ಮಾನಸಿಕ ಕಾಯಿಲೆ ದೇವರ ಶಾಪ, ಭೂತಗಳ ಉಪದ್ರದಿಂದ ಬರದು: ಡಾ.ಪಿ.ವಿ.ಭಂಡಾರಿ
ಉಡುಪಿ: ಮೆದುಳಿನಲ್ಲಿ ಆಗುವ ರಾಸಾಯನಿಕ ಬದಲಾವಣೆಗಳಿಂದ ಮನುಷ್ಯನಿಗೆ ಮಾನಸಿಕ ಕಾಯಿಲೆ ಬರುತ್ತದೆಯೇ ಹೊರತು, ಯಾವುದೇ ದೇವರ ಶಾಪ, ಭೂತಗಳ ಉಪದ್ರದಿಂದ ಬರುವುದಿಲ್ಲ ಎಂದು ಮನೋರೋಗ ತಜ್ಞ ಡಾ. ಪಿ.ವಿ. ಭಂಡಾರಿ ಹೇಳಿದರು. ಬೀಯಿಂಗ್ ಸೋಶಿಯಲ್ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಕೂತು ಮಾತನಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನಸಿಕ ಕಾಯಿಲೆ ಬಗ್ಗೆ ಹಲವಾರು ಅಪನಂಬಿಕೆಗಳಿವೆ. ಇಂದು ಶಿಕ್ಷಣಕ್ಕೂ ಮೂಢನಂಬಿಕೆಗೂ ಹೆಚ್ಚು ವ್ಯತ್ಯಾಸ ಇಲ್ಲ. ಯಾಕೆಂದರೆ ಇಂದು […]
ಫೆ.24: ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ-ಸಂಕಲ್ಪ ಸಮಾವೇಶ
ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಪದಗ್ರಹಣ ಸಮಾರಂಭ ಹಾಗೂ ಸಂಕಲ್ಪ ಸಮಾವೇಶ ಫೆ. 24ರಂದು ಸಂಜೆ 4 ಗಂಟೆಗೆ ಉಡುಪಿ ಕಿದಿಯೂರು ಹೋಟೆಲ್ ಶೇಷಶಯನ ಸಭಾಂಗಣದಲ್ಲಿ ನಡೆಯಲಿದೆ. ಕಡಿಯಾಳಿ ಬಿಜೆಪಿ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಅಂದು 3.30ಕ್ಕೆ ಹಳೆಯ ಡಯಾನ್ ಸರ್ಕಲ್ನಿಂದ ಕಿದಿಯೂರು ಹೋಟೆಲ್ವರೆಗೆ ಮೆರವಣಿಗೆ ಜರುಗಲಿದೆ. ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ […]
ವೃಂದ ಮತ್ತು ನೇಮಕಾತಿ ನಿಯಮ ತುರ್ತು ತಿದ್ದುಪಡಿ: ಪದವೀಧರ ಶಿಕ್ಷಕರಿಗೆ ಹಿಂದಿನಂತೆ ಪಾಠದ ಅವಕಾಶ ಕಲ್ಪಿಸಲು ಸಚಿವರ ಜತೆ ಚರ್ಚೆ
ಉಡುಪಿ: ವೃಂದ ಮತ್ತು ನೇಮಕಾತಿ ನಿಯಮ (ಸಿಆ್ಯಂಡ್ಆರ್)ಕ್ಕೆ ತುರ್ತು ತಿದ್ದುಪಡಿ ತಂದು ಪದವೀಧರ ಶಿಕ್ಷಕರಿಗೆ ಹಿಂದಿನಂತೆ 1ರಿಂದ 8ನೇ ತರಗತಿಯವರೆಗೆ ಪಾಠ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಶೀಘ್ರವೇ ಚರ್ಚೆ ನಡೆಸಲಾಗುವುದು ಎಂದು ಮುಜರಾಯಿ ಮತ್ತು ಮೀನುಗಾರಿಕೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ವತಿಯಿಂದ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಪದವೀಧರ ಶಿಕ್ಷಕರ […]
ತುಮಕೂರು: ಕಾಲು ಜಾರಿ ಬಾವಿಗೆ ಬಿದ್ದು ಪತ್ರಕರ್ತ ರೋಹಿತ್ ಸಾವು
ತುಮಕೂರು: ರಜೆ ಕಳೆಯಲು ಊರಿಗೆ ತೆರಳಿದ್ದ ಪತ್ರಕರ್ತ ರೋಹಿತ್(36) ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಇಲ್ಲಿನ ಕ್ಯಾತ್ಸಂದ್ರ ಸಮೀಪದ ಸದರನಹಳ್ಳಿಯಲ್ಲಿ ತೋಟವೊಂದರ ಬಾವಿಯಲ್ಲಿ ಈಜಲು ತೆರಳಿದ್ದಾಗ ಘಟನೆ ಸಂಭವಿಸಿದೆ. ರೋಹಿತ್ ಟೈಮ್ಸ್ ಆಫ್ ಇಂಡಿಯಾ ವರದಿಗಾರರಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ರಜೆ ಇದ್ದ ಕಾರಣಕ್ಕೆ ತಮ್ಮ ತಂದೆಯ ಊರಾದ ಸದರನಹಳ್ಳಿಗೆ ಬಂದಿದ್ದರು. ಸ್ನೇಹಿತರೊಂದಿಗೆ ತಮ್ಮ ತೋಟದ ಬಾವಿಯಲ್ಲಿ ಈಜಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ. ಈ ವೇಳೆ ಬಾವಿಯ […]
ಪರ್ಲ್ ವುಡ್ ಕ್ರಾಫ್ಟ್ ಶೋ ರೂಂ ಉದ್ಘಾಟನೆ
ಹಿರಿಯಡ್ಕ: ಉಡುಪಿಯ ಪ್ರತಿಷ್ಠಿತ ಅಲಂಕಾರಿಕ ಹಾಗು ಗೃಹೋಪಯೊಗಿ ವಸ್ತುಗಳ ಸಂಸ್ಥೆ ಯಾದ ಪರ್ಲ್ ವುಡ್ ಕ್ರಾಫ್ಟ್ ಶೋ ರೂಂ ನ ಉದ್ಘಾಟನೆ ಇತ್ತೀಚೆಗೆ ಹಿರಿಯಡ್ಕದ ಮುತ್ತೂರು ಕ್ರಾಸ್ ಬಳಿಯ ಶೋರೂಂ ನಲ್ಲಿ ನಡೆಯಿತು. ಮಣಿಪಾಲದ ಮಾಹೆ ಯ ಸಹಕುಲಾಧಿಪತಿ ಡಾ. ಎಚ್ ಎಸ್ .ಬಲ್ಲಾಳ್ ಶೋಂರೂಂ ಉದ್ಘಾಟಿಸಿ ಶುಭ ಹಾರೈಸಿದರು. ಮಾಹೆಯ ವಿದ್ಯಾರ್ಥಿಗಳ ಕ್ಷೇಮಪಾಲನ ನಿರ್ದೇಶಕಿ ಗೀತಾಮಯ್ಯ, ಎಂ. ಐ.ಟಿ.ಯ ನಿರ್ದೇಶಕ ಡಾ. ಶ್ರೀಕಾಂತ್ ರಾವ್ , ಪಬ್ಲ ಗಾರ್ಡನ್ಸ್ ನ ಪ್ರವರ್ತಕ ಡಾ. ಸುರ್ಜಿತ್ ಸಿಂಗ್ ಪಬ್ಲ […]