ಪರ್ಲ್ ವುಡ್ ಕ್ರಾಫ್ಟ್ ಶೋ ರೂಂ ಉದ್ಘಾಟನೆ

ಹಿರಿಯಡ್ಕ: ಉಡುಪಿಯ ಪ್ರತಿಷ್ಠಿತ ಅಲಂಕಾರಿಕ ಹಾಗು ಗೃಹೋಪಯೊಗಿ ವಸ್ತುಗಳ ಸಂಸ್ಥೆ ಯಾದ ಪರ್ಲ್ ವುಡ್ ಕ್ರಾಫ್ಟ್ ಶೋ ರೂಂ ನ  ಉದ್ಘಾಟನೆ ಇತ್ತೀಚೆಗೆ  ಹಿರಿಯಡ್ಕದ ಮುತ್ತೂರು ಕ್ರಾಸ್ ಬಳಿಯ ಶೋರೂಂ ನಲ್ಲಿ ನಡೆಯಿತು.
ಮಣಿಪಾಲದ ಮಾಹೆ ಯ ಸಹಕುಲಾಧಿಪತಿ ಡಾ. ಎಚ್ ಎಸ್ .ಬಲ್ಲಾಳ್  ಶೋಂರೂಂ ಉದ್ಘಾಟಿಸಿ ಶುಭ ಹಾರೈಸಿದರು.
ಮಾಹೆಯ ವಿದ್ಯಾರ್ಥಿಗಳ ಕ್ಷೇಮಪಾಲನ ನಿರ್ದೇಶಕಿ ಗೀತಾಮಯ್ಯ, ಎಂ. ಐ.ಟಿ.ಯ ನಿರ್ದೇಶಕ ಡಾ. ಶ್ರೀಕಾಂತ್ ರಾವ್ , ಪಬ್ಲ ಗಾರ್ಡನ್ಸ್ ನ ಪ್ರವರ್ತಕ ಡಾ. ಸುರ್ಜಿತ್ ಸಿಂಗ್ ಪಬ್ಲ , ಸಂಸ್ಥೆಯ ವ್ಯವಸ್ಥಾಪಕ ರಾದ ಕಾಂತರಾಜ್, ನರೆಂದರ್ ಸಿಂಗ್, ಮಹೇಶ್ ಆಚಾರ್ಯ, ರಿಷಿ ಜೈನ್, ಸುಂದರ ರಾವ್ ,ದೀಕ್ಷಾ ಬೊರ್ಕರ್ ಮೊದಲಾದವರು ಉಪಸ್ಥಿತರಿದ್ದರು.
ಶೋರೂಂನಲ್ಲಿ  ವುಡನ್, ಸ್ಟೀಲ್, ಕಬ್ಬಿಣದ ಫರ್ನಿಚರ್- ಸೋಫಾ, ಬೆಡ್, ಟೇಬಲ್, ವಾರ್ಡ್‌ರೋಬ್, ಕಪಾಟು, ಡೈನಿಂಗ್ ಟೇಬಲ್, ಚೇರ್ಸ್‌, ಅಲ್‌ಮೈರಾಗಳು-ಲಿವಿಂಗ್, ಕಿಚನ್, ಡೈನಿಂಗ್, ಬೆಡ್‌ರೂಮ್‌ಗಳಿಗೆ ವಿವಿಧ ಶ್ರೇಣಿಗಳಲ್ಲಿ ಹಾಗೂ ಬೇಕಾದ ಗಾತ್ರಗಳಲ್ಲಿ ಲಭಿಸಲಿವೆ. ಆಕರ್ಷಕ ಇಂಟೀರಿಯರ್ಸ್‌ ಸಲಹೆ ಮತ್ತು ಸಾಮಾಗ್ರಿಗಳು, ಮ್ಯಾಟ್ರೆಸ್‌ಗಳು ಲಭ್ಯವಿದ್ದು, ಆಫೀಸ್ ಮತ್ತು ಕಛೇರಿಗಳ ಶೃಂಗಾರಕ್ಕೆ ಯಾವುದೇ ಸಾಮಗ್ರಿಗಳು  ಗಟ್ಟಿಮುಟ್ಟಾದ ಹಾರ್ಡ್‌ವುಡ್ ಹಾಗೂ ಪ್ರಿಲ್ಯಾಮ್ ಬೋರ್ಡ್ ಫರ್ನಿಚರ್, ವಾರ್ಡ್‌ರೋಬ್, ಬೆಡ್‌ರೂಂ ಸೆಟ್, ಮೊಡ್ಯುಲರ್ ಕಿಚನ್, ಕಚೇರಿ ಪೀಠೋಪಕರಣಗಳು ಮತ್ತು ಸಾಮಗ್ರಿಗಳು ದೊರೆಯಲಿವೆ. ಅತ್ಯುತ್ತಮ ಇಂಟೀರಿಯರ್ ಕೆಲಸಗಳಿಗಾಗಿ ಗ್ರಾಹಕರು ಶೋರೂಂಗೆ ಭೇಟಿ ನೀಡಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.