udupixpress
Home Trending ಕೊರೊನ ಹರಡಿದ ನಿಝಾಮುದ್ದೀನ್ ಮುಸ್ಲಿಂ ಧಾರ್ಮಿಕ ಸಮಾವೇಶ: ದ.ಕ.ಜಿಲ್ಲೆಯಿಂದ 21 ಮಂದಿ ಭಾಗಿ

ಕೊರೊನ ಹರಡಿದ ನಿಝಾಮುದ್ದೀನ್ ಮುಸ್ಲಿಂ ಧಾರ್ಮಿಕ ಸಮಾವೇಶ: ದ.ಕ.ಜಿಲ್ಲೆಯಿಂದ 21 ಮಂದಿ ಭಾಗಿ

ಮಂಗಳೂರು: ದೇಶವನ್ನೇ ಬೆಚ್ಚಿಬೀಳಿಸುವಂತೆ ಕೊರೊನ‌ ವೈರಸ್ ಹರಡುವಿಕೆಗೆ ಕಾರಣವಾದ ದೆಹಲಿ ನಿಝಾಮುದ್ದೀನ್ ನಲ್ಲಿ ನಡೆದ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 21 ಮಂದಿ ಭಾಗಿಯಾಗಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.
ಈ‌ ಬಗ್ಗೆ ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದ್ದು, 21 ಮಂದಿಯನ್ನೂ ಸಂಪರ್ಕಿಸಲಾಗಿದೆ. ಎಲ್ಲರನ್ನೂ ಆಸ್ಪತ್ರೆಯ ಐಸೋಲೇಷನ್ ವಿಭಾಗ ದಾಖಲಿಸಲಾಗಿದೆ ಎಂದು ತಿಳಿಸಿದೆ.
ಎಲ್ಲರ ಮೇಲೂ ನಿಗಾ ಇಡಲಾಗಿದ್ದು, ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಎಲ್ಲರ ಗಂಟಲಿನ  ದ್ರವ ಪರೀಕ್ಷೆಯನ್ನು ಆರೋಗ್ಯ ಇಲಾಖೆ ನಡೆಸಿದೆ.
ಈ ಪ್ರಕರಣದ ಕುರಿತು ಪರಿಶೀಲನೆ ಮುಂದುವರಿಸಲಾಗಿದೆ ಎಂದು ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.
error: Content is protected !!