್ಕೇರಿದ ಮೃತರ ಸಂಖ್ಯೆ: ಮಹಾರಾಷ್ಟ್ರದಲ್ಲಿ ಇನ್ನೊಂದು‌ ಸಾವು

ದೇಶ: ಬುಧವಾರ ಮಹಾರಾಷ್ಟ್ರದಲ್ಲಿ ಸೋಂಕಿತರೊಬ್ಬರು ಸಾವಿಗೀಡಾಗಿದ್ದು, ಇದೀಗ ದೇಶದಲ್ಲಿ ಕೋವಿಡ್‌–19ನಿಂದಾಗಿ ಮೃತಪಟ್ಟವರ ಸಂಖ್ಯೆ 50ಕ್ಕೇರಿದೆ.  ಇದರಿಂದ ಮಹಾರಾಷ್ಟ್ರದಲ್ಲಿ ಸಾವಿಗೀಡಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಹಾಗೂ 18 ಸೋಂಕು ಪ್ರಕರಣಗಳು ವರದಿಯಾಗಿದೆ.ಒಟ್ಟು ಸೋಂಕು ಪ್ರಕರಣಗಳು 320 ತಲುಪಿದೆ. ಈ ಮೂಲಕ ದೇಶದಾದ್ಯಂತ ಒಟ್ಟು ಸೋಂಕು ಪ್ರಕರಣಗಳು 1,500 ದಾಟಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 102 ಕ್ಕೇರಿದೆ.